Advertisement

ಮಾಗೋಡು ಗ್ರಾಪಂಗೆ ಗಾಂಧಿ ಗ್ರಾಮ ಪ್ರಶಸ್ತಿ

03:45 PM Oct 13, 2019 | Team Udayavani |

ಶಿರಾ: ಬಯಲು ಮುಕ್ತ ಶೌಚಾಲಯ, ಸ್ವಚ್ಚತೆ ಹಾಗೂ ಪಾರದರ್ಶಕ ಆಡಳಿತ ನೀಡಿದ ಹಿನ್ನೆಲೆ ಯಲ್ಲಿ ಮಾಗೋಡು ಗ್ರಾಪಂಗೆ 2019ನೇ ಸಾಲಿನ ಗಾಂಧಿ ಗ್ರಾಮ ಪ್ರಶಸ್ತಿ ಲಭಿಸಿದೆ.

Advertisement

9 ಗ್ರಾಮಗಳಿದ್ದು 8 ಸಾವಿರ ಜನಸಂಖ್ಯೆ ಹೊಂದಿದೆ. 1130 ಕುಟುಂಬಗಳು ವಾಸಿಸುತ್ತಿದ್ದು, 920 ಗೃಹ ಶೌಚಗೃಹ ನಿರ್ಮಾಣ ಮಾಡುವ ಮೂಲಕ ಬಯಲು ಬರ್ಹಿದೆಸೆ ಮುಕ್ತ ಗ್ರಾಮವಾಗಿದೆ. 6 ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಿದೆ. ಪಿಡಿಒ ಎಸ್‌. ಶಿವರಾಮಯ್ಯ ಕಾರ್ಯವೈಖರಿಯಿಂದ ಗಾಂಧಿ ಪ್ರಶಸ್ತಿ ಪುರಸ್ಕಾರ-2019 5 ಲಕ್ಷರೂಪಾಯಿ ಬಹುಮಾನ ಪಡೆದಿದೆ.

ಸರ್ಕಾರ ಶೇ.14ರ ಅಡಿ ನೀಡುವಂತ ಅನುದಾನ ಶೇ. 100ರಷ್ಟು ಬಳಕೆ ಮಾಡಿದ್ದು ಕುಡಿಯುವ ನೀರು ಮತ್ತು ಸ್ವತ್ಛತೆಗೆ ಹೆಚ್ಚು ಆದ್ಯತೆ ನೀಡುವುದರ ಜೊತೆಗೆ ಪರಿಶಿಷ್ಟ ಜಾತಿ-ಪಂಗಡದ ವಿದ್ಯಾರ್ಥಿಗಳಿಗೆ ಉಚಿತ ನೋಟ್‌ ಪುಸ್ತಕ ವಿತರಿಸಲಾಗಿದೆ. 10 ಅಂಗವಿಕಲರಿಗೆ ತ್ರಿಚಕ್ರ ಸೈಕಲ್‌ ನೀಡಲಾಗಿದೆ. ಅಧ್ಯಕ್ಷೆ ಸುಮಿತ್ರಮ್ಮ ಕುಮಾರ್‌ ಮಾತನಾಡಿ,

ಪಿಡಿಒ, ಸಿಬ್ಬಂದಿ ಮತ್ತು ಸದಸ್ಯರ ಸಹಕಾರದಿಂದ ಪ್ರಗತಿ ಸಾಧ್ಯ. ಸರ್ಕಾರದ ಪ್ರತಿಯೊಂದು ಯೋಜನೆ ಪರಿಣಾಮ ಕಾರಿಯಾಗಿ ಜಾರಿ ಮಾಡಲು ಸಾಧ್ಯ ಎಂದು ತಿಳಿಸಿದ್ದಾರೆ. ಮಾಗೋಡು ಗ್ರಾಮ ಪಂಚಾಯಿತಿಯನ್ನು ಮಾದರಿ ಮಾಡುವ ಉದ್ದೇಶ ಇದ್ದು, ಕಸ ವಿಲೇವಾರಿ ಮಾಡಲು ಬಿಬಿಎಂಪಿ ಮಾದರಿ ಒಣ ಮತ್ತು ಹಸಿ ಕಸ ವಿಲೇವಾರಿ ಮಾಡುವ ಗುರಿ ಹೊಂದಲಾಗಿದೆ ಎಂದು ಪಿಡಿಒ ಎಸ್‌.ಶಿವರಾಮಯ್ಯ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next