Advertisement

Ganesh Chathurthi: ಏಕದಂತಾಯ ವಿದ್ಮಹೇ

08:22 AM Sep 18, 2023 | Team Udayavani |

ಏಕದಂತಾಯ ವಿದ್ಮಹೇ ವಕ್ರತುಂಡಾಯ ಧೀಮಹಿ ತನ್ನೋ ದಂತಿ ಪ್ರಚೋದಯಾತ್‌…

Advertisement

ಶಿವ, ವಿಷ್ಣು ಮುಂತಾದ ದೇವತೆಗಳಿಗಿಂತಲೂ ಹೆಚ್ಚು ಜನಪ್ರಿಯವಾಗಿ ಪೂಜೆಯಲ್ಲಿ ಅಗ್ರಸ್ಥಾನ ಪಡೆದ ದೇವರು ಗಣಪತಿ. ಜನಜೀವನದ ಎಲ್ಲ ಶುಭಕಾರ್ಯಗಳಲ್ಲೂ-ವಿದ್ಯಾಭ್ಯಾಸ, ವಿವಾಹ, ಉಪನಯನ, ಗೃಹಪ್ರವೇಶ, ಇತ್ಯಾದಿ-ಮೊದಲ ಪೂಜೆಯನ್ನು ಇಂದಿಗೂ ಭಾವುಕರು ಗಣಪತಿಗೆ ಸಲ್ಲಿಸುತ್ತಾರೆ. ಅಷ್ಟೇ ಅಲ್ಲದೆ ಮಿಕ್ಕ ದೇವತಾ ಕಾರ್ಯಗಳನ್ನು ಮಾಡುವಾಗಲೂ ನಿರ್ವಿಘ್ನತಾ ಸಿದ್ಧಿಗಾಗಿ ಮೊದಲ ಪೂಜೆ ಗಣಪತಿಗೇ ಮೀಸಲು. ಗಣಪತಿಗೆ ಸಿದ್ಧಿವಿನಾಯಕ, ಗಣೇಶ, ಗಜಮುಖ, ಏಕದಂತ, ವಕ್ರತುಂಡ, ಲಂಬೋದರ, ಹೇರಂಬ, ಮೂಷಿಕವಾಹನ ಮುಂತಾದ ಹೆಸರುಗಳೂ ಇವೆ.

ಈ ಒಂದೊಂದು ಹೆಸರೂ ಗಣಪತಿಯ ಒಂದೊಂದು ಗುಣಲಕ್ಷಣವನ್ನು ಸೂಚಿಸುತ್ತದೆ. ಆನೆಯ ತಲೆ ಹೊಂದಿದಕ್ಕೆ ಗಜಮುಖ, ಒಂದೇ ಕೊರೆ ಹಲ್ಲು ಹೊಂದಿದಕ್ಕೆ ಏಕದಂತ, ಗಣಗಳ ನಾಯಕ ಗಣಪತಿ, ಮೂಷಿಕ ವಾಹನ ಹೀಗೆ ಒಂದೊಅದು ಹೆಸರು ಒಂದೊಂದು ವಿಶೇಷತೆ ಮತ್ತು ಹಿನ್ನೆಲೆಯನ್ನು ತಿಳಿಸುತ್ತವೆ. ಹಿಂದೂ ಪುರಾಣದ ಪ್ರಕಾರ, ಗಣೇಶ ಶಿವ ಮತ್ತು ಪಾರ್ವತಿಯ ಮಗ. ಗಣೇಶನನ್ನು ಕನ್ನಡದಲ್ಲಿ, ಮಲೆಯಾಳಂ ಮತ್ತು ಮರಾಠಿ ಭಾಷೆಗಳಲ್ಲಿ ವಿನಾಯಕ ಎಂದೂ, ತಮಿಳು ಭಾಷೆಯಲ್ಲಿ ವಿನಾ ಯರ್ಗ, ಪಿಳ್ಳೈಯ್ಯಾರ್ ಎಂದೂ, ತೆಲುಗಿನಲ್ಲಿ ವಿನಾಯಕುಡು ಎಂದು ಕರೆಯಲಾಗುತ್ತದೆ.

ಗಣೇಶನನ್ನು ವಿದ್ಯಾಧಿದೇವತೆ ಎಂದು ಪರಿಗಣಿಸಲಾಗುತ್ತದೆ. ಭಾರತದಲ್ಲಿ ಮಾತ್ರವೇ ಅಲ್ಲ, ಪ್ರಾಚೀನ ಭಾರತೀಯರು ತಮ್ಮ ಸಂಸ್ಕೃತಿಯನ್ನು ಹರಡಿದ ಸಾಗರೋತ್ತರ ದೇಶಗಳಲ್ಲಿ ಕೂಡ ಗಣಪತಿವಿಗ್ರಹಗಳು ಜನಪ್ರಿಯವಾಗಿದ್ದುವು. ಜಾವ, ಕಾಂಬೋಡಿಯ, ಬೋರ್ನಿಯೊ ಮೊದಲಾದ ಆಗ್ನೇಯ ಏಷ್ಯ ರಾಷ್ಟ್ರಗಳಲ್ಲಿ ಹಿಂದೂ ಸಂಪ್ರದಾಯದ ಗಣಪತಿಯಿದ್ದರೆ, ಚೀನಾ, ಜಪಾನ್‌, ಶ್ರೀಲಂಕಾಗಳಲ್ಲಿ ಬೌದ್ಧರ ಪ್ರಭಾವದಿಂದ ಮಾರ್ಪಟ್ಟ ರೂಪದಲ್ಲಿ ಗಣಪತಿ ವಿಗ್ರಹಗಳು ಇಂದಿಗೂ ಕಾಣಸಿಗುತ್ತವೆ. ಗಣಪತಿಯನ್ನ ಬಹು ವಿಜೃಂಭಣೆಯಿಂದ ಮನೆಗೆ ತರಲಾಗುತ್ತದೆ. ಭಕ್ಷ್ಯ ಭೋಜನ, ನೈವೇದ್ಯಗಳನ್ನು ಮಾಡಿ ಮಂತ್ರ, ವೇದಘೋಷ, ಸ್ತೋತ್ರಗಳ ಮೂಲಕ ಬೆಳಗ್ಗೆ ಸಂಜೆ ಪೂಜೆ ಮಾಡಲಾಗುತ್ತದೆ. ಹೋಳಿಗೆ, ಕಜ್ಜಾಯ ಕಡಬು ಸಿಹಿ ತಿನಿಸುಗಳು ಗಣಪನ ಪ್ರಿಯ ನೈವೇದ್ಯಗಳು.

ಇನ್ನ ಸಾರ್ವಜನಿಕ ಗಣಪತಿಯನ್ನು ಕೂರಿಸಿ ವಿವಿಧ ಸ್ಪರ್ಧೆಗಳಾದ ರಂಗೋಲಿ, ಹಾಡು, ನೈತ್ಯ, ಮನೋರಂಜನ ಕ್ರೀಡೆ ಮಕ್ಕಳು ಮಹಿಳೆಯರಿಗೆ ಸ್ಪರ್ಧೆ ಹಾಗೂ ಆಟೋಟಗಳನ್ನು ಏರ್ಪಡಿಸಿ ಸಮಾಜದ ಜನರೆಲ್ಲ ಒಂದೆಡೆ ಹಬ್ಬವನ್ನು ವಿಜೃಂಭ್ರಣೆಯಿಅದ ಆಚರಿಸಲಾಗುತ್ತದೆ. ಹೀಗೆ ಕೂರಿಸಲಾದ ಗಣಪತಿಯನ್ನ ಭಕ್ತಿ ಭಾವದಲ್ಲಿ ಜನರು ಮುಳುಗಿಸುತ್ತಾರೆ. ಗಣಪತಿ ಬರೀ ದೇವರಾಗಿ ಭಕ್ತಿಗಷ್ಟೆ ಸೀಮಿತವಾಗಿರದೇ ಅದೊಂದು ಭಾವನೆಯಾಗಿ ಮಕ್ಕಳ ಮನಸ್ಸಿನಲ್ಲಿ ಶಾಶ್ವತ ನೆಲೆ ಊರಿದೆ.

Advertisement

ಈ ಬಾರಿಯ ಗಣೇಶ ಮನೆಯ ಮುದ್ದು ಮಕ್ಕಳಿಗೆ ವಿದ್ಯಾ ಬುದ್ಧಿ ಹಿರಿಯರಿಗೆ ನೆಮ್ಮದಿ ಎಲ್ಲರಿಗೂ ಒಳಿತನ್ನು ಮಾಡಲಿ, ಪರಿಸರ ಸ್ನೇಹಿ ಗಣೇಶನನ್ನ ಕೂರಿಸಿ ಹಬ್ಬವನ್ನ ಆಚರಿಸೋಣ.

-ಶುಭಾ ಹತ್ತಳ್ಳಿ,

ವಿಜಯಪುರ

Advertisement

Udayavani is now on Telegram. Click here to join our channel and stay updated with the latest news.

Next