Advertisement

ಗಾಂಧೀಜಿ ಕಂಡ ಪೌರತ್ವ ತಿದ್ದುಪಡಿ ಕಾಯ್ದೆಯ ಕನಸನ್ನು ಬಿಜೆಪಿ ಸರ್ಕಾರ ನನಸು ಮಾಡಿದೆ: ಕಟೀಲ್

08:43 AM Feb 20, 2020 | Mithun PG |

ಬೀದರ್: ಯಡಿಯೂರಪ್ಪ ಸಿಎಂ ಅಗಿ ರೈತರ, ದೀನ ದಲಿತರ ಕಣ್ಣಿರು ಒರೆಸುವ ಕೆಲಸ ಮಾಡಿದರೆ, ಮಾಜಿ ಸಿಎಂ ಕುಮಾರಸ್ವಾಮಿ ಕಣ್ಣಿರು ಹಾಕಿ ಸಹಾನೂಭೂತಿ ಸೃಷ್ಟಿಸಲು ಪ್ರಯತ್ನಪಟ್ಟರು ಮತ್ತು ಸಿದ್ದರಾಮಯ್ಯ ಅವರು ಜನರಲ್ಲಿ ಕಣ್ಣೀರು ಹಾಕಿಸುವ ಕೆಲಸ ಮಾಡಿದರು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್  ಹೇಳಿದ್ದಾರೆ.

Advertisement

ಬೀದರ್ ನಲ್ಲಿ ನೂತನ ಬಿಜೆಪಿ ಜಿಲ್ಲಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪೌರತ್ವ ಕಾಯ್ದೆ ಗಾಂಧಿ, ಇಂದಿರಾ ಗಾಂಧಿ ಮತ್ತು ಮನಮೋಹನಸಿಂಗ್ ಅವರು ಕಂಡ ಕನಸನ್ನು ಬಿಜೆಪಿ ಸರ್ಕಾರ ನನಸು ಮಾಡುತ್ತಿದ್ದರೆ, ಕಾಂಗ್ರೆಸ್ ಅವರ ಕನಸಿಗೆ ಬೆಂಕಿ ಇಡಲು ಹೊರಟಿದೆ. ಗಾಂಧಿ ಹೇಳಿದಂತೆ ಅಪಪ್ರಚಾರ ಮಾಡಿ ಸಾರ್ವಜನಿಕ ಆಸ್ತಿಗೆ ಬೆಂಕಿ ಹಚ್ಚುವವರು ದೇಶ ದ್ರೋಹಿಗಳು. ಆ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ರಾಷ್ಟ್ರದ ವಿರೋಧಿಗಳಿಗೆ ಬೆಂಗಾವಲಾಗಿ ನಿಲ್ಲುತ್ತಿರುವ ಕಾಂಗ್ರೆಸ್ ರಾಷ್ಟ್ರ ವಿರೋಧಿ ಆಗಿದೆ. ಸಿದ್ದರಾಮಯ್ಯ ರಾಷ್ಟ್ರ ಭಕ್ತರೇ, ವಿರೋಧಿಗಳೇ ಎಂಬುದನ್ನು ಹೇಳಲಿ ಎಂದು ತಿಳಿಸಿದರು.

ರಾಜ್ಯ, ಜನರ ಕಾಳಜಿ ಇದ್ದರೇ ಅಧಿವೇಶನದಲ್ಲಿ ಚರ್ಚೆ, ಹೋರಾಟ ಮಾಡಲಿ, ಅದಕ್ಕೆ ಸರ್ಕಾರ ಅವಕಾಶ ಮಾಡಿಕೊಡಲಿದೆ. ಆದರೆ, ವಿಪಕ್ಷಗಳಿಗೆ ಅಧಿವೇಶ ಬೇಡ, ಗಲಾಟೆ ಮಾಡುವುದು ಬೇಕಾಗಿದೆ ಎಂದು ಕಿಡಿಕಾರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next