Advertisement
ಹಿಂದಿನ ವರ್ಷಗಳಿಗೆ ಹೋಲಿಸಿದರೆ ಹೂವು, ಹಣ್ಣು ಹಾಗೂ ತರಕಾರಿ ಬೆಲೆ ನಿಯಂತ್ರಣದಲ್ಲೇ ಇದ್ದು, ಶನಿವಾರ ಕೆ.ಆರ್.ಮಾರುಕಟ್ಟೆಯಲ್ಲಿ ಗ್ರಾಹಕರು ಕೆ.ಜಿ.ಗಟ್ಟಲೆ ಹೂ-ಹಣ್ಣುಗಳನ್ನು ಖರೀದಿಸುತ್ತಿದ್ದ ದೃಶ್ಯಗಳು ಕಂಡು ಬಂದವು. ಹಬ್ಬದ ನಿಮಿತ್ತ ನಗರದ ಮಲ್ಲೇಶ್ವರ, ಬಸವನಗುಡಿ, ಇತರೆ ಮಾರುಕಟ್ಟೆಯಲ್ಲಿ ಸಾಮಾನ್ಯ ದಿನಗಳಿಗಿಂತ ಹೆಚ್ಚಿನ ಜನದಟ್ಟಣೆ ಕಂಡು ಬಂತು. ಗೌರಿ, ಗಣೇಶನ ಮೂರ್ತಿಗಳ ಖರೀದಿ ಜತೆಗೆ ಹಬ್ಬಕ್ಕೆ ಬೇಕಾದ ಪದಾರ್ಥಗಳನ್ನು ಜನ ಖರೀದಿಸಿದರು.
Related Articles
Advertisement
ಸೇವಂತಿ 40-50 ರೂ.
ಚೆಂಡು ಹೂ 25 ರೂ.
ಮಲ್ಲಿಗೆ 600-800 ರೂ.
ಸುಗಂಧರಾಜ 250 ರೂ.
ಕನಕಾಂಬರ 600 ರೂ.
ಹಣ್ಣು ಬೆಲೆ(ಕೆ.ಜಿ.ಗೆ)
ಏಲಕ್ಕಿ ಬಾಳೆ 90-110 ರೂ.
ಮೂಸಂಬಿ 70 ರೂ.
ದಾಳಿಂಬೆ 150 ರೂ.
ಸೇಬು 120-150 ರೂ.
ಸೀಬೆ ಹಣ್ಣು 50 ರೂ.
ರೈ ತರು ವರಮಹಾ ಲಕ್ಷ್ಮೀ ಹಬ್ಬದ ದೃಷ್ಟಿ ಇಟ್ಟುಕೊಂಡು ಹೂ ಬೆಳೆದಿ ದ್ದರು. ಮಳೆ ಇಲ್ಲದ ಕಾರಣ ಸರಿಯಾದ ಫಸಲು ಬರಲಿಲ್ಲ. ವಾರದಿಂದಲೂ ಎಲ್ಲೆಡೆ ಮಳೆ ಯಾದ ಕಾರಣ ನಿರೀಕ್ಷೆಗೂ ಮೀರಿ ಹೂ ಮಾರುಕಟ್ಟೆಗೆ ಬರುತ್ತಿದೆ. ಇದರಿಂದ ಬೆಲೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಹಬ್ಬದಲ್ಲಿ ಹೂ ಇಷ್ಟು ಕಡಿಮೆ ಬೆಲೆಗೆ ಮಾರಾಟವಾಗುತ್ತಿರುವುದು ಗ್ರಾಹಕರಲ್ಲಿ ಖುಷಿ ತಂದಿದೆ.-ದಿವಾಕರ್, ಅಧ್ಯಕ್ಷ, ಕೆ.ಆರ್. ಮಾರುಕಟ್ಟೆ ಸಗಟು ಹೂ ಮಾರಾಟಗಾರರ ಸಂಘ.
–ಭಾರತಿ ಸಜ್ಜನ್