Advertisement

ಗಾಂಧಿ ಕುಟುಂಬದಿಂದ ಸಂಗೀತ ಕುರ್ಚಿ ಆಟ!

11:59 PM Aug 11, 2019 | Sriram |

ಹೊಸದಿಲ್ಲಿ: ಸೋನಿಯಾ ಗಾಂಧಿಯನ್ನು ಕಾಂಗ್ರೆಸ್‌ನ ಹಂಗಾಮಿ ಮುಖ್ಯಸ್ಥೆಯನ್ನಾಗಿ ಆಯ್ಕೆ ಮಾಡಿದ ಕ್ರಮವನ್ನು ಅಣಕವಾಡಿರುವ ಬಿಜೆಪಿ ವಕ್ತಾರ ಸಂಬಿತ್‌ ಪಾತ್ರಾ, “ಗಾಂಧಿ ಕುಟುಂಬ ದವರು ಸಂಗೀತ ಕುರ್ಚಿ ಆಟವಾಡುತ್ತಿದ್ದಾರೆ.

Advertisement

ಗಾಂಧಿ ಕುಟುಂಬದ ಯಾರನ್ನಾದರೂ ಕಾಂಗ್ರೆಸ್‌ ಆಯ್ಕೆ ಮಾಡಲೇಬೇಕಿತ್ತು. ಸೋನಿಯಾ ಗಾಂಧಿಯಿಂದ ಹೊರಟ ಅಧ್ಯಕ್ಷ ಹುದ್ದೆ ರಾಹುಲ್‌ ಗಾಂಧಿಗೆ ಆಗಮಿಸಿ, ಪುನಃ ಸೋನಿಯಾಗೆ ತೆರಳಿದೆ. ಒಂದು ಸುತ್ತು ಮುಕ್ತಾಯವಾಗಿದೆ’ ಎಂದು ವ್ಯಂಗ್ಯವಾಡಿದ್ದಾರೆ.

ಇದೇ ವೇಳೆ ಮಾತನಾಡಿದ ಮಧ್ಯಪ್ರದೇಶ ಮಾಜಿ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌, ಹಿಂದಿನ ಲೋಕಸಭೆ ಚುನಾವಣೆಯಲ್ಲೇ ಜನರು ಕುಟುಂಬ ರಾಜಕಾರಣವನ್ನು ತಿರಸ್ಕರಿಸಿದ್ದಾರೆ. ಆದರೆ ಕಾಂಗ್ರೆಸ್‌ ತನ್ನ ತಪ್ಪಿನಿಂದ ಪಾಠ ಕಲಿತಿಲ್ಲ. ಈಗಲೂ ಅವರಿಗೆ ಸೋನಿಯಾ ಮತ್ತು ರಾಹುಲ್‌ ಗಾಂಧಿಯೇ ಪಕ್ಷ ನಡೆಸಲು ಬೇಕಾಗಿದೆ ಎಂದಿದ್ದಾರೆ. ತನ್ನ ನಾಯಕರನ್ನು ಸಹಜವಾಗಿ ಬೆಳೆಯಲು ಅವಕಾಶ ನೀಡುವ ಮೂಲಕ ಬಿಜೆಪಿ ಒಂದು ಮಾದರಿಯಾಗಿದೆ. ಆದರೆ ಕಾಂಗ್ರೆಸ್‌ ಮೂಲ ಕುಟುಂಬವನ್ನು ಬಿಡಲು ಒಪ್ಪುತ್ತಲೇ ಇಲ್ಲ ಎಂದು ಅವರು ಟೀಕಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next