Advertisement

ವಿಘ್ನೇಶ್ವರ ಚತುರ್ಥಿಗೂ ಕೋವಿಡ್ ವಿಘ

03:39 PM Aug 31, 2021 | Team Udayavani |

ಚನ್ನರಾಯಪಟ್ಟಣ: ಕೋವಿಡ್ ಪರಿಣಾಮ ಮನೆ ಹಾಗೂ ದೇಗುಲದಲ್ಲಿ ಹೊರತುಪಡಿಸಿ ಸಾರ್ವಜನಿಕ ‌ ಸ್ಥಳಗಳಲ್ಲಿ ಗೌರಿ-ಗಣೇಶ ಮೂರ್ತಿ ಪ್ರತಿಷ್ಟಾಪಿಸುವುದನ್ನು ನಿಷೇಧಿಸಿ ಸರ್ಕಾರವು ಆದೇಶ ಹೊರಡಿಸಿರುವುದು ಕಲಾವಿದರ ಬದುಕಿನ ಮೇಲೆ ಕಾರ್ಮೋಡ ಕವಿದಂತಾಗಿದೆ.

Advertisement

ಕೋವಿಡ್ ದಿನದಿಂದ ದಿನಕ್ಕೆ ಸಾಂಕ್ರಮಿಕ ರೋಗವಾಗಿ ಪರಿಣಮಿಸುತಿದ್ದು ಅದನ್ನು ನಿಯಂತ್ರಿಸುವ ಸಲುವಾಗಿ ಸರ್ಕಾರ ಸಾಕಷ್ಟು
ಮುನ್ನಚ್ಚರಿಕೆ ಕ್ರಮ ಜಾರಿ ಮಾಡಿದೆ. ಇನ್ನು ಮೂರನೇ ಅಲೆ ಬಗ್ಗೆ ತಜ್ಞರು ಮುನ್ಸೂಚನೆ ನೀಡಿದ್ದರಿಂದ ಹೆಚ್ಚು ಜನತೆ ಸೇರಿ ಹಬ್ಬ-ಹರಿದಿನ, ಮದುವೆ,ಜಾತ್ರೆ ಹಾಗೂ ರಥೋತ್ಸವವನ್ನು ಆಚರಣೆ ಮಾಡಬಾರದು ಎಂದು ನಿಷೇಧ ಹೇರಿಸುವುದಲ್ಲದೆ ಈಗಾಗಲೆ ತಾಲೂಕಿನ ಎಲ್ಲಾ ದೇವಾಲಗಳಿಗೆ ಸಾರ್ವಜನಿಕರ ಪ್ರವೇಶ ಮಾಡದಂತೆ ತಾಲೂಕು ಆಡಳಿತ ಆದೇಶಿಸಿದೆ.

ಶ್ರಾವಣಮಾಸ ‌ ಮೊದಲ ವಾರ ಹೊರತುಪಡಿಸಿದರೆ ನಂತರ ತಾಲೂಕಿನಲ್ಲಿ ದೇವಾಲಯಗಳಲ್ಲಿ ಪೂಜೆಯನ್ನು ಮಾಡಲಿಕ್ಕೆ ಮಾತ್ರ ಅವಕಾಶ ನೀಡಿದ್ದು ದೇವಾಲಯಕ್ಕೆ ಭಕ್ತರು ತೆರಳದಂತೆ ನಿಷೇಧ ಹೇರಿದ್ದು ಎಲ್ಲಾ ದೇವಾಲಯಗಳೂ ಬಾಗಿಲು ಹಾಕಿವೆ.ಈ ನಡುವೆ ಗಣೇಶ ಚತುರ್ಥಿ ಸಮೀಪಿಸುತ್ತಿದೆ. ಆದರೂ ನಿಯಮ ಸಡಿಲಿಕೆ ಮಾಡದ ಹಿನ್ನೆಲೆಯಲ್ಲಿ ಮೂರ್ತಿ ತಯಾರಿಕರಿಗೂ ಸಾಕಷ್ಟು ತೊಂದರೆಗೀಡಾಗುವ ಲಕ್ಷಣಗಳು ಗೋಚರವಾಗುತ್ತಿವೆ.

ಇದನ್ನೂ ಓದಿ:‌ಪ್ರತಿ ಹತ್ತು ವರ್ಷಕ್ಕೊಮ್ಮೆ ಜಾತಿವಾರು ಜನಗಣತಿ ನಡೆಸಬೇಕು: ಸಿದ್ದರಾಮಯ್ಯ

ತಾಲೂಕಿನಲ್ಲಿ ಹಲವು ಕುಟುಂಬಗಳು ಗೌರಿ-ಗಣೇಶ ಮೂರ್ತಿ ತಯಾರಿಕೆಯನ್ನೇ ವೃತ್ತಿಯಾಗಿಸಿಕೊಂಡಿವೆ. 6 ತಿಂಗಳಿನಿಂದ ಮೂರ್ತಿ
ತಯಾರಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇಂತಹ ಆನೇಕ ಕುಟುಂಬಗಳು ಈಗಾಗಲೇ ಸಂಕಷ್ಟಕ್ಕೆ ಸಿಲುಕಿವೆ. ಸಾಕಷ್ಟು ಬಂಡವಾಳ ಹಾಕಿಕೊಂಡು ಹೆಚ್ಚಿನ ಲಾಭದ ನಿರೀಕ್ಷೆಯಲ್ಲಿದ್ದ ಕಲಾವಿದರಿಗೆ ಕೋವಿಡ್  ಕಳೆದ 2 ವರ್ಷದಿಂದ ನಿರಾಸೆಯುಂಟುಮಾಡಿದೆ.

Advertisement

ಪ್ರತಿ ವರ್ಷವೂ ಸಾವಿರಾರು ವಿಘ್ನೇಶ್ವರ ಮೂರ್ತಿ ತಯಾರು ಮಾಡುವಕಲಾವಿದರು ಪ್ರಸಕ್ತ ವರ್ಷ 500ರಿಂದ ಸಾವಿರ ಮೂರ್ತಿಗೆ ಸೀಮಿತಗೊಳಿಸಿದ್ದಾರೆ. ಆದರೂ, ಹಬ್ಬ ಒಂದುವಾರ ಇರುವಾಗಲೂ ಮೂರ್ತಿಯನ್ನು ಯಾರೂ ಮುಂಗಡವಾಗಿ ಕಾಯ್ದಿರಿಸಿಲ್ಲ, ಕೊರೊನಾಕ್ಕೂ ಮೊದಲು ಒಂದು ಅಥವಾ ಎರಡು ತಿಂಗಳ ಹಿಂದೆ ಮೂರ್ತಿ ತಯಾರಿಕೆ ಮಾಡುವವರನ್ನು ಭೇಟಿ ಮಾಡಿ ತಮಗೆ ಇಷ್ಟವಾಗುವ ರೀತಿಯಲ್ಲಿ ಮೂರ್ತಿ ತಯಾರು ಮಾಡಿಕೊಡುವಂತೆ ಬೇಡಿಕೆ ಇಡುತ್ತಿದ್ದರು. ಆದರೆ, ಈ ಬಾರಿ ಗ್ರಾಹಕರೂ ಸುಳಿಯುತ್ತಿಲ್ಲ ಎಂದು ಮೂರ್ತಿ ಯಾರಿಕೆ ಮಾಡುವ ಕಲಾವಿದ ವಸಂತ ತಮ್ಮ ಅಳಲನ್ನು ಉದಯವಾಣಿ ಜೊತೆ ತೊಡಿಕೊಂಡಿದ್ದಾರೆ.

ಮೊದಲೆಲ್ಲ ಗಣೇಶ ಚತುರ್ಥಿಗೂ ಮುನ್ನ ಐದಾರು ತಿಂಗಳಿಂದಲೇ ಮೂರ್ತಿಗಳ ತಯಾರಿಕೆಯಲ್ಲಿ ತೊಡಗುತಿದ್ದು ಹಗಲು-ರಾತ್ರಿ ಕೆಲಸ ಮಾಡಿದರೂ ಗ್ರಾಹಕರ ಬೇಡಿಕೆ ಈಡೇರಿಸಲಾಗುತ್ತಿರಲಿಲ್ಲ. ಕೆಲವೊಮ್ಮೆ ಸಮಯದ ಅಭಾವದಿಂದ ಗಣೇಶ ಮೂರ್ತಿಗೆಂದು ಬಂದವರಿಗೆ ಒಪ್ಪಿಗೆ ಪಡೆಯದೆ ಕಳಿಸಲಾಗುತಿತ್ತು. ಆದರೆ, ಕಳೆದರೆಡು ವರ್ಷದಿಂದ ಮೂರ್ತಿ ತಯಾರಿಕೆ ಮಾಡುವವರೇ ಗ್ರಾಹಕರನ್ನು ಹುಡುಕುವ ಸ್ಥಿತಿ ನಿರ್ಮಾಣವಾಗಿದೆ

ಗಣೇಶ ಮೂರ್ತಿಗಳ ಬೇಡಿಕೆ ಇಳಿಕೆ
ಚನ್ನರಾಯಪಟ್ಟಣದ ತಾಲೂಕಿನ ನುಗ್ಗೇಹಳ್ಳಿ ಹೋಬಳಿ ದೊಡ್ಡೇರಿ ಕಾವಲು ಕೆರೆಯಿಂದ ಜೇಡಿಮಣ್ಣನ್ನು ತಂದು ಹದಗೊಳಿಸಿ 550 ಗೌರಿ ಗಣೇಶ ಮೂರ್ತಿಯನ್ನು ತಯಾರಿಸಲಾಗಿದೆ. ಬೆಂಗಳೂರು, ಮಂಡ್ಯ, ತುಮಕೂರು, ಹಾಸನ, ಕುಶಾಲನಗರ ಸೇರಿದಂತೆ ವಿವಿದೆಡೆಗೆ ತಾಲೂಕಿನ ವಿಘ್ನೇಶ್ವರ ಮೂರ್ತಿ ತಯಾರಕರ ಮೂರ್ತಿಗಳು ಸರಬರಾಜಾಗುತ್ತವೆ. ಪ್ರಸಕ್ತ ವರ್ಷ ತಾಲೂಕು ಹೊರತು ಪಡಿಸಿದರೆ ಇತರ ಕಡೆಗೆ ಅಷ್ಟಾಗಿ ಮೂರ್ತಿಗಳು ಹೋಗುವುದಿಲ್ಲ ಎಂದು ಹೇಳಲಾಗುತ್ತಿದೆ.

ಗಣೇಶ ಚೌತುರ್ಥಿ ಸಮೀಪಿಸಿತೆಂದರೆ ಬಿಡುವಿಲ್ಲದಂತೆ ಹಗಲಿರುಳು ಕೆಲಸದಲ್ಲಿ ತೊಡಗುತಿದ್ದೆವು. ಆದರೆ ಕೋವಿಡ್ ಪರಿಣಾಮ ಬೇಡಿಕೆ
ಇಲ್ಲದಾಗಿದೆ. ಗಣೇಶ ಮೂರ್ತಿ ತಯಾರಿಕೆ ಖರ್ಚಿಗಿಂತ ಶ್ರಮ ಹೆಚ್ಚಾಗಿದ್ದು ಅದಕ್ಕೆ ತಕ್ಕ ಪ್ರತಿಫ‌ಲ ಸಿಗುತ್ತಿಲ್ಲ,ಕಲಾವಿದರ ಬದುಕು ಕಷ್ಟದ ಹಾದಿಯಲ್ಲಿದೆ.
-ರಮೇಶ್‌, ವಿಘ್ನೇಶ್ವರ ಮಾಡೆಲ್‌
ವರ್ಕ್ಸ್ ಮಾಲೀಕ

-ಶಾಮಸುಂದರ್‌ ಕೆ. ಅಣ್ಣೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next