Advertisement

ಕಲಾವಿದರ ತಂಡಕ್ಕೆ ಉತ್ಸಾಹ ನೀಡದ ವಿನಾಯಕ ಚತುರ್ಥಿ

03:10 PM Sep 08, 2021 | Team Udayavani |

ಬೆಂಗಳೂರು: ಬೀದಿಗಳಲ್ಲಿ ಗಣೇಶ ಪ್ರತಿಷ್ಠಾಪನೆಗೆ ಕೊನೆಗೂ ಅವಕಾಶದಕ್ಕಿತು. ಆದರೆ, ಕುಟುಂಬ ನಿರ್ವಹಣೆಗೆ ಆ ಗಣೇಶ ಉತ್ಸವ
ವನ್ನೇ ಅವಲಂಬಿಸಿದ ಸಾವಿರಾರು ಕಲಾವಿದರು ಮಾತ್ರ ಸತತ ಮೂರನೇ ವರ್ಷವೂ ಅವಕಾಶ ವಂಚಿತವಾದರು!

Advertisement

ಗಣೇಶ ಉತ್ಸವ ಸಂಸ್ಕೃತಿಯ ಪರಂ ಪರೆಯ ಜತೆಗೆ ಸಾವಿರಾರು ಕುಟುಂಬಗಳ ಜೀವನಾಧಾರವೂ ಆಗಿದೆ. ಈ ಹಿನ್ನೆಲೆಯಲ್ಲಿ ವಾರ್ಡ್‌ಗೊಂದು ಹಾಗೂ ಮನೆ-ಮನೆ ಗಣೇಶನ ಪ್ರತಿಷ್ಠಾಪನೆಗೆ ಸರ್ಕಾರ ಅನುಮತಿ ನೀಡುವ ಮೂಲಕ ತಕ್ಕಮಟ್ಟಿಗೆ ತಯಾರಕರು ಮತ್ತು ಮಾರಾಟಗಾರರಿಗೆ ಅನುಕೂಲ ಆಗಿದೆ.ಇದರೊಂದಿಗೆ ಸೀಜನ್‌ನಲ್ಲಿ ತುಸು ಸಂಪಾದನೆಗೆ ಅನುವು ಮಾಡಿಕೊಟ್ಟಂತಾಗಿದೆ. ಆದರೆ, ಗಣೇಶನೊಂದಿಗೇ ಮನರಂಜನೆ, ಮೆರವಣಿಗೆ, ಅಲಂಕಾರ ಸೇರಿದಂತೆ ಹತ್ತಾರು ಕಲಾವಿದರ ತಂಡಗಳು ಕೂಡ ಬರುತ್ತಿದ್ದವು. ಅವರೆಲ್ಲರಿಗೂ ಈ ಉತ್ಸವವು ಪ್ರಮುಖ ದುಡಿಮೆ ಸೀಜನ್‌ ಆಗಿತ್ತು. ಆದರೆ, ಕೋವಿಡ್‌ ಸರಪಳಿಯೊಂದಿಗೆ “ಉತ್ಸವದ ಸರಪಳಿ’ ಕೂಡ ತುಂಡರಿಸಲಾಗಿದೆ.

ಆರ್ಕೆಸ್ಟ್ರಾ, ಡಿಜೆ ಸೆಟ್‌ಗಳು, ತಮಟೆ ತಂಡಗಳು, ಬ್ಯಾಂಡ್‌ ಸೆಟ್‌ಗಳ ಕಲಾವಿದರು ತಮ್ಮ ಪ್ರತಿಭೆ ಅನಾವರಣದೊಂದಿಗೆ 3-4 ತಿಂಗಳು
ಕುಟುಂಬ ನಿರ್ವಹಣೆಗೆ ಸಾಕಾಗುವಷ್ಟುಗಳಿಕೆ ಹಬ್ಬದ ಸೀಜನ್‌ನಲ್ಲಿ ಆಗುತ್ತಿತ್ತು. ಗಣೇಶ ಉತ್ಸವದೊಂದಿಗೆ ಅದು ಆರಂಭಗೊಂಡು, ಕನ್ನಡ
ರಾಜ್ಯೋತ್ಸವದ ಆಚರಣೆಯೊಂದಿಗೆ ಮುಕ್ತಾಯ ಆಗುತ್ತಿತ್ತು. ಗಳಿಕೆಯೂ ಆಗುತ್ತಿತ್ತು. ಈಗ ಸರಳ ಆಚರಣೆಯೊಂದಿಗೆ ನಮ್ಮ ಬದುಕು ಸಪ್ಪೆಯಾಗಿದೆ. ಒಂದಲ್ಲ, ಎರಡಲ್ಲ ಸತತ ಮೂರನೇ ವರ್ಷ ಈ ನಿರ್ಬಂಧದ ಹೊರೆ ಹೇರಲಾಗುತ್ತಿದೆ. ಯಾಕೆ ಈ ತಾರತಮ್ಯ? ಸರ್ಕಾರದ ನಿಯಮ ನಮಗೆ ಉರುಳಾಗುತ್ತಿವೆ ಎನ್ನುತ್ತಾರೆ ಕಲಾವಿದರು.

ಇದನ್ನೂ ಓದಿ:ಅನುಶ್ರೀ ಜೈಲಿಗೆ ಹೋಗುವುದು ಪಕ್ಕಾ : ಪ್ರಶಾಂತ್ ಸಂಬರಗಿ

20-25 ಕಾರ್ಯಕ್ರಮ ಕವರ್‌ ಆಗುತ್ತಿತ್ತು!: “ನಾನು ಹತ್ತು ವರ್ಷಗಳಿಂದ ಆರ್ಕೆಸ್ಟ್ರಾ ತಂಡ ನಡೆಸುತ್ತಿದ್ದೇನೆ. ಪ್ರತಿ ವರ್ಷ ಗಣೇಶ ಚತುರ್ಥಿ ಮತ್ತು ಕನ್ನಡ ರಾಜ್ಯೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬೇಡಿಕೆಗಳು ಬರುತ್ತಿದ್ದವು.

Advertisement

ಗಣೇಶ ಉತ್ಸವದಲ್ಲಿ ಕನಿಷ್ಠ 20ರಿಂದ 25 ಕಾರ್ಯ ಕ್ರಮಗಳನ್ನು ನಮ್ಮ ತಂಡ ಕವರ್‌ ‌ ಮಾಡುತ್ತಿತ್ತು. ಒಂದೊಂದು ಕಾರ್ಯಕ್ರಮಕ್ಕೆ 20 ಸಾವಿರದಿಂದ 40 ಸಾವಿರ ರೂ.ವರೆಗೆ ಆದಾಯ ಬರುತ್ತಿತ್ತು.ಆದರೆ,ಕಳೆದ ಮೂರು ವರ್ಷಗಳಿಂದ ಆ ದುಡಿಮೆಗೆ ಬ್ರೇಕ್‌ ಬಿದ್ದಿದೆ. ತಂಡದ ಸದಸ್ಯರೆಲ್ಲರೂ ಬೇರೆ ಬೇರೆ ಕಂಪನಿ ಅಥವಾ ಸಂಸ್ಥೆಗಳಲ್ಲಿ ಕೆಲಸ ಕಂಡು ಕೊಂಡಿದ್ದಾರೆ ಎನ್ನುತ್ತಾರೆ ಹೊಸಕೋಟೆಯ ಗಾನಾ ಸೌಂಡ್ಸ್‌ ಆಫ್ ಮ್ಯೂಸಿಕ್‌ನ ಮಂಜುನಾಥ್‌ ಗಣೇಶ ಹಬ್ಬದಂತಹ ವೇಳೆ ಆರ್ಕೆಸ್ಟ್ರಾ ವೇದಿಕೆಗಳಲ್ಲಿ ಡ್ಯಾನ್ಸ್‌, ಮ್ಯಾಜಿಕ್‌, ಮಿಮಿಕ್ರಿ, ಸ್ಟಂಟ್ಸ್‌ ಹೀಗೆ ಬೇರೆ ಬೇರೆ
ಕಲಾವಿದರೂ ಇರುತ್ತಾರೆ.

ಈ ಸಂದರ್ಭದಲ್ಲಿ ಮೈಸೂರು, ಚಾಮರಾಜನಗರ ಸೇರಿದಂತೆ ವಿವಿಧೆಡೆಯಿಂದ ಕಲಾವಿದರನ್ನು ಕರೆ ತರಲಾಗುತ್ತದೆ.ಅವಧಿ ಮತ್ತು ಕಲೆಗಳ
ಪ್ರದರ್ಶನದ ಆಧಾರದ ಮೇಲೆ ಶುಲ್ಕ ನಿಗದಿ ಪಡಿಸಲಾಗುತ್ತದೆ. ಬೆಂಗಳೂರು ಜಿಲ್ಲೆಯಲ್ಲೇ 300ಕ್ಕೂ ಅಧಿಕ ಆರ್ಕೆಸ್ಟ್ರಾ ತಂಡಗಳಿರಬಹುದು ಎಂದರು.

ಕೇಳದ ತಮಟೆ ಸದ್ದು;ಕಳೆಗುಂದಿದ ಉತ್ಸವ: “ತಮಟೆ ಸದ್ದು ಇದ್ದಾಗಲೇ ಗಣೇಶ ಉತ್ಸವ ಕಳೆ. ಆದರೆ,3 ವರ್ಷಗಳಿಂದ ಆಸದ್ದು ಕೇಳುತ್ತಿಲ್ಲ. ಇದು ನಮಗೆ ಗಳಿಕೆಯ ಸೀಜನ್‌. ನಮ್ಮ ತಂಡದಲ್ಲಿ ಸುಮಾರು 30 ಜನ ಸದಸ್ಯರಿದ್ದೇವೆ. ಎಲ್ಲರೂ ಯುವಕರಾಗಿದ್ದು, ಬಹುತೇಕರು ಕಾಲೇಜು ಶುಲ್ಕ, ವಿದ್ಯಾಭ್ಯಾಸದಂತಹ ಖರ್ಚು ನಿಭಾಯಿಸಲು ಮತ್ತು ಕುಟುಂಬ ನಿರ್ವಹಣೆಗೆ ನೆರವಾಗಲು ತಮಟೆ ಬಾರಿಸುತ್ತೇವೆ. ನಿರ್ಬಂಧ ವಿಧಿಸಿ
ದ್ದರಿಂದ ತುಂಬಾ ಸಮಸ್ಯೆ ಆಗಿದೆ. ನಾನು ಈಗ ತಮಟೆ ಪಕ್ಕಕ್ಕಿಟ್ಟು,ಬೇರೆಕೆಲಸಮಾಡುತ್ತಿರುವೆಎಂದುವೈಪಿಆರ್‌ ಕಿಂಗ್ಸ್‌ ತಮಟೆ ಆಂಡ್‌ ಈವೆಂಟ್ಸ್‌ನ ಕಾರ್ತಿಕ್‌ ರಾಜು ತಿಳಿಸುತ್ತಾರೆ.

ದುರುದ್ದೇಶ ಇಲ್ಲ; ತಜ್ಞರು ಮನೋರಂಜನಾ ಕಾರ್ಯಕ್ರಮ ಎಂದರೆ ಜನ ಸೇರುತ್ತಾರೆ. ಅದು ಪರೋಕ್ಷವಾಗಿ ಸೋಂಕಿಗೆ ಆಹ್ವಾನ ನೀಡಿದಂತಾಗುತ್ತದೆ. ಈ ಹಿನ್ನೆಲೆಯಲ್ಲಿ ನಿರ್ಬಂಧ ವಿಧಿಸಲಾಗಿದೆ ಹೊರತು, ಯಾವುದೇ ಉದ್ದೇಶಪೂರ್ವಕ ನಿರ್ಧಾರವಾಗಲಿ ಅಥವಾ
ಕಲಾವಿದರ ಹೊಟ್ಟೆ ಮೇಲೆ ಹೊಡೆಯಬೇಕು ಎಂಬ ಉದ್ದೇಶವಾಗಲಿ ಇದರ ಹಿಂದಿಲ್ಲ’ ಎಂದು ಕೋವಿಡ್‌ ತಜ್ಞರ ಸಮಿತಿಯ ಸದಸ್ಯರು ಸ್ಪಷ್ಟಪಡಿಸುತ್ತಾರೆ.

-ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next