Advertisement

ಸಮಾಜದ ಶಾಂತಿಗೆ ಗಾಂಧಿ ಆದರ್ಶ ಪಾಲಿಸಿ: ರಾಮಯ್ಯ

03:11 PM Oct 03, 2020 | Suhan S |

ಕೊರಟಗೆರೆ: ಅಹಿಂಸೆ ಸತ್ಯಾಗ್ರಹ ಮೂಲಕ ನ್ಯಾಯಕ್ಕಾಗಿ ಹೋರಾಡಲು ಸಾಧ್ಯ ಎಂದು ತೋರಿಸಿಕೊಟ್ಟ ರಾಷ್ಟಪಿತ ಮಹಾತ್ಮ ಗಾಂಧೀಜಿರವರ ಆದರ್ಶ ಸಮಾಜದ ಶಾಂತಿ ಪಾಲನೆಗೆ ಹಾಗೂ ಎಲ್ಲಾ ವರ್ಗದ ಜನತೆಗೆ ನೆಮ್ಮದಿಯ ಜೀವನಕ್ಕೆ ಸೂತ್ರವಾಗಿದೆ ಎಂದು ತಾಪಂ ಅಧ್ಯಕ್ಷ ಟಿ.ಸಿ. ರಾಮಯ್ಯ ಹೇಳಿದರು.

Advertisement

ಪಟ್ಟಣದಲ್ಲಿ ತಾಲೂಕು ಆಡಳಿಯಿಂದ ತಾಲೂಕುಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಗಾಂಧೀಜಿ ಅವರ ಜನ್ಮದಿನಾಚರಣೆ ಹಾಗೂ ಲಾಲ್‌ ಬಹದ್ದೂರ್‌ ಶಾಸ್ತ್ರಿ ಜನ್ಮ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ವಿಶ್ವದ ಇತಿಹಾಸದಲ್ಲಿ ಹಲವು ಕಾಂತಿಗಳು ನಡೆದಿವೆಬಹುತೇಕಎಲ್ಲಾಕ್ರಾಂತಿಕಾರಿಗಳು ಅನುಸರಿಸಿದ ನೀತಿ ಹಿಂಸೆಯೆ ಆದರೆ ನಮ್ಮ ಮಹಾತ್ಮ ಗಾಂಧೀಜಿ ಅಹಿಂಸೆ ಧರ್ಮದಮೂಲಕವೇ ಕ್ರಾಂತಿಕಾರಿಯಾಗಿ ದೇಶಕ್ಕೆ ಸ್ವಾತಂತ್ರ್ಯ ಕೊಡಿಸಿದವರು ಎಂದರು.

ಶಿಕ್ಷಣಾಧಿಕಾರಿ ಸುಧಾಕರ್‌ಮಾತನಾಡಿ, ಗಾಂಧೀಜಿ ಶಾಂತಿ ಸ್ವರೂಪದ ಸ್ವಾತಂತ್ರ್ಯ ಹೋರಾಟದ ಮಾರ್ಗದಿಂದ ಭಾರತಕ್ಕೆ ಮಾತ್ರವಲ್ಲ ಇಡೀ ವಿಶ್ವಕ್ಕೆ ಮಾದರಿ. ಗಾಂಧೀಜಿ ವ್ಯಕ್ತಿ ಅಲ್ಲ ಶಕ್ತಿ ಸಮಾಜದಲ್ಲಿ ವಿವಿಧ ರಂಗಗಳಲ್ಲಿನ ಅನೇಕ ಸಮಸ್ಯೆಗಳ ನಿವಾರಣೆಗೆ ಅವರ ಚಿಂತನೆಗಳು ನಮಗೆ ದಾರಿ ದೀಪವಾಗಿದೆ. ಪ್ರತಿ ವರ್ಷ ಅವರ ಜಯಂತಿ ಆಚರಣೆಯಿಂದ ಅವರ ಚಿಂತನೆಗಳನ್ನು ಮನನ ಮಾಡಲು ಅವಕಾಶ ವಾಗಿದೆ ಎಂದು ತಿಳಿಸಿದರು.

ಹಿಂದು ಧರ್ಮದ ಮಹತ್ವವನ್ನು ಶಿವಕುಮಾರ್‌, ಕೈಸ್ತ ಧರ್ಮದ ಮಹತ್ವ ವನ್ನು ಪಾದರಿ ಸುರೇಶ್‌ಬಾಬು, ಇಸ್ಲಾಂ ಧರ್ಮದ ಮಹತ್ವವನ್ನು ಮುತ್ತುವಲ್ಲಿ ಇದಾಯತ್‌ ಉಲ್ಲಾ ಷರೀಫ್ ತಿಳಿಸಿದರು. ತಾಪಂ ಉಪಾಧ್ಯಕ್ಷ ವೆಂಕಟಪ್ಪ, ಸದಸ್ಯೆ ನರಸಮ್ಮ, ಮುಖಂಡರಾದ ನರಸಿಂಹ ಮೂರ್ತಿ, ಉಪತಹಶೀಲ್ದಾರ್‌ ಚಂದ್ರಪ್ಪ, ತಾಲೂಕು ವೈದ್ಯಾಧಿಕಾರಿ ವಿಜಯ್‌ ಕುಮಾರ್‌, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರುದ್ರೇಶ್‌, ಕಂದಾಯ ಇಲಾಖಾ ಅಧಿಕಾರಿಗಳಾದ ಚಿಕ್ಕರಾಜು, ಜಯ ಪ್ರಕಾಶ್‌, ಪ್ರತಾಪ್‌, ಬಸವರಾಜು, ನಕುಲ್‌, ಯಶೋಧ, ರಘು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next