ನವದೆಹಲಿ:ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ನೇತಾಜಿ ಸುಭಾಶ್ಚಂದ್ರ ಬೋಸ್ ಅವರನ್ನು ನಿಯಂತ್ರಿಸಲು ಮಹಾತ್ಮ ಗಾಂಧಿ ವಿಫಲರಾಗಿದ್ದರು. ಹೀಗಾಗಿ ಗಾಂಧಿ ಮತ್ತು ನೇತಾಜಿ ಅವರ ನಡುವೆ ಕ್ಲಿಷ್ಟಕರವಾದ ಸಂಬಂಧ ಇತ್ತು. ಅಷ್ಟೇ ಅಲ್ಲ ನಮ್ಮ ತಂದೆ ಮಹಾತ್ಮ ಗಾಂಧಿಯವರ ದೊಡ್ಡ ಅಭಿಮಾನಿಯಾಗಿದ್ದರು ಎಂದು ನೇತಾಜಿ ಪುತ್ರಿ ಅನಿತಾ ಬೋಸ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಅಂದು ನೇತಾಜಿ ಅವರನ್ನು ಬ್ರಿಟಿಷರಿಗೆ ಹಸ್ತಾಂತರಿಸಲು ಮಹಾತ್ಮಗಾಂಧಿ ಮತ್ತು ಜವಾಹರಲಾಲ್ ನೆಹರು ಸಿದ್ಧರಾಗಿದ್ದರು ಎಂಬ ಬಾಲಿವುಡ್ ನಟಿ ಕಂಗನಾ ರಣಾವತ್ ಹೇಳಿಕೆ ಕುರಿತು ಇಂಡಿಯಾ ಟುಡೇ ಟಿವಿಗೆ ಅನಿತಾ ಬೋಸ್ ನೀಡಿದ ಪ್ರತಿಕ್ರಿಯೆ ಇದಾಗಿದೆ.
ಮಹಾತ್ಮ ಗಾಂಧಿ ಮತ್ತು ನೇತಾಜಿ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಟ ನಡೆಸಿದ ಮಹಾನ್ ಹೀರೋಗಳಾಗಿದ್ದಾರೆ. ಇವರಿಬ್ಬರದ್ದೂ ಒಂದು ಸಂಯೋಗವಾಗಿತ್ತು. ಹಾಗಂತ ಕೆಲವು ಕಾಂಗ್ರೆಸ್ ನಾಯಕರು ದೀರ್ಘಕಾಲದಿಂದ ಹೇಳುತ್ತಾ ಬಂದಿರುವಂತೆ, ಭಾರತಕ್ಕೆ ಕೇವಲ ಅಹಿಂಸೆಯಿಂದಲೇ ಸ್ವಾತಂತ್ರ್ಯ ಲಭಿಸಿಲ್ಲ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ನೇತಾಜಿ ಹಾಗೂ ಅವರ ಐಎನ್ ಎ ಕಾರ್ಯಾಚರಣೆ ಕೊಡುಗೆಯೂ ಅಪಾರವಾಗಿದೆ ಎಂಬುದು ಎಲ್ಲರಿಗೂ ತಿಳಿದಿದೆ ಎಂದು ಅನಿತಾ ಬೋಸ್ ವಿಶ್ಲೇಷಿಸಿದ್ದಾರೆ.
ಅದೇ ರೀತಿ ನೇತಾಜಿ ಮತ್ತು ಐಎನ್ ಎಯಿಂದಲೇ ಭಾರತಕ್ಕೆ ಸ್ವಾತಂತ್ರ್ಯ ಬಂತು ಎಂಬುದು ಕೂಡಾ ಅರ್ಥರಹಿತವಾದದ್ದು. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ನೇತಾಜಿ ಸೇರಿದಂತೆ ಸಾವಿರಾರು ಮಂದಿಗೆ ಸ್ಫೂರ್ತಿಯಾಗಿದ್ದರು.
“ಸ್ವಾತಂತ್ರ್ಯ ಹೋರಾಟದ ವೇಳೆ ಸುಭಾಶ್ಚಂದ್ರ ಬೋಸ್ ಮತ್ತು ಭಗತ್ ಸಿಂಗ್ ಗೆ ಮಹಾತ್ಮ ಗಾಂಧಿ ಬೆಂಬಲ ನೀಡಿರಲಿಲ್ಲವಾಗಿತ್ತು ಎಂದು ಬಾಲಿವುಡ್ ನಟಿ ಕಂಗನಾ ರಣಾವತ್ ಆರೋಪಿಸಿದ್ದು, ಅವರ ಅಹಿಂಸಾ ಮಂತ್ರವನ್ನು ಕೂಡಾ ಟೀಕಿಸಿದ್ದರು. ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆ ತೋರಿಸಿದರೆ ಭಿಕ್ಷೆ ಮಾತ್ರ ಸಿಗುತ್ತದೆ ವಿನಃ ಸ್ವಾತಂತ್ರ್ಯವಲ್ಲ ಎಂದು ದೂರಿದ್ದರು.
ಕಂಗನಾ ರಣಾವತ್, ಅನಿತಾ ಬೋಸ್, ಸ್ವಾತಂತ್ರ್ಯ ಹೋರಾಟ, ಅಹಿಂಸೆ, Kangana Ranaut, Subhas Chandra bose, Independence, Udayavani News