ಕುಣಿಗಲ್: ಗಾಂಧಿ ಜಯಂತಿಯಂದು ಮದ್ಯ ಮಾರಾಟ ಮಾಡುತ್ತಿದ್ದ ಎಡೆಯೂರಿನ ಅಡ್ಡೆಯೊಂದರ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಎರಡು ಬೈಕ್, ಮದ್ಯ ವಶಪಡಿಸಿಕೊಂಡರೂ ಪ್ರಕರಣ ದಾಖಲಿಸದಿರುವ ಬಗ್ಗೆ ತಡವಾಗಿ ಬೆಳಕಿಗೆ ಬಂದಿದೆ. ಅ.2ರಂದು ಅಬಕಾರಿ ಸಬ್‌ಇನ್ಸ್‌ಪೆಕ್ಟರ್ ದೇವರಾಜು, ಸಿಬ್ಬಂದಿ ತಿರುಮಲೇ ಗೌಡ, ಅಮೃತ್ ಗಸ್ತು ತಿರುಗುವಾಗ ಎಡೆಯೂರಿನ ಸಂಗೀತಾ ಮಿಲ್ಟ್ರಿ ಹೋಟೆಲ್‌ಬಳಿ ಎರಡು ಬೈಕ್‌ಗಳ ಬಾಕ್ಸ್‌ಗಳಲ್ಲಿ ಮದ್ಯ ಇಟ್ಟು ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ. ಪೊಲೀಸರನ್ನು ಕಂಡು ಇಬ್ಬರು ಯುವಕರು ಪರಾರಿಯಾಗಿದ್ದಾರೆ.
ಎರಡು ಬೈಕ್ ಹಾಗೂ ಮೂರು ಕೇಸ್ ಮದ್ಯದ ಬಾಕ್ಸ್ ವಶಪಡಿಸಿ ಕೊಂಡು ಕುಣಿಗಲ್ ಅಬಕಾರಿ ಕಚೇರಿಗೆ ತಂದು ಇನ್ಸ್‌ಪೆಕ್ಟರ್ ಕಮಲಾಕರ್ ವಶಕ್ಕೆ ನೀಡಿದ್ದಾರೆ. ಮಧ್ಯ ರಾತ್ರಿವರೆಗೂ ಮದ್ಯದಂಗಡಿ ಮಾಲೀಕರ ಜೊತೆ ಮಾತುಕತೆ ನಡೆದು ಯಾವುದೇ ಪ್ರಕರಣ ದಾಖಲಿಸಿಕೊಳ್ಳದೆ ಬೈಕ್ ಬಿಟ್ಟು ಕಳುಹಿಸಲಾಗಿದೆ ಎಂದು ಎಡೆ ಯೂರು ಹೋಬಳಿ ಕೊಪ್ಪ ಗ್ರಾಪಂ ಮಾಜಿ ಅಧ್ಯಕ್ಷ ಹಾಗೂ ಸಾಮಾಜಿಕ ಹೋರಾಟಗಾರ ಕೆ.ಜಿ.ಲಕ್ಷ್ಮಣ ಆರೋಪಿಸಿದ್ದಾರೆ.
ಈ ಸಂಬಂಧ ಅಬಕಾರಿ ಡೀಸಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದಾಗ ದೂರು ನೀಡಿದರೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಇಲಾಖೆಯಲ್ಲಿ ಅಧಿಕಾರಿಗಳ ನಡುವೆ ಸಮನ್ವಯತೇ ಇಲ್ಲದಿರುವುದು ಎದ್ದು ಕಾಣುತ್ತಿದೆ. ಅಕ್ರಮ ಮದ್ಯ ಮಾರಾಟ ಮಾಡುವುದೇ ಅಪರಾಧ. ಆದರೆ ಗಾಂಧಿ ಜಯಂತಿ ದಿನವೇ ಮದ್ಯ ಮಾರಾಟ ಮಾಡು ವುದು ಪತ್ತೆಯಾದರೂ ಕ್ರಮ ಕೈಗೊಳ್ಳದಿರುವುದು ಅನುಮಾನಕ್ಕೆ ಕಾರಣ ವಾಗಿದೆ. ಅಬಕಾರಿ ಡೀಸಿ ಅವರು ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಬೆದರಿಕೆ ಕರೆ: ಈ ಪ್ರಕರಣಕ್ಕೆ ಸಂಬಂಧಿಸಿ ದಾಳಿ ನಡೆಸಿರುವ ಸಬ್‌ಇನ್ಸ್‌ಪೆಕ್ಟರ್ ದೇವ ರಾಜುಗೆ ಕಳೆದ ಎರಡು ದಿನಗಳಿಂದ ಎಡೆಯೂರು ಹೋಬಳಿ ರಾಜಕೀಯ ಮುಖಂಡರಿಂದ ಬೆದರಿಕೆ ಕರೆಗಳು ಬರುತ್ತಿವೆ. ಲೋಕಾಯುಕ್ತ, ಅಬಕಾರಿ ಮೇಲಧಿಕಾರಿಗಳಿಗೆ ದೂರು ನೀಡುವುದಾಗಿ ಬೆದರಿಕೆ ಕರೆಗಳು ಬರುತ್ತಿವೆ. ನನಗೆ ಆರೋಗ್ಯದ ಸಮಸ್ಯೆ ಇದೆ.
ಈ ಸಂಬಂಧ ಕರೆ ಮಾಡಿರುವ ದೂರವಾಣಿ ಸಂಖ್ಯೆಗಳ ಸಮೇತ ಮೇಲಧಿಕಾರಿಗಳಿಗೆ ಪತ್ರ ಬರೆಯುತ್ತೇನೆ ಎಂದು ಸಬ್‌ಇನ್ಸ್‌ಪೆಕ್ಟರ್ ದೇವರಾಜು ತಿಳಿಸಿದ್ದಾರೆ.