Advertisement

ಗಾಂಧಿ ಮತ್ತು ನೋಟು ಟ್ರೇಲರ್‌ ಬಂತು

03:30 PM Sep 11, 2021 | Team Udayavani |

“ಗಾಂಧಿ ಮತ್ತು ನೋಟು’ ಚಿತ್ರದ ಟ್ರೇಲರ್‌ ಅನ್ನು ನಟ ಶಿವರಾಜ ಕುಮಾರ್‌ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಸಾಹಿತಿ ವಿ.ನಾಗೇಂದ್ರಪ್ರಸಾದ್‌ ಪುತ್ರಿ ದಿವಿಜಾ ನಾಗೇಂದ್ರ ಪ್ರಸಾದ್‌ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.ಲೋಕೇಶ್‌ ಡಿ.ಕೆ,
ಮುರುಧ್ಯ, ಪ್ರಜ್ಞಾ ಬ್ರಹ್ಮಾವರ್‌, ಕೆ.ಬಿ.ರವಿ, ರಂಗಸ್ವಾಮಿ, ನವೀನ್‌, ವಿಶಾಲ್‌ ಮುಂತಾದವರು ತಾರಾ ಬಳಗದಲ್ಲಿದ್ದಾರೆ.

Advertisement

ಭಾವನಕಂಬೈನ್ಸ್‌ ಲಾಂಛನದಲ್ಲಿ ಸುಧಾರಾಣಿ ಹೆಚ್‌.ಆರ್‌, ವೀಣಾ ಪದ್ಮನಾಭ, ಮಂಜುನಾಥ್‌ ಬಿ.ಎನ್‌ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಈ ಹಿಂದೆ ಪ್ರಿಯಾಂಕ ಉಪೇಂದ್ರ ಅಭಿನಯದ ಸೆಕೆಂಡ್‌ ಆಫ್ ಚಿತ್ರ ನಿರ್ದೇಶಿಸಿದ್ದ ಯೋಗಿ ದೇವಗಂಗೆ ಈ ಚಿತ್ರದ ನಿರ್ದೇಶಕರು.ಕಥೆ, ಚಿತ್ರಕಥೆಕೂಡ ಯೋಗಿ ಅವರದೆ.

ಇದನ್ನೂ ಓದಿ:ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾಯಿ ಸಿಎಂ ಸ್ಥಾನಕ್ಕೆ ದಿಢೀರ್ ರಾಜೀನಾಮೆ

ಗಾಂಧಿ ತತ್ವಗಳನ್ನು ಹಾಗೂ ನೋಟನ್ನು ಈಗಿನ ಜನ ಯಾವ ರೀತಿ ಬಳಸಿಕೊಳ್ಳುತ್ತಿದ್ದಾರೆ ಎಂಬ ವಿಷಯವನ್ನು ಹಳ್ಳಿ ಹುಡುಗಿ ಪಾತ್ರದ ಮೂಲಕ ಹೇಳ ಹೊರಟಿದ್ದಾರೆ ನಿರ್ದೇಶಕರು. ಚಿಕ್ಕ ವಯಸ್ಸಿನ ಈ ಹುಡುಗಿ ಹೇಳುವ ಮಾತು ಎಲ್ಲಾ ವರ್ಗದ ಜನರ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದೇ ಇದರ ಕಥಾಸಾರಾಂಶ. ಸಾಗರದ ತುಂಬ್ರಿ ಎಂಬ ಸ್ಥಳದಲ್ಲೇ ಹೆಚ್ಚಿನ ಚಿತ್ರೀಕರಣ ನಡೆದಿದೆ. ಪ್ರಸ್ತುತ ಚಿತ್ರ ಡಿಐನಲ್ಲಿದೆ. ಅಕ್ಟೋಬರ್‌ ವೇಳೆಗೆ ತೆರೆಗೆ ಬರುವ ಸಾಧ್ಯತೆಯಿದೆ.ವಿ.ನಾಗೇಂದ್ರಪ್ರಸಾದ್‌ ಅವರು ಬರೆದಿರುವ ಹಾಡುಗಳಿಗೆ ವಾಣಿ ಹರಿಕೃಷ್ಣ ಸಂಗೀತ ನೀಡಿದ್ದಾರೆ. ಚಿತ್ರಕ್ಕೆ ಅಚ್ಚು ಸುರೇಶ್‌ ಛಾಯಾಗ್ರಹಣ, ವಸಂತಕುಮಾರ್‌ ಸಂಕಲನ ಹಾಗೂ ವಿ.ಎಲ್‌ ಸತೀಶ್‌ ಅವರ ಸಹ ನಿರ್ದೇಶನವಿದ್ದು, ಚಿತ್ರಕ್ಕೆ ಗುರುಪ್ರಸಾದ್‌ ಚಂದ್ರಶೇಖರ್‌ ಸಂಭಾಷಣೆ ಬರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next