Advertisement
ಪುತ್ತೂರು, ಸುಳ್ಯ, ಕಡಬ ವ್ಯಾಪ್ತಿಯ ತಾಲೂಕುಗಳು ಹಾಗೂ ನೆರೆಯ ಕಾಸರಗೋಡು, ಅಡ್ಯನಡ್ಕ ಸಹಿತ ಗಡಿಭಾಗಗಳಲ್ಲಿ 90ಕ್ಕೂ ಮಿಕ್ಕಿ ಕಡೆಗಳಲ್ಲಿ ಸಾರ್ವಜನಿಕ ಗಣೇಶೋತ್ಸವ ನಡೆಯುತ್ತವೆ. 60ಕ್ಕೂ ಮಿಕ್ಕಿ ಗಣೇಶೋತ್ಸವದ ಗಣಪತಿ ವಿಗ್ರಹಗಳು ಪುತ್ತೂರು ನಗರ ವ್ಯಾಪ್ತಿಯಲ್ಲಿ ಪ್ರಮುಖ ಕಲಾಕಾರರಿಂದ ಹಲವು ವರ್ಷಗಳಿಂದ ನಿರ್ಮಾಣವಾಗಿ ಪೂರೈಕೆ ಆಗುತ್ತಿವೆ.
Related Articles
ಪರಿಸರಕ್ಕೆ ಹಾನಿಯಾಗದ ವಿಗ್ರಹಗಳ ಜಾಗೃತಿ ಉಂಟಾಗುತ್ತಿರುವುದರಿಂದ ಒಳಭಾಗದಲ್ಲಿ ಟೊಳ್ಳಾಗಿರುವ, ಆವೆಮಣ್ಣಿನ, ವಾಟರ್ ಪೇಂಟ್ ಬಳಸಿದ ಗಣೇಶನ ವಿಗ್ರಹಗಳನ್ನು ರಚಿಸ ಲಾಗುತ್ತಿದೆ. ಪ್ರಾರ್ಥನೆಯ ಸಂದರ್ಭದಲ್ಲಿ ಇಡಲಾಗುವ ತೆಂಗಿನ ಕಾಯಿ ಹೊರತುಪಡಿಸಿ ರಾಸಾಯನಿಕಗಳನ್ನು, ಪ್ಲಾಸ್ಟಿಕ್, ಕಸ ಬಳಸದೆ ನೀರನಲ್ಲಿ ಕರಗುವ ವಿಗ್ರಹಗಳ ರಚನೆಯಾಗುತ್ತಿವೆ.
Advertisement
ಮನೆಗಳಲ್ಲಿ ಪೂಜೆಗೊಳ್ಳುವ ಗಣೇಶನ ವಿಗ್ರಹಕ್ಕೆ 3ರಿಂದ 5 ಸಾವಿರ ರೂ., ಸಾರ್ವಜನಿಕವಾಗಿ ಆಚರಿಸಲಾಗುವ ಗಣೇಶ ವಿಗ್ರಹಗಳಿಗೆ 10ರಿಂದ 15 ಸಾವಿರ ರೂ. ದರವಿದೆ. ಗಣೇಶನ ವಿಗ್ರಹದ ಜತೆಗೆ ಮೂಷಿಕ, ನಾಗರ ಹಾವು, ಪಾಶ, ಕಿರೀಟ, ಅಂಕುಶಗಳನ್ನು ಒದಗಿಸಲಾಗುತ್ತದೆ.
ಸೇವೆಯ ಯುವಕರುಗಣಪತಿ ವಿಗ್ರಹ ರಚಿಸುವ ಸಂದರ್ಭದಲ್ಲಿ ಸೇವೆಯ ಸಂಕಲ್ಪ ಮಾಡಿಕೊಂಡ ಯುವಕರೂ ಬಣ್ಣ ಸಹಿತ ವಿವಿಧ ರೀತಿಯ ಸಹಕಾರ ನೀಡಲು ಸ್ವಯಂಪ್ರೇರಣೆಯಿಂದ ಬರುತ್ತಾರೆ. ಕಲ್ಲಡ್ಕ ಹಂಚಿನ ಕಾರ್ಖಾನೆಯಿಂದ ಜೇಡಿಮಣ್ಣು ಪೂರೈಕೆಯಾಗುತ್ತದೆ. ಚಿತ್ರ: ಕೃಷ್ಣಾ ಪುತ್ತೂರು