Advertisement

Ganesh Chaturthi: ಸಂಬಂಧವನ್ನು ಗಟ್ಟಿಗೊಳಿಸುವ ಗಣೇಶ ಚತುರ್ಥಿ

03:37 PM Sep 17, 2023 | Team Udayavani |

ಗಣೇಶ ಚತುರ್ಥಿ ಹಬ್ಬ ಹಿಂದುಗಳ ಒಂದು ಪ್ರಮುಖ ಹಬ್ಬ. ವಿನಾಯಕ ಚತುರ್ಥಿ ಸಾಂಸ್ಕೃತಿಕವಾಗಿ ಮತ್ತು ಧಾರ್ಮಿಕವಾಗಿ ತುಂಬಾ ಮಹತ್ವವನ್ನು ಪಡೆದುಕೊಂಡಿದೆ. ಇದನ್ನು ಭಾರತದಲ್ಲಿ 10ದಿನಗಳ ಕಾಲ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ಹಬ್ಬ ಅದೃಷ್ಟದ ಅಧಿನಾಯಕನಾದ ನಮ್ಮ ಮೂಷಿಕ ವಾಹನದ ಜನನವನ್ನು ಸಾರುವ ಹಬ್ಬ. ಈ ಹಬ್ಬವನ್ನು ವಿನಾಯಕನ ಚತುರ್ಥಿ ಅಥವಾ ಗಣೇಶ ಚತುರ್ಥಿ ಇಲ್ಲವೇ ಚೌತಿ ಎಂದು ಸಹ ಕರೆಯುತ್ತಾರೆ.

Advertisement

ಗಣೇಶನ ಹಬ್ಬ ಆರಂಭಗೊಳ್ಳಲು ಹಲವಾರು ಕತೆಗಳ ಹಿನ್ನಲೆಯಿದೆ. ತಂದೆ ಶಿವನಿಂದ ತುಂಡರಿಸಲ್ಪಟ್ಟ ಗಣೇಶನ ಮುಖದ ಜಾಗದಲ್ಲಿ ಆನೆಯ ಮುಖವನ್ನು ಸೇರಿಸಲಾಯಿತು. ಈ ಮೂಲಕ ಗಣೇಶನೂ ಗಜಾನನ ಅದನು. ಗಣೇಶನನ್ನು ಹೇರಂಬ, ಗಣಪತಿ, ಏಕದಂತ, ವಿನಾಯಕ ಮುಂತಾದ ಹೆಸರುಗಳಿಂದ ಕರೆಯುತ್ತಾರೆ. ಗಣಪತಿಯ ಪೂಜೆ ಅನಾದಿ ಕಾಲದಿಂದಲೂ ನಡೆದು ಬಂದಿದೆ. ಆನೆಗಳ ಹಿಂಡು ಹೊಲ, ಗದ್ದೆ ಮತ್ತು ತೋಟಗಳಿಗೆ ನುಗ್ಗಿ ಬೆಳೆ ಹಾಳುಮಾಡುವುದನ್ನು ತಡೆಯಲು ರೈತರು ಆನೆಯ ಮುಖವುಳ್ಳ ದೇವನನ್ನು ಪೂಜಿಸಿದರೆ ಹಾಗೂ ದಾನ್ಯಗಳು, ಕಾಳು ಮತ್ತು ಬೆಳೆಗಳನ್ನು ತಿಂದು ಹಾಳುಮಾಡುವ ಇಲಿಗಳನ್ನು ಪೂಜಿಸಿ ಇಬ್ಬರನ್ನು ಸಮಾಧಾನಿಸುವುದು ಹಬ್ಬದ ಹಲವಾರು ನಂಬಿಕೆ.

ಇನ್ನೂ ಗಣಪತಿಯನ್ನು ಭಕ್ತರು ತಮ್ಮ ಮನೆಗಳಿಗೆ ಏಕದಂತನನ್ನು ಸಂಭ್ರಮ ಸಡಗರದಿಂದ ತಂದು ಕೂರಿಸಿ ವಿನಾಯಕನ ಚತುರ್ಥಿ ಪೂಜೆ ಮತ್ತು ವ್ರತಗಳನ್ನು ಮಾಡಲಾಗುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿಯೂ ಗಣೇಶನನ್ನು ಪ್ರತಿಷ್ಠಾಪಿಸುತ್ತಾರೆ. ಕೆಲವರು ಐದು ದಿನಗಳವರೆಗೆ ಪ್ರತಿಷ್ಠಾಪಿಸಿ ಪೂಜಿಸಿದರೆ ಇನ್ನೂ ಕೆಲವರು ಹತ್ತು, ಹನ್ನೊಂದು ದಿನಗಳವರೆಗೆ ಇಟ್ಟು ಪೂಜಿಸುತ್ತಾರೆ. ಏಕದಂತನಿಗೆ ಇಷ್ಟವಾದ ಮೋದಕವನ್ನು ನೈವೇದ್ಯ ವಾಗಿ ಅರ್ಪಿಸುತ್ತಾರೆ. ನಂತರ ಸಂಭ್ರಮ ಸಡಗರದಿಂದ ಹಾಡು, ನೃತ್ಯ ಮಾಡುತ್ತ ಗಣೇಶನನ್ನು ಮೆರವಣಿಗೆ ಮಾಡಿ ನದಿಯಲ್ಲಿ ಮುಳುಗಿಸುತ್ತಾರೆ.

ಹಬ್ಬ ಒಂದೇ ಆಗಿದ್ದರೂ, ಒಂದೇ ಅರ್ಥ ಹೊಂದಿದ್ದರೂ ಪ್ರತಿಯೊಂದು ಪ್ರದೇಶದಲ್ಲಿ ಆಚರಿಸುವ ವಿಧಾನ ಬೇರೆ ಬೇರೆ ವ್ಯತ್ಯಾಸವಿರುತ್ತದೆ. ಹೀಗೆ ಹಬ್ಬ ಹರಿದಿನಗಳು ಎಂದು ಬಂದಾಗ ಸಂಬಂಧವನ್ನು ಗಟ್ಟಿಗೊಳಿಸುತ್ತದೆ.

ಕೃಪಾ ಹೆಚ್. ಜೆ

Advertisement

ಎಂ ಜಿ ಎಂ ಕಾಲೇಜು

ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next