Advertisement

ಜಗತ್ತಿನಾದ್ಯಂತ ಮಹಾತ್ಮನಿಗೆ ಗೌರವ

12:20 AM Oct 03, 2020 | mahesh |

ಅಹ್ಮದಾಬಾದ್‌/ಹೊಸದಿಲ್ಲಿ: ಮಹಾತ್ಮಾ ಗಾಂಧಿ ಅವರ 151ನೇ ಜನ್ಮದಿನವನ್ನು ದೇಶಾದ್ಯಂತ ಮತ್ತು ಜಗತ್ತಿನ ಹಲವು ಭಾಗಗಳಲ್ಲಿ ಶುಕ್ರವಾರ ಆಚರಿಸಲಾಯಿತು. ಅಹ್ಮದಾಬಾದ್‌ನಲ್ಲಿರುವ ಸಾಬರಮತಿ ಆಶ್ರಮದಲ್ಲಿ ಸರ್ವ ಧರ್ಮಗಳ ಪ್ರಾರ್ಥನ ಸಭೆ ಆಯೋಜಿಸಲಾಗಿತ್ತು. ಕೋವಿಡ್ ಹಿನ್ನೆಲೆಯಲ್ಲಿ ಸೀಮಿತ ಜನರನ್ನು ಮಾತ್ರ ಆಹ್ವಾನಿಸಲಾಗಿತ್ತು.

Advertisement

ಹೊಸದಿಲ್ಲಿಯಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್‌, ಪ್ರಧಾನಿ ನರೇಂದ್ರ ಮೋದಿ, ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ರಾಜಘಾಟ್‌ನಲ್ಲಿ ಮಹಾತ್ಮ ಗಾಂಧಿ ಅವರ ಸಮಾಧಿಗೆ ಪುಷ್ಪನಮನ ಸಲ್ಲಿಸಿದ್ದಾರೆ. ಬಳಿಕ ವಿಜಯ ಘಾಟ್‌ನಲ್ಲಿ ಮಾಜಿ ಪ್ರಧಾನಿ ದಿ| ಲಾಲ್‌ ಬಹದ್ದೂರ್‌ ಶಾಸ್ತ್ರಿ ಸಮಾಧಿಗೆ ತೆರಳಿ ರಾಷ್ಟ್ರಪತಿ, ಪ್ರಧಾನಿ, ದಿಲ್ಲಿ ಸಿಎಂ ಗೌರವ ಅರ್ಪಿಸಿದರು.

ಮಹಾತ್ಮನಿಗೆ ಪುಷ್ಪ ನಮನ ಸಲ್ಲಿಸಿದ ಬಳಿಕ ಮಾತನಾಡಿದ ಪ್ರಧಾನಿ ಮೋದಿ, “ಮಹಾತ್ಮ ಅವರ ಜೀವನ ಮತ್ತು ಚಿಂತನೆಗಳಿಂದ ಕಲಿಯುವುದು ಬಹಳಷ್ಟಿದೆ’ ಎಂದಿದ್ದಾರೆ.

ಯಶಸ್ಸು ಕಾಣಲಿದೆ
ಇದೇ ವೇಳೆ, ಗಾಂಧಿಯನ್ನು ಸ್ಮರಿಸುತ್ತಾ ಕೃಷಿ ಕಾಯ್ದೆ ಕುರಿತು ಪ್ರಸ್ತಾವಿಸಿರುವ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ, ಮಹಾತ್ಮಾ ಗಾಂಧಿಯವರು ತೋರಿದ ದಾರಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿ ದ್ದಾರೆ. ಆ ಹೋರಾಟಕ್ಕೆ ನಿಶ್ಚಿತವಾಗಿಯೂ ಜಯ ಸಿಗಲಿದೆ ಎಂದಿದ್ದಾರೆ.

ಚಿತ್ರ ಪ್ರದರ್ಶನ
ಯುಎಇ ರಾಜಧಾನಿ ದುಬಾೖಯ ಲ್ಲಿರುವ ಬುರ್ಜ್‌ ಖಲೀಫಾ ಕಟ್ಟಡದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಲೇಸರ್‌ ಚಿತ್ರಗಳನ್ನು ಪ್ರದರ್ಶಿಸಲಾಯಿತು. ಸಾಮಾಜಿಕ ಜಾಲತಾಣಗಳಲ್ಲಿ ಅದರ ನೇರ ಪ್ರದರ್ಶನ ನಡೆಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next