Advertisement

ಗಾಂಧಿ ತತ್ವ್ತ, ಸರಳತೆಯಿಂದ ಎತ್ತರಕ್ಕೇರಿದ ಏರ್ಯ

01:22 PM Dec 17, 2017 | |

ಬಂಟ್ವಾಳ: ಬದುಕಿನಲ್ಲಿ ಗಾಂಧಿ ತಣ್ತೀ ಮತ್ತು ಸರಳತೆಯನ್ನು ಅಳವಡಿಸಿಕೊಂಡಿರುವ ಡಾ| ಏರ್ಯ ಲಕ್ಷ್ಮೀನಾರಾಯಣ ಆಳ್ವ ಅವರು ಎಲ್ಲರನ್ನೂ ಪ್ರೀತಿಸಿ ಗೌರವಿಸುತ್ತಿದ್ದಾರೆ. ಇದುವೇ ಅವರ ವ್ಯಕ್ತಿತ್ವನ್ನು ಉನ್ನತ ಸ್ಥಾನಕ್ಕೇರಿಸಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

Advertisement

ಅವರು ಶನಿವಾರ ಬಿ.ಸಿ. ರೋಡ್‌ ಸ್ಪರ್ಶ ಕಲಾ ಮಂದಿರದಲ್ಲಿ ಹಿರಿಯ ಸಾಹಿತಿ ಡಾ| ಏರ್ಯ ಲಕ್ಷ್ಮೀನಾರಾಯಣ ಆಳ್ವ ಅವರನ್ನು ಸಮ್ಮಾನಿಸಿ ಮಾತನಾಡಿದರು.

ಡಾ| ಏರ್ಯ ಅವರು 90ರ ಇಳಿ ಹರೆಯದಲ್ಲೂ ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಹೊಂದಿ ದ್ದಾರೆ. ನಿರ್ಲಿಪ್ತತೆ, ನಿಶ್ಚಿಂತೆ ಹಾಗೂ ನವೋಲ್ಲಾಸದಿಂದ ಇದ್ದಾರೆ. ಸರಳ ಸಜ್ಜನಿಕೆಯ ಪರಿಪಕ್ವ ಜೀವನಾನು ಭವದ ಮೂಲಕ ನಮ್ಮ ಹೆಗ್ಗಡೆ ಕುಟುಂಬಕ್ಕೂ ತೀರಾ ಹತ್ತಿರವಾಗಿದ್ದಾರೆ ಎಂದರು. 

ಏರ್ಯರು ವಿಶ್ವ ಹಿಂದೂ ಪರಿಷತ್ತಿನ ಅಧ್ಯಕ್ಷರಾಗಿ ದ್ದರೂ ಎಲ್ಲ ಧರ್ಮೀಯರನ್ನು ಸಮಾನ ಪ್ರೀತಿಯಿಂದ ಕಾಣುವ ಮೂಲಕ ನೈಜ ಹಿಂದುತ್ವ ಏನು ಎಂಬುದನ್ನು ಸಮಾಜಕ್ಕೆ ತೋರಿಸಿ ಕೊಟ್ಟಿದ್ದಾರೆ ಎಂದು ಶ್ಲಾ ಸಿದರು.

ವಿದ್ಯಾರ್ಥಿಗಳು ಬಾಲ್ಯದಿಂದಲೇ ಸಜ್ಜನರ ಸಹವಾಸ ಮಾಡಿದಾಗ ಸಹಜವಾಗಿ ಸದ್ಗುಣ ಮತ್ತು ಸಚ್ಚಾರಿತ್ರ ಮೂಡಿ ಬರಲು ಸಾಧ್ಯ ಎಂದು ಅವರು ಕಿವಿಮಾತು ಹೇಳಿದರು.

Advertisement

ಭ್ರಷ್ಟಾಚಾರ ವಿರೋಧಿ ಹಂಪಿ ಕನ್ನಡ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಡಾ| ಬಿ.ಎ. ವಿವೇಕ ರೈ ಮಾತನಾಡಿ, ಪ್ರಸಕ್ತ ಬಿ.ಸಿ.ರೋಡ್‌ ಎಂದು ಕರೆಯಲಾಗುವ ಬಂಟ್ವಾಳ ಜೋಡುಮಾರ್ಗ ಒಂದಾಗಿ ಕೂಡು ಮಾರ್ಗವಾಗಿದೆ. ಇದೇ ರೀತಿ ಜಿಲ್ಲೆಯ ಬೀಡುಗಳಲ್ಲಿ ಇರುವಂತೆ “ಕೂಡು ಕುಟುಂಬ’ ವ್ಯವಸ್ಥೆಯನ್ನು ಡಾ| ಏರ್ಯ ಬೆಳೆಸಿಕೊಂಡು ಬಂದಿದ್ದಾರೆ. ಸಾಹಿತ್ಯದ ಜತೆಗೆ ಶಿಕ್ಷಣ, ಸಹಕಾರ, ಸಂಘಟನೆ ಬಗ್ಗೆ ದುಡಿಯುತ್ತಿರುವ ಏರ್ಯರು ಭ್ರಷ್ಟಾಚಾರ ವಿರೋಧಿಯಾಗಿದ್ದಾರೆ ಎಂದು ತಿಳಿಸಿದರು.

ವಿಶ್ವ ಕೊಂಕಣಿ ಭಾಷೆ ಮತ್ತು ಸಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷ ಬಸ್ತಿ ವಾಮನ ಶೆಣೈ ಪುಸ್ತಕ ಪ್ರದರ್ಶನ ಉದ್ಘಾಟಿಸಿ ಏರ್ಯರಿಗೆ ಶುಭ ಹಾರೈಸಿದರು. ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ. ಭಂಡಾರಿ ಏರ್ಯರ ಸಾಕ್ಷ್ಯಾಚಿತ್ರ ಪ್ರದರ್ಶನ ಉದ್ಘಾಟಿಸಿದರು. ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ.ಸೇಸಪ್ಪ ಕೋಟ್ಯಾನ್‌, ಸುಭಾಶ್ಚಂದ್ರ ಜೈನ್‌, ಸಮಿತಿ ಸಂಚಾಲಕ ವಿಶ್ವನಾಥ ಬಂಟ್ವಾಳ, ಕಾರ್ಯದರ್ಶಿ ಫಾರೂಕ್‌ ಬಂಟ್ವಾಳ ಉಪಸ್ಥಿತರಿದ್ದರು.

ಸಮಿತಿ ಅಧ್ಯಕ್ಷ ಕೆ.ಮೋಹನ ರಾವ್‌ ಸ್ವಾಗತಿಸಿ, ಪ್ರಾಂಶುಪಾಲ ಡಾ. ಗಿರೀಶ ಭಟ್‌ ಅಜಕ್ಕಳ ವಂದಿಸಿದರು. ನಿವೃತ್ತ ಮುಖ್ಯ ಶಿಕ್ಷಕ ಮಹಾಬಲೇಶ್ವರ ಹೆಬ್ಟಾರ್‌ ಮತ್ತು ಮಂಜು ವಿಟ್ಲ ಕಾರ್ಯಕ್ರಮ ನಿರೂಪಿಸಿದರು. ಚಂದ್ರಶೇಖರ ಕೆದಿಲಾಯ ಏರ್ಯರ ಕಾವ್ಯಗಾಯನ ನೆರವೇರಿಸಿದರು.

ಗೋಷ್ಠಿ: ಸಭಾ ಕಾರ್ಯಕ್ರಮ ಬಳಿಕ ನಡೆದ ಏರ್ಯರ ಬದುಕು-ಬರಹ, ಸಹಕಾರಿ ಮತ್ತು ಸಂಘಟನಾ ಕ್ಷೇತ್ರ ಬಗ್ಗೆ ಗೋಷ್ಠಿಯಲ್ಲಿ ಇತಿಹಾಸತಜ್ಞ ಡಾ.ಪುಂಡಿಕಾ ಗಣಪಯ್ಯ ಭಟ್‌, ಕ್ಯಾಂಪ್ಕೊ ಅಧ್ಯಕ್ಷ ಎಸ್‌.ಆರ್‌.ಸತೀಶ್ಚಂದ್ರ, ಪ್ರಾಧ್ಯಾಪಕ ಡಾ.ವರದರಾಜ ಚಂದ್ರಗಿರಿ, ಪ್ರೊ| ತುಕರಾಮ ಪೂಜಾರಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next