Advertisement

ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ  ಗಾಂಧಿ ಜಯಂತಿ  ಪ್ರಯುಕ್ತ ಗಾಂಧೀ ಸ್ಮೃತಿ ಕಾರ್ಯಕ್ರಮ

03:26 PM Oct 02, 2021 | Team Udayavani |

ಮೂಡಿಗೆರೆ: ರಾಜ್ಯದ 143 ತಾಲೂಕಿನಲ್ಲಿ ಗಾಂಧಿ ಸ್ಮೃತಿ ಕಾರ್ಯಕ್ರಮದ ಮುಖಾಂತರ ಕುಡಿತದ ಚಟವನ್ನು ಬಿಟ್ಟಿರುವ ನವಜೀವನ ಸಮಿತಿಯ ಸದಸ್ಯರಿಗೆ ಅಭಿನಂದನೆ ಮತ್ತು ಜಾಗೃತಿ ಅಣ್ಣ ಜಾಗೃತಿ ಮಿತ್ರ ಎಂಬ ಗೌರವವನ್ನು ನೀಡುತ್ತಿದ್ದು ಮೂಡಿಗೆರೆ ತಾಲೂಕಿನಲ್ಲಿ ಗಾಂಧಿ ಜಯಂತಿ ಪ್ರಯುಕ್ತ  ನವಜೀವನ ಸಮಿತಿ ಸದಸ್ಯರಿಗೆ ಅಭಿನಂಧನೆಯನ್ನು ಸಲ್ಲಿಸಿ ಮೂಡಿಗೆರೆ ತಾಲೂಕಿನ ಯೋಜನಾಧಿಕಾರಿಯವರಾದ ಶಿವಾನಂಧ ಪಿ ಇವರು ಪ್ರಾಸ್ತಾವಿಕ ಮಾತುಗಳನ್ನು ಆಡಿದರು.

Advertisement

ಸಮಾಜದಲ್ಲಿ ಜಾತಿ ನಿಂಧನೆ, ಸಹಿಷ್ಣತೆಯಿಂದಾಗಿ ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದ್ದು ಉತ್ತಮ ಸಮಾಜ ನಿರ್ಮಾಣ ಮಾಡ ಬೇಕಾದರೆ ಬಾಪೂಜಿ ಕಂಡ ಕನಸು ಸತ್ಯ ಮತ್ತು ಅಹಿಷ್ಣುತೆ  ಮಾರ್ಗವನ್ನು ಮೈಗೂಡಿಸಿ ಕೊಂಡರೆ ಉತ್ತಮ ಸಮಾಜವನ್ನು ಮಾಡಲು ಸಾದ್ಯ. ಪ್ರತಿ ಗ್ರಾಮದಲ್ಲಿಯೂ ಸರ್ವಧರ್ಮದವರು ಶಾಂತಿಯಿಂದ ನಡೆದು ಕೊಂಡರೆ ಒಳ್ಳೆಯ ಚಿಂತನೆ ನಿರ್ಮಾಣ ಮಾಡಲು ಸಾದ್ಯ, ಆಧ್ಯಾತ್ಮಕಿ ಚಿಂತಕರು, ಜಿಲ್ಲಾ ಜನಜಾಗೃತಿ ಸ್ಥಾಪಕಾಧ್ಯಕ್ಷರಾದ ಚಿಪ್ರಗುತ್ತಿ ಪ್ರಶಾಂತ್‌ರವರು ತಿಳಿಸಿದರು.

ಇಡೀ ರಾಷ್ಟ್ರವೇ ಗಾಂಧೀಜಿಯವರ ಆದರ್ಶ ವ್ಯಕ್ತಿತ್ವವನ್ನು ಮನಗಂಡು ನಮ್ಮ ಸುತ್ತಲಿನ ಪರಿಸರ ಸ್ವಚ್ಛತೆ ನೈರ್ಮಲ್ಯವನ್ನು ಮಾಡುವ ನಿಟ್ಟಿನಲ್ಲಿ ಇಂದಿನ ಪ್ರದಾನಿ ನರೇಂದ್ರ ಮೋದಿಯವರು ಸ್ವಚ್ಛತಾ ಅಭಿಯಾನವನ್ನು ಪ್ರಾರಂಭಿಸಿದ್ದು ಯಶಸ್ವಿಯೂ ಆಗಿದೆ ಇದೇ ನಿಟ್ಟಿನಲ್ಲಿ ಗ್ರಾಮಾಭೀವೃಧ್ಧಿ ಯೋಜನೆ ದುರ್ಬಲ ವರ್ಗದಲ್ಲಿ ತಾಂಡವ ಆಡುತ್ತಿರುವ ಮದ್ಯಪಾನ ಪಿಡುಗನ್ನು ದೂರ ಮಾಡಲು ದುಶ್ಚಟ ಮುಕ್ತ ಸಮಾಜವನ್ನು ನಿರ್ಮಾಣ ಮಾಡಲು ಮದ್ಯ ವರ್ಜನ ಶಿಭಿರ, ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮಗಳ ಮುಖಾಂತರ  ಗ್ರಾಮೀಣ ಪರಿವರ್ತನೆಯನ್ನು ಗ್ರಾಮಾಭೀವೃದ್ಧಿ ಯೋಜನೆ ಮಾಡುತ್ತಿದೆ ಎಂದು ರವಿ ಜೆ.ಎ ಪೋಲೀಸ ಠಾಣಾಧಿಕಾರಿ, ಮೂಡಿಗೆರೆ ಇವರು ಕಾರ್ಯಕ್ರಮವನ್ನು ಉದ್ಠಾಟನೆ ಮಾಡಿ ಮಾತನಾಡಿದರು.

ರಾಮರಾಜ್ಯ ನಿರ್ಮಾಣವಾಗ ಬೇಕಾದರೆ ಮಕ್ಕಳ ಶೈಕ್ಷಣಿಕ ಜೀವನದಲ್ಲಿಯೇ ಧಾರ್ಮಿಕತೆ ಮತ್ತು ಆಧ್ಯಾತ್ಮಿಕ ಚಿಂತನೆಗೆ ಪ್ರಭಾವಿತರಾದರೆ ಆದರ್ಶ ವ್ಯಕ್ತಿಗಳನ್ನಾಗಿ ನಿರ್ಮಾಣ ಮಾಡಲು ಸಾಧ್ಯ. ಅಹಿಂಸ್ಮಾತ್ಮಕ ವಿಷಯದ ಮುಖಾಂತರ ಶಾಂತಿ ಸ್ಥಾಪನೆ ಮಾಡಬಹುದು. ಎಲ್ಲಾ ಧರ್ಮದ ಜನರು ದೇವನೊಬ್ಬ ನಾಮ ಹಲವು ಎಂಬ ತತ್ವವನ್ನು ಅನುಸರಿಸಿದಲ್ಲಿ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾದ್ಯವಿದೆ ಗ್ರಾಮೀಣ ಪ್ರದೇಶದಲ್ಲಿ ಮಕ್ಕಳೀಗೆ ವ್ಯಕ್ತಿತ್ವ ನಿರ್ಮಾಣ ಸಮಾಜದ ಜವಾಬ್ದಾರಿಗಳ ಬಗ್ಗೆ ಅರಿವು ಮೂಡಿಸುವುದೇ ಶಿಕ್ಷಕರ ಆದ್ಯ ಕರ್ತವ್ಯ ಆಗಬೇಕು ಎಂದು ಶಿಕ್ಷಕರಾದ ಸುರೇಶ್‌ ಗೌಡರವರು ತಿಳಿಸಿದರು.

Advertisement

ಧೃಡ ನಿರ್ಧಾರ ಮತ್ತು ಸತತ ಪ್ರಯತ್ನದಿಂದ ಅಧ್ಯಯನ ಶೀಲರಾದರೆ ನಮ್ಮ ಮನೆಯ ಮಕ್ಕಳನ್ನು ಗಾಂಧೀಜಿಯನ್ನಾಗಿ ನೋಡಲು ಸಾಧ್ಯವಿದೆ. ಬದಲಾವಣೆ  ಜಗದ ನಿಯಮ ಎಂಬ ವೇದೋಕ್ತಿಯಂತೆ ಸರ್ಕಾರಗಳು ಉಚಿತ ಕಾನೂನು ಸಲಹೆಗಳನ್ನು ನೀಡುವುದರ ಮೂಲಕ ಕೋಮು ಸೌಹಾರ್ಧತೆಯನ್ನು ಕಾಪಾಡಲು ಸಾಧ್ಯವಾಗಿದೆ ಎಂದು ವಕೀಲರಾದ ಭಾಗ್ಯ ನಾರಾಯಣ್‌ ರವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಪಾನ ಮುಕ್ತ ಜೀವನವನ್ನು ನಡೆಸುತ್ತಿರುವ ನವಜೀವನ ಸಮಿತಿ ಸದಸ್ಯರು, ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂ ಸೇವಕರು, ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟದ ಸದಸ್ಯರು., ಯೋಜನೆಯ ಸಿಬ್ಬಂಧಿ ವರ್ಗದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಿವರಾಜ್‌ ಬಿ.ಎಸ್‌ ಇವರು ನಿರೂಪಿಸಿ ಸ್ವಾಗತವನ್ನು ದಿನೇಶ್‌ ಹಾಗೂ ಧನ್ಯವಾದವನ್ನು ವಿಘ್ನೇಶ್‌ರವರು ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next