ಇತ್ತೀಚಿನ ದಿನಗಳಲ್ಲಿ ಫ್ಯಾಷನ್ ಗಳೆಂದು ಅನೇಕ ರಾಸಾಯನಿಕ ಪದಾರ್ಥಗಳನ್ನು ಉಪಯೋಗಿಸಿಕೊಂಡು ಗಣಪತಿಯನ್ನು ತಯಾರಿಸಿ ಮಾರಾಟ ಮಾಡುವುದುಂಟು. ಇಂತಹ ಗಣಪತಿಯನ್ನು ಭಾರತೀಯ ಶಾಸ್ತ್ರಗಳು ಒಪ್ಪುವುದಿಲ್ಲ. ಗಣಪತಿಯನ್ನು ಆರಾಧಿಸುವವರು ಚತುರ್ಥಿ ದಿನದಂದು ಶುದ್ಧವಾದ ಮಣ್ಣಿನಿಂದ ಮೂರ್ತಿಯನ್ನು ತಯಾರಿಸಿ ಪೂಜೆ ಮಾಡಬೇಕೆಂದು ನಮ್ಮ ಶಾಸ್ತ್ರ ಹಾಗೂ ಪುರಾಣಗಳು ಹೇಳುತ್ತವೆ.
ಗಣೇಶನ ಮೂರ್ತಿಯನ್ನು ಜೇಡಿಮಣ್ಣಿನಿಂದ ಅಥವಾ ಆವೆಮಣ್ಣಿನಿಂದ ತಯಾರಿಸಬೇಕೆಂದು ಶಾಸ್ತ್ರಗಳು ಹೇಳುತ್ತವೆ. ಇತ್ತೀಚಿನ ದಿನಗಳಲ್ಲಿ ಗಣಪತಿ ಹೆಚ್ಚಾಗಿ ಆಕರ್ಷಿತವಾಗಿ ಕಾಣಬೇಕೆಂದು ರಾಸಾಯನಿಕವಾಗಿ ಗಣಪತಿ ಮೂರ್ತಿಗಳನ್ನು ತಯಾರು ಮಾಡುತ್ತಾರೆ. ಮಣ್ಣಿನ ಗಣಪತಿಗೂ ಹಾಗಾ ರಾಸಾಯನಿಕವಾಗಿ ತಯಾರಿಸಿದ ಗಣಪತಿಗೂ ಸಾಕಷ್ಟು ವ್ಯತ್ಯಾಸಗಳಿವೆ. ಇಂತಹ ಗಣಪತಿಗಳು ಆರೋಗ್ಯಕ್ಕೂ ಹಾನಿಕರವಾಗಿದ್ದು, ಶಾಸ್ತ್ರಗಳು ಇಂತಹ ಗಣಪತಿಗಳ ಮೂರ್ತಿಯನ್ನು ಒಪ್ಪುವುದಿಲ್ಲ.
ಮಣ್ಣಿನ ಗಣಪತಿಗಳನ್ನು ಪೃಥ್ವಿತಣ್ತೀದಿಂದ ತಯಾರಾಗಿರುವ ಮೂರ್ತಿಗಳಾಗಿದ್ದು, ಇದರಲ್ಲಿ ಬ್ರಹ್ಮಾಂಡ ಮಂಡಲದಿಂದ ಆಕರ್ಷಿಸಿದ ದೇವತೆಯ ತಣ್ತೀಗಳು ದೀರ್ಘಕಾಲ ಕಾರ್ಯನಿರ್ವಹಿಸುತ್ತವೆ. ಪೂಜೆಯಾದ ಬಳಿಕ ಮಣ್ಣಿನ ಗಣಪತಿಯನ್ನು ಹರಿಯುವ ನೀರಿಗೆ ವಿಸರ್ಜನೆ ಮಾಡುವುದರಿಂದ ಅದು ಕೂಡಲೇ ನೀರಿನಲ್ಲಿ ಕರಗಿ, ಹರಿಯುವ ನೀರಿನಿಂದ ಸುತ್ತಮುತ್ತಲಿನ ಪರಿಸರದಲ್ಲಿ ದೂರದವರೆಗೆ ದೇವತೆಗಳ ಸಾತ್ತ್ವಿಕ ಲಹರಿಗಳನ್ನು ಕಡಿಮೆ ಮಾಡಿ ಕಾಲಾವಧಿಯನ್ನು ಪ್ರಕ್ಷೇಪಿಸುತ್ತದೆ. ಇದರಿಂದ ಸಂಪೂರ್ಣ ಪರಿಸರದ ವಾಯುಮಂಡಲ ಶುದ್ಧವಾಗುತ್ತದೆ ಎಂದು ಶಾಸ್ತ್ರಗಳು ಹೇಳುತ್ತದೆ.
ಗಣಪತಿಯನ್ನು ಪೂಜೆ ಮಾಡುವುದು ಒಳ್ಳೆಯದಾಗಲಿ ವಿಘ್ನಗಳು ಬಾರದಿರಲಿ ಎಂದು ರಾಸಾಯನಿಕದಿಂದ ಮಾಡಿದ ಗಣೇಶನಿಂದ ನಮ್ಮ ಪೂಜೆಗಳು ವಿಫಲವಾಗುವುದೇ ಹೆಚ್ಚು. ಇದಕ್ಕೆ ಕಾರಣ ಪೂಜೆ ಮಾಡುವುದು ಎಷ್ಟು ಮುಖ್ಯವೋ ಮೂರ್ತಿಯನ್ನು ಅದೇ ರೀತಿಯನ್ನು ವಿಸರ್ಜನೆ ಮಾಡುವುದೂ ಕೂಡ ಅಷ್ಟೇ ಮುಖ್ಯ ಎಂದು ನಮ್ಮ ಶಾಸ್ತ್ರಗಳು ಹೇಳುತ್ತವೆ. ರಾಸಾಯನಿಕದಿಂದ ಮಾಡಿದ ಗಣಪತಿಗಳನ್ನು ನಾವು ನೀರಿನಲ್ಲಿ ವಿಸರ್ಜನೆ ಮಾಡಿದರೂ ಅವುಗಳು ನೀರಿನಲ್ಲಿ ಕರಗುವುದಿಲ್ಲ. ಇದರಿಂದಾಗಿ ಗಣಪತಿಯ ಅವಶೇಷಗಳು ನೀರಿನ ಮೇಲೆ ತೇಲುತ್ತವೆ. ಅನೇಕ ಕಡೆಗಳಲ್ಲಿ ವಿಸರ್ಜಿತವಾದ ಮೂರ್ತಿಗಳನ್ನು ಒಟ್ಟಾರೆ ಸೇರಿಸಿ ಬುಲ್ಡೋರ್ಝ ಅನ್ನು ಚಲಾಯಿಸಿ ನೆಲಸಮ ಮಾಡಲಾಗುತ್ತದೆ. ಇದಕ್ಕೆ ಕಾರಣ ನಾವೇ ಆದ್ದರಿಂದ ಇಂತಹ ತಪ್ಪುಗಳು ಘೋರ ಪಾಪ ಮಾಡಿದಂತಾಗುತ್ತದೆ. ಆದ್ದರಿಂದ ಶಾಸ್ತ್ರದ ಪ್ರಕಾರ ಮಣ್ಣಿನ ಗಣಪತಿಯನ್ನು ಕೂರಿಸಿ ಸನ್ಮಾನದಿಂದ ಗಣಪತಿಯನ್ನು ಬೀಳ್ಕೊಡುವುದು ಆವಶ್ಯಕವಾಗಿದೆ.
-ರೇಣುಕಾರಾಜ್
ಕುವೆಂಪು ವಿಶ್ವವಿದ್ಯಾಲಯ ಶಂಕರಘಟ್ಟ