Advertisement

ಗಾಂಧೀಜಿ ಸಮಾಜವಾದಿ ತತ್ವ ಎಲ್ಲರಿಗೂ ಸ್ಫೂರ್ತಿ

06:05 PM Aug 16, 2022 | Team Udayavani |

ಹೊಸಪೇಟೆ: ಪ್ರಸ್ತುತ ದೇಶ ಪ್ರೇಮವನ್ನು ಭಾವನಾತ್ಮಕತೆಗಿಂತ, ಶ್ರಮ, ಸಂಸ್ಕೃತಿ, ಕಾಯಕ, ತತ್ವ ಸಿದ್ಧಾಂತಗಳ ಬೌದ್ಧಿಕತೆಯಿಂದ ಮೂಡಿಸುವುದು ನಮ್ಮೆಲ್ಲರ ಗುರಿಯಾಗಲಿ ಎಂದು ಕನ್ನಡ ವಿಶ್ವವಿದ್ಯಾಲಯದ ಚರಿತ್ರೆ ವಿಭಾಗ ಪ್ರಾಧ್ಯಾಪಕ ಡಾ| ಚಿನ್ನಸ್ವಾಮಿ ಸೋಸಲೆ ಅಭಿಪ್ರಾಯಪಟ್ಟರು.

Advertisement

ಕನ್ನಡ ವಿಶ್ವವಿದ್ಯಾಲಯದ ಲೋಹಿಯ ಅಧ್ಯಯನದ ಪೀಠದ ವತಿಯಿಂದ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ “ಸ್ವಾತಂತ್ರ್ಯ ಚಳವಳಿ: ಸಮಾಜವಾದಿ ದೃಷ್ಟಿಕೋನ’ ವಿಶೇಷ ಉಪನ್ಯಾಸದಲ್ಲಿ ಸೋಮವಾರ ಮಾತನಾಡಿದರು. ಸ್ವಾತಂತ್ರ್ಯ ಚಳವಳಿ ಜೊತೆ ಜೊತೆಗೆ ಸಮಾಜವಾದವು ರೂಪುಗೊಂಡಿತು ಎಂದರು.

ಸ್ಥಳೀಯ ಹೋರಾಟಗಳು, ಚಳವಳಿಗಳಾವುವು 1930ರವರೆಗೆ ದೃಷ್ಟಿಕೋನದಿಂದ ಕೂಡಿರಲಿಲ್ಲ. ಪೂನಾ ಒಪ್ಪಂದದ ನಂತರ ನಡೆದ ಎಲ್ಲ ಸ್ವಾತಂತ್ರ್ಯ ಚಳವಳಿಗಳು ಸಮಾಜವಾದದ ದೃಷ್ಟಿಕೋನದ ಹಿನ್ನೆಲೆಯಲ್ಲಿ ನಡೆಯಲಾರಂಭಿಸಿದವು. ಮಹಾತ್ಮಗಾಂಧಿಧೀಜಿಯವರು ಕೂಡ ಸಮಾಜವಾದದ ದೃಷ್ಟಿಕೋನದದಲ್ಲಿ ಹರಿಜನ ಪತ್ರಿಕೆಯಯನ್ನು ಹುಟ್ಟು ಹಾಕಿದರು. ಗಾಂಧೀಜಿಯವರು ಅಳವಡಿಸಿಕೊಂಡ ಸಮಾಜವಾದಿ ತತ್ವ ಮುಂದೆ ಯುವಜನರಿಗೆ ಸ್ಫೂರ್ತಿಯಾಯಿತು ಎಂದು ಹೇಳಿದರು.

ವಿಶ್ವವಿದ್ಯಾಲಯ ಕುಲಪತಿ ಡಾ| ಸ.ಚಿ. ರಮೇಶ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ಸ್ವಾತಂತ್ರ್ಯ ಹೋರಾಟದಲ್ಲಿ ಕಾರ್ಮಿಕ ದೃಷ್ಟಿಕೋನ, ಮಹಿಳಾ ದೃಷ್ಟಿಕೋನ, ಸಮಾಜವಾದಿ ದೃಷ್ಟಿಕೋನ ಹೀಗೆ ವಿವಿಧ ದೃಷ್ಟಿಕೋನಗಳು ಮಹತ್ವದ ಪಾತ್ರವಹಿಸಿವೆ. ಈ ವಿವಿಧ ದೃಷ್ಟಿಕೋನಗಳ ಬಗ್ಗೆ ಸಂಶೋಧನೆಗಳು ನಡೆಯುವುದು ಅನಿವಾರ್ಯವಾಗಿದೆ ಎಂದರು.

75ನೇ ಅಮೃತ ಮಹೋತ್ಸವದ ಸಂದರ್ಭದಲ್ಲಿ ಸದೃಢ ದೇಶ ನಿರ್ಮಾಣಕ್ಕೆ ನಾವೆಲ್ಲರೂ ಸದೃಢ ಮನಸ್ಸು ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಈ ಸಂದರ್ಭದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಗುಂಡುರಾವ್‌ ದೇಸಾಯಿ ಅವರನ್ನು ಸನ್ಮಾನಿಸಲಾಯಿತು. ಕನ್ನಡ ವಿಶ್ವವಿದ್ಯಾಲಯದ ಕುಲಸಚಿ ಡಾ| ಎ. ಸುಬ್ಬಣ್ಣ ರೈ ಮಾತನಾಡಿದರು.

Advertisement

ಉಪಕುಲಸಚಿವ ಡಾ| ಎ. ವೆಂಕಟೇಶ ಸ್ವಾತಂತ್ರ್ಯ ಹೋರಾಟಗಾರರನ್ನು ಪರಿಚಯಿಸಿದರು. ಆಜಾದಿ ಕಾ ಅಮೃತ ಮಹೋತ್ಸವದ ಸಂಯೋಜನಾಧಿಕಾರಿ ಡಾ| ಮೋಹನ್‌ ರಾವ್‌ ಪಾಂಚಾಳ ಮತ್ತು ವಿವಿಧ ವಿಭಾಗಗಳ ಅಧ್ಯಾಪಕರು, ಸಂಶೋಧನಾರ್ಥಿಗಳು ಬೋಧಕೇತರ ಸಿಬ್ಬಂದಿಗಳು ಇದ್ದರು. ಮಹಿಳಾ ಅಧ್ಯಯನ ವಿಭಾಗದ ಸಂಶೋಧನಾರ್ಥಿ ಪುಷ್ಪ ನಿರೂಪಿಸಿದರು. ಮಂಜುನಾಥ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next