Advertisement

ತುಂಬಾಡಿ ಗ್ರಾಪಂಗೆ ಗಾಂಧಿ ಗ್ರಾಮ ಪ್ರಶಸ್ತಿ

04:49 PM Oct 04, 2018 | |

ಕೊರಟಗೆರೆ: ಜನತೆಗೆ ಮೂಲಭೂತ ಸೌಲಭ್ಯ ಕಲ್ಪಿಸುವಲ್ಲಿ ಮೊದಲ ಸ್ಥಾನದಲ್ಲಿರುವ ಉಪಮುಖ್ಯಮಂತ್ರಿಗಳ ಕ್ಷೇತ್ರವಾದ ಕೊರಟಗೆರೆ ತಾಲೂಕಿನ ತುಂಬಾಡಿ ಗ್ರಾಮ ಪಂಚಾಯಿತಿ 2017-18ನೇ ಸಾಲಿನ ಗಾಂಧಿಗ್ರಾಮ ಪುರಸ್ಕಾರ ಪ್ರಶಸ್ತಿಗೆ ಭಾಜನವಾಗಿದೆ.

Advertisement

ಕಳೆದ 2013-14 ನೇ ಸಾಲಿನಲ್ಲಿ ವಿವಿಧ ಕಾಮಗಾರಿಗಳಲ್ಲಿ ಹಣ ದುರುಪಯೋಗವಾಗಿ ಜಿಲ್ಲೆಯಲ್ಲೇ ಕಳಪೆ ಗ್ರಾಮ ಪಂಚಾಯಿತಿ ಎಂದು ಹೆಸರು ಪಡೆದಿತ್ತು. ಕೊರಟಗೆರೆ ತಾಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ತುಂಬಾಡಿ ಗ್ರಾಪಂ ವಿಜಯಕುಮಾರಿ ಪಿಡಿಒ ಆಗಿ ಬಂದನಂತರ ಗ್ರಾಪಂ ಸದಸ್ಯರ ಸಹಕಾರ ದೊಂದಿಗೆ ಸಾರ್ವಜನಿಕರ ವಿಸ್ವಾಸ ಗಳಿಸಿದರು.
 
 13 ಗ್ರಾಮಗಳ 8, 500 ಜನಸಂಖ್ಯೆ ಹೊಂದಿರುವ ಗ್ರಾಮಗಳಲ್ಲಿ ಸರ್ಕಾರದ ವಿವಿಧ ಯೋಜನೆಗಳಡಿ ವಸತಿ ಸೌಲಭ್ಯ, ಸಾವಿರಕ್ಕೂ ಹೆಚ್ಚು ಶೌಚಾಲಯಗಳ ನಿರ್ಮಾಣ, ಬಯಲು ಶೌಚಮುಕ್ತ ಗ್ರಾಮ ಪಂಚಾಯ್ತಿ ಘೋಷಣೆ, ನರೇಗಾ ಯೋಜನೆಯಡಿ ಶಾಲಾ ಆಟದ ಮೈದಾನ ನಿರ್ಮಾಣ, ಅಂಗನವಾಡಿಗಳನ್ನು, ಮನೆಯ ಸುತ್ತಮುತ್ತ ಸ್ವತ್ಛತೆಕಾಪಾಡಲು ದನದ ಕೊಟ್ಟಿಗೆಗಳನ್ನು, 14ನೇ ಹಣಕಾಸಿನಲ್ಲಿ ಕಾಂಕ್ರೀಟ್‌ ರಸ್ತೆ ನಿರ್ಮಾಣ, ಕುಡಿಯುವ ನೀರು, ಚರಂಡಿ ಸೇರಿದಂತೆ ಇವೆಲ್ಲವೂಗಳ ಜೊತೆಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಮೊದಲನೆ ಸ್ಥಾನದಲ್ಲಿ ಕಾಮಗಾರಿ ನಡೆಸಿದ್ದಾರೆ.

 ರಾಷ್ಟ್ರಪಿತ ಗಾಂಧೀಜಿಯವರ ರಾಜಕೀಯ ಮುಕ್ತವಾಗಿ ಗ್ರಾಮೀಣ ಪ್ರದೇಶ ಗಳಲ್ಲಿ ಜನರು ಸಹಭಾಗಿತ್ವದಲ್ಲಿ ಸರ್ಕಾರ ಕಾರ್ಯನಿರ್ವಹಿಸಬೇಕೆಂಬ ಅವರ ಕನಸು ಇಂದು ನನಸಾಗಿದೆ.

ಗ್ರಾಪಂ ಅಭಿವೃದ್ಧಿಗಾಗಿ ಕೈಜೋಡಿಸುತ್ತಿರುವ ಪಂಚಾಯಿತಿಯ ಎಲ್ಲಾ ಸದಸ್ಯರು ಈ ಪ್ರಶಸ್ತಿಗೆ ಅಭಿನಂದನಾರ್ಹರು ಎಂದು ಬೆಂಗಳೂರಿನಲ್ಲಿ ಪಂಚಾಯತ್‌ ರಾಜ್‌ ಮತ್ತು ಗ್ರಾಮೀಣ ಅಭಿವೃದ್ಧಿ ಇಲಾಖೆ ಹಮ್ಮಿಕೊಂಡಿದ್ದ ಗಾಂಧಿಜಯಂತಿ
ಕಾರ್ಯಕ್ರಮದಲ್ಲಿ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿಯನ್ನು ಮುಖ್ಯಮಂತ್ರಿಗಳಿಂದ ಪಡೆದ ತುಂಬಾಡಿ ಗ್ರಾಪಂ ಅಧ್ಯಕ್ಷೆ ಉಮಾ ಮತ್ತು ಪಿಡಿಒ ವಿಜಯಕುಮಾರಿ ಅಭಿಪ್ರಾಯಪಟ್ಟಿದ್ದಾರೆ.  

ಸರ್ಕಾರ ಗ್ರಾಮೀಣ ಜನರಿಗಾಗಿ ರೂಪಿಸಿರುವ 34 ವಿವಿಧ ಯೋಜನೆಗಳನ್ನು ಹಾಗೂ ಎನ್‌.ಆರ್‌.ಜಿ. ಯೋಜನೆ ಸಮರ್ಪಕ ಅನುಷ್ಠಾನದೊಂದಿಗೆ ಸರ್ಕಾರ ಕೇಳಿದ ಎಲ್ಲಾ ಮಾಹಿತಿಗಳನ್ನು ನಮ್ಮ ಪಂಚಾಯಿತಿಯಲ್ಲಿರುವ ಹಾಗೆ
ಯಥಾವತ್ತಾಗಿ ಸರ್ಕಾರಕ್ಕೆ ಮಾಹಿತಿ ನೀಡಿದೆ. ಸಾರ್ವಜನಿಕರ ಹಾಗೂ ಜನಪ್ರತಿನಿಧಿಗಳ ಸಹಾಯದಿಂದ ಈ ಪ್ರಶಸ್ತಿ ಬಂದಿದೆ.
 ವಿಜಯಕುಮಾರಿ ಗ್ರಾಪಂ ಪಿಡಿಒ ತುಂಬಾಡಿ.

Advertisement

ತುಂಬಾಡಿ ಪಂಚಾಯತಿ ವ್ಯಾಪ್ತಿಯಲ್ಲಿ ಸರ್ಕಾರದ ವಿವಿಧ ಯೋಜನೆಗಳಡಿ ಗ್ರಾಮೀಣ ಜನರಿಗೆ ಮೂಲಭೂತ
ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಮೊದಲ ಸ್ಥಾನದಲ್ಲಿದ್ದು ಗ್ರಾಪಂ ತನ್ನ ಕೆಲಸಕ್ಕೆ ತಕ್ಕ ಪ್ರತಿಫ‌ಲವಾಗಿ ಸರ್ಕಾರದಿಂದ ಪ್ರತಿಷ್ಠಿತ ಗಾಂಧಿ ಪುರಸ್ಕಾರಕ್ಕೆ ಪಾತ್ರವಾಗಿರುವುದು ಹರ್ಷದಾಯಕವಾಗಿದೆ. ಇಲ್ಲಿನ ಸಾರ್ವಜನಿಕರ ಮತ್ತು ಸದಸ್ಯರ ಸಹಕಾರ ಪ್ರಶಸ್ತಿ ಪಡೆಯಲು ಸಾಧ್ಯವಾಗಿದೆ.
 ಶಿವಪ್ರಸಾದ್‌ ತಾಪಂ ಇಒ

Advertisement

Udayavani is now on Telegram. Click here to join our channel and stay updated with the latest news.

Next