Advertisement

ಗಾಂಧಿ, ಮೋದಿ ಚಿಂತನೆ ಕುಕ್ಕೆಯಿಂದ ಈಡೇರುತ್ತಿದೆ: ನಳಿನ್‌ ಕುಮಾರ್‌

12:43 AM Oct 17, 2021 | Team Udayavani |

ಸುಬ್ರಹ್ಮಣ್ಯ: ಯಾತ್ರಾ ಕ್ಷೇತ್ರವಾಗಿ ದೇಶದಲ್ಲಿ ಹೆಸರು ಗಳಿಸಿರುವ ಕುಕ್ಕೆ ಸುಬ್ರಹ್ಮಣ್ಯ ಇದೀಗ ತನ್ನ ಕಾರ್ಯ ಚಟುವಟಿಕೆಗಳಿಂದಲೂ ರಾಷ್ಟ್ರದಲ್ಲಿ ಗುರುತಿಸಿಕೊಳ್ಳುತ್ತಿದೆ. ಇದೀಗ ಸ್ವಚ್ಛತಾ ಅಭಿಯಾನದ ಮೂಲಕ ರಾಷ್ಟ್ರಪಿತ ಮಹಾತ್ಮಾ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಅವರ ಕನಸು ನನಸಾಗುತ್ತಿದೆ ಎಂದು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಹೇಳಿದರು.

Advertisement

ಕುಕ್ಕೆ ದೇವಸ್ಥಾನದ ವತಿಯಿಂದ ಪ್ರತೀ ಏಕಾದಶಿಯಂದು ನಡೆಯ ಲಿರುವ ನಡೆಯುವ ಸ್ವಚ್ಛ ಮಂದಿರ ಅಭಿಯಾನಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.

ಕ್ಷೇತ್ರಕ್ಕೆ ಬರುವ ಭಕ್ತರಿಗೆ ಇದು ಪ್ರೇರಣದಾಯಿಯಾಗಿದ್ದು, ಬದ ಲಾವಣೆಯ ಗಾಳಿ ಎಲ್ಲೆಡೆ ಬೀಸಲಿದೆ. ಸ್ವಚ್ಛ ಮಂದಿರ ಅಭಿಯಾನವನ್ನು ಸೇವಾರೂಪದಲ್ಲಿ ನೆರವೇರಿಸುವ ಯೋಜನೆ ಅತ್ಯಂತ ಶ್ರೇಷ್ಠವಾಗಿದೆ ಎಂದರು.

ಸ್ವಚ್ಛತೆಯೂ ಭಗವಂತನ ಸೇವೆ
ಅಧ್ಯಕ್ಷತೆ ವಹಿಸಿದ್ದ ಸಚಿವ ಎಸ್‌. ಅಂಗಾರ ಮಾತನಾಡಿ, “ಸ್ವಚ್ಛ ಗ್ರಾಮ,ಸ್ವಚ್ಛ ಊರು’ ಪರಿಕಲ್ಪನೆ ಎಲ್ಲರ ಮನದಲ್ಲಿ ಮೂಡಬೇಕಿದೆ. ಸ್ವಚ್ಛತೆ ಅನ್ನುವುದು ಕೂಡ ನಾವು ಭಗವಂತನಿಗೆ ಸಲ್ಲಿಸುವ ಸೇವೆ ಅನ್ನುವ ಅರಿವು ಸರ್ವರಲ್ಲೂ ಮೂಡಿಸುವ ಮೂಲಕ ದೇವಸ್ಥಾನದ ಆಡಳಿತ ಶ್ಲಾಘನೀಯ ಕಾರ್ಯ ಮಾಡಿದೆ.ಸರ್ವರೂ ಜಾಗೃತರಾಗಿ ಈ ಕೈಂಕರ್ಯಕ್ಕೆಕರಜೋಡಿಸಬೇಕು ಎಂದರು.

ಇದನ್ನೂ ಓದಿ: ಟಿಬೆಟಿಯನ್‌ ಗಡಿ ಪೊಲೀಸ್‌ಗೆ ಸೇರಿದ 38 ವೈದ್ಯರು

Advertisement

ಲಾಂಛನ ಅನಾವರಣ
ಕುಕ್ಕೆ ದೇವಸ್ಥಾನದಲ್ಲಿ ನೌಕರರಾಗಿದ್ದು, ಖಾಯಮಾತಿ ಪಡೆದ ಸಿಬಂದಿಗೆ ಖಾಯಮಾತಿ ಪತ್ರವನ್ನು ಅತಿಥಿಗಳು ವಿತರಿಸಿದರು. ಸ್ವಚ್ಛ ಮಂದಿರ ಸೇವಾ ಅಭಿಯಾನದ ಲಾಂಛನ ಅನಾವರಣ ಮಾಡಲಾಯಿತು.

ಸುಬ್ರಹ್ಮಣ್ಯ ಗ್ರಾ.ಪಂ. ಅಧ್ಯಕ್ಷೆ ಲಲಿತಾ ಗುಂಡಡ್ಕ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮೋಹನ್‌ರಾಂ ಸುಳ್ಳಿ, ಸದಸ್ಯರಾದ ಪಿಜಿಎಸ್‌ಎನ್‌ ಪ್ರಸಾದ್‌, ಪ್ರಸನ್ನ ದರ್ಬೆ,ಮನೋಹರ ರೈ, ಶೋಭಾ ಗಿರಿಧರ್‌ ಸ್ಕಂದ, ವನಜಾ ಭಟ್‌, ಮಾಸ್ಟರ್‌ ಪ್ಲಾನ್‌ ಸದಸ್ಯರಾದ ಕಿಶೋರ್‌ ಕುಮಾರ್‌, ಮನೋಜ್‌ ಸುಬ್ರಹ್ಮಣ್ಯ, ಚಂದ್ರಶೇಖರ ಮರ್ದಾಳ, ಡಾ| ಚಂದ್ರಶೇಖರ ನಲ್ಲೂರಾಯ ವೇದಿಕೆಯಲ್ಲಿದ್ದರು.ಕೆಎಸ್‌ಎಸ್‌ ಕಾಲೇಜು ಪ್ರಾಂಶುಪಾಲ ಗೋವಿಂದ ಎನ್‌.ಎಸ್‌. ಪ್ರಸ್ತಾವನೆಗೈದರು. ದೇಗುಲದ ಕಾರ್ಯನಿರ್ವಹಣಾಧಿಕಾರಿ ಡಾ| ನಿಂಗಯ್ಯ ಸ್ವಾಗತಿಸಿದರು. ಎಸ್‌ಎಸ್‌ಪಿಯು ಪ್ರಾಂಶುಪಾಲ ಸೋಮಶೇಖರ್‌ ವಂದಿಸಿದರು. ಉಪನ್ಯಾಸಕಿ ಆರತಿ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.