Advertisement
ಶಾಲೆ 1.18 ಎಕ್ರೆ ನಿವೇಶನವನ್ನು ಹೊಂದಿದ್ದು, ಆಟದ ಮೈದಾನವೂ ಇರುತ್ತದೆ. ಜತೆಗೆ ಶಾಲೆಯ ವಠಾರದಲ್ಲೇ ಮಂಗಳೂರು ಉತ್ತರ ವಲಯ ಸಮನ್ವಯ ಶಿಕ್ಷಣ ಸಂಪನ್ಮೂಲ ಕೇಂದ್ರ ಕಾರ್ಯಾಚರಿಸುತ್ತಿದೆ. ಉತ್ತಮ ವಿದ್ಯಾಭ್ಯಾಸಕ್ಕೆ ಹೆಸರುವಾಸಿಯಾಗಿರುವ ಶಾಲೆಗೆ 80ರ ದಶಕದಲ್ಲಿ ಎ.ಸ್ಟೀವರ್ಡ್ ಅವರು ಮುಖ್ಯ ಶಿಕ್ಷಕರಾಗಿದ್ದ ಸಂದರ್ಭ ರಾಷ್ಟ್ರ ಮಟ್ಟದ ಪ್ರಶಸ್ತಿಯೂ ಲಭ್ಯವಾಗಿತ್ತು.
ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಂಪ್ಯೂಟರ್ ತರಗತಿ,
ಗ್ರಂಥಾಲಯ ವ್ಯವಸ್ಥೆ ಕೂಡ ಇದೆ. ಶಾಲೆಯು ಮನಪಾ ವ್ಯಾಪ್ತಿಯಲ್ಲಿದ್ದು, ಸ್ಥಳೀಯ ಇಬ್ಬರು ಕಾರ್ಪೊರೇಟರ್‌ಗಳು ಉತ್ತಮ ಸಹಕಾರ ನೀಡುತ್ತಿದ್ದಾರೆ. ಪಾಲಿಕೆಯ ವತಿಯಿಂದ ಇಂಟರ್‌ಲಾಕ್ ವ್ಯವಸ್ಥೆ, ಪೀಠೊಪಕರಣಗಳನ್ನು ನೀಡಿರುತ್ತಾರೆ ಎಂದು ಶಾಲೆಯ ಮುಖ್ಯ ಶಿಕ್ಷಕರು ಹೇಳುತ್ತಾರೆ.
Related Articles
ದಾನಿಗಳ ಸಹಕಾರದಿಂದ ಶಾಲೆಗೆ ವಿಶೇಷ ಕೊಡುಗೆ ಲಭ್ಯವಾಗಿದೆ. ಲಯನ್ಸ್ ಕ್ಲಬ್ ಗಾಂಧಿನಗರ, ಇನ್ನರ್
ವೀಲ್, ಶ್ರೀ ಮಾರಿಯಮ್ಮ ದೇವಸ್ಥಾನ ಸಹಿತ ವಿವಿಧ ಸಂಘ ಸಂಸ್ಥೆಗಳು ಶಾಲೆಯ ಅಭಿವೃದ್ಧಿಗೆ ಸಹಕಾರ
ನೀಡಿವೆ. ಲಂಡನ್‌ನಲ್ಲಿ ನೆಲೆಸಿರುವ ಡಾ| ವಿಟ್ಠಲದಾಸ್ ಪೈ ಸಹಿತ ಹಲವಾರು ಮಂದಿ ಸಹಕಾರ ನೀಡು ತ್ತಿದ್ದಾರೆ. ಡಾ|
ನರೇಂದ್ರ ನಾಯಕ್ ಅವರ ನೇತೃತ್ವದಲ್ಲಿ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸುವ ಕಾರ್ಯ ನಡೆಯುತ್ತಿದೆ ಎಂದು
ಹಿರಿಯ ಶಿಕ್ಷಕಿ ವೀಣಾ ಬಿ. ತಿಳಿಸಿದ್ದಾರೆ.
Advertisement
ಇಂಗ್ಲಿಷ್ ಮಾಧ್ಯಮ ಶಾಲೆಗಳ ಆಕರ್ಷಣೆಯಿಂದ ಕನ್ನಡ ಮಾಧ್ಯಮ ಶಾಲೆಗಳು ಮುಚ್ಚುಗಡೆಗೊಳ್ಳುತ್ತಿರುವಇಂದಿನ ಕಾಲಘಟ್ಟದಲ್ಲಿ ಮುಖ್ಯ ಶಿಕ್ಷಕರ ಹಾಗೂ ಸಮಗ್ರ ಶಿಕ್ಷಕ ವೃಂದದ ವಿಶೇಷ ಮುತುವರ್ಜಿಯಿಂದ ಗಾಂಧಿ ನಗರ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ 185ರಷ್ಟಿದೆ. ಶಾಲೆಯ ಹಳೆ ವಿದ್ಯಾರ್ಥಿ ಸಂಘವು ಶಾಲೆಯ ಸರ್ವಾಂಗೀಣ
ಅಭಿವೃದ್ಧಿಯ ನಿಟ್ಟಿನಲ್ಲಿ ಅತ್ಯಂತ ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುತ್ತಿದೆ. ವಿವಿಧ ಅಭಿವೃದ್ಧಿ ಕಾರ್ಯಗಳು
ಶಾಲಾ ಕೊಠಡಿಗಳಿಗೆ ಸಂಪೂರ್ಣ ಟೈಲ್ಸ್ ಅಳವಡಿಸಲಾಗಿದ್ದು, ಶಾಲಾ ಕಟ್ಟಡ ಹಾಗೂ ಆವರಣಗೋಡೆಗೆ ಸುಣ್ಣ- ಬಣ್ಣ ಬಳಿಯಲಾಗಿದೆ. ಶಾಲೆಯ ಗೇಟ್‌ನ ಮುಂಭಾಗ ಹಾಗೂ ಅಂಗನವಾಡಿ ಕಟ್ಟಡದ ಮುಂಭಾಗ ಇಂಟರ್‌ಲಾಕ್, ಹೂದೋಟದ ನವೀಕರಣ- ಸುಂದರೀಕರಣ, ಶೌಚಾಲ ಯದ ನವೀಕರಣ, ಅಂಗನವಾಡಿಯ ನವೀ ಕರಣ, ಶುದ್ಧೀಕರಿಸಿದ ನೀರಿನ ಸೌಕಾರ್ಯ, ಪ್ರತಿ ಕೊಠಡಿಗೆ ನೂತನ ಪೀಠೊಪಕರಣದ ವ್ಯವಸ್ಥೆ ಮಾಡಲಾಗಿದೆ. ಜ. 26-28: ಶತಮಾನೋತ್ಸ ವದ ಅಂಗವಾಗಿ ವಿವಿಧ ಕಾರ್ಯಕ್ರಮ
ಶತಮಾನೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ನಿವೃತ್ತರಾದ ಶಿಕ್ಷಕರನ್ನು ಸಮ್ಮಾನಿಸಲಾಗುವುದು. ಶಾಲೆಯಲ್ಲಿ ಕಲಿತು ಈಗ ಪ್ರತಿಷ್ಠಿತ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರುವ ಆಯ್ದ ಹಳೆ ವಿದ್ಯಾರ್ಥಿಗಳ ಸ್ವಸ್ತಿವಾಚನ ಆಯೋಜಿಸಲಾಗಿದೆ. ಈ ಸಂದರ್ಭ ‘ಶತ ಸಿದ್ಧಿ’ ಸ್ಮರಣ ಸಂಚಿಕೆಯನ್ನು ಹೊರ ತರಲು ಉದ್ದೇಶಿಸಲಾಗಿದೆ. ಕ್ಲಸ್ಟರ್ ಮಟ್ಟದ ಹಾಗೂ ಪರಿಸರದ ಶಾಲಾ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ, ಛದ್ಮವೇಷ ಸ್ಪರ್ಧೆ, ಖೋ ಖೋ ಪಂದ್ಯಾಟ, ರಸಪ್ರಶ್ನೆ ಸ್ಪರ್ಧೆ, ಹಳೆ ವಿದ್ಯಾರ್ಥಿಗಳಿಗೆ ಹಾಗೂ ಶಾಲೆಯ ಶಿಕ್ಷಕ ವೃಂದದವರಿಗೆ ಕ್ರೀಡಾಕೂಟ, ಹಳೆ ವಿದ್ಯಾರ್ಥಿಗಳಿಂದ ರಕ್ತದಾನ ಶಿಬಿರ, ಸಾರ್ವಜನಿಕರಿಗೆ ಆಕರ್ಷಕ ನಗದು ಬಹುಮಾನದ ‘ರಂಗ್ ಚಾವಡಿ’ ಛದ್ಮವೇಷ ಸ್ಪರ್ಧೆ ನಡೆಯಲಿದೆ. ಮೂರು ದಿನಗಳಲ್ಲಿ ವಿವಿಧ ಕ್ಷೇತ್ರಗಳ ಗಣ್ಯರ
ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಬಳಿಕ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.