Advertisement
ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಪರಿಷ್ಕರಣೆ ಗೊಂಡಿದ್ದು, ಅ. 1ರಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ. ಆದರೆ ಅ. 1 ರವಿವಾರ ಹಾಗೂ ಅ. 2ರ ಸೋಮವಾರ ಸರಕಾರಿ ರಜಾದಿನವಾಗಿರುವ ಕಾರಣ ಅ. 3ರಿಂದ ಅಧಿಕೃತವಾಗಿ ಪರಿಷ್ಕೃತ ದರ ಜಾರಿಗೆ ಬರಲಿದ್ದು, ಗರಿಷ್ಟ ಶೇ. 50ರ ವರೆಗೆ ಮಾರ್ಗಸೂಚಿ ದರದಲ್ಲಿ ಏರಿಕೆ ಆಗಲಿದೆ. ಇದರಿಂದ ಮಾರುಕಟ್ಟೆ ಮೌಲ್ಯವೂ ಹೆಚ್ಚಳವಾಗಲಿದೆ.
Related Articles
Advertisement
ಆನ್‌ಲೈನ್ ಗೇಮಿಂಗ್: ಜಿಎಸ್‌ಟಿ
ಅ. 1ರಿಂದ ಆನ್‌ಲೈನ್ ಮನಿ ಗೇಮಿಂಗ್ ಮೇಲೆ ಜಿಎಸ್‌ಟಿ ಬೀಳಲಿದೆ. ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮ-2017ರಲ್ಲಿ ಆನ್‌ಲೈನ್ ಮನಿ ಗೇಮಿಂಗನ್ನೂ ಸೇರಿಸಿದ್ದು, ಅಂತರ್ಜಾಲ ಅಥವಾ ವಿದ್ಯುನ್ಮಾನ ಸಂಪರ್ಕ ಜಾಲಗಳಲ್ಲಿ ಆಟವಾಡಲು ಆಹ್ವಾನಿಸುವುದು ಹಾಗೂ ಆಟವಾಡಲು ತೆರಿಗೆ ಪಾವತಿಸಬೇಕಾಗುತ್ತದೆ. ಇವುಗಳಿಗೆ ನಿಷೇಧ ಹೇರುವ ಬದಲು ತೆರಿಗೆ ವ್ಯಾಪ್ತಿಗೆ ಇವುಗಳನ್ನು ತರಲಾಗಿದೆ.
ಸಣ್ಣ ಉಳಿತಾಯಕ್ಕೆ ಪ್ಯಾನ್ ಲಿಂಕ್
ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್), ಹಿರಿಯ ನಾಗರಿಕರ ಉಳಿತಾಯ ಯೋಜನೆ, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಬಳಕೆದಾರರು ಆಧಾರ್ ಮತ್ತು ಪ್ಯಾನ್ ಜತೆಗೆ ತಮ್ಮ ಖಾತೆಗಳನ್ನು ಲಿಂಕ್ ಮಾಡಿರಲೇಬೇಕು. ಇಲ್ಲವಾದಲ್ಲಿ ಈ ಅಕೌಂಟ್‌ಗಳಲ್ಲಿ ಅಪ್‌ಡೇಟ್ ಸಾಧ್ಯವಾಗುವುದಿಲ್ಲ. ಅಲ್ಲದೆ ಈ ಖಾತೆಗಳು ಸ್ತಂಭನವಾಗಲೂಬಹುದು.
ಕ್ರೆಡಿಟ್, ಡೆಬಿಟ್ ಕಾರ್ಡ್
ಮಹತ್ವದ ಬೆಳವಣಿಗೆಯಲ್ಲಿ ಆರ್‌ಬಿಐ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ನೆಟ್‌ವರ್ಕ್ ಸಂಸ್ಥೆಗಳ ಬದಲಾವಣೆಗೆ ಅವಕಾಶ ಮಾಡಿಕೊಟ್ಟಿದೆ. ರವಿವಾರದಿಂದಲೇ ಈ ನೀತಿಯೂ ಜಾರಿಗೆ ಬರಲಿದೆ. ಇನ್ನು ಮುಂದೆ ವಿಸಾ, ಮಾಸ್ಟರ್‌ಕಾರ್ಡ್, ರುಪೇ ನಡುವೆ ನಿಮಗೆ ಬೇಕಾದದ್ದನ್ನು ಆಯ್ದುಕೊಂಡು ಬದಲಾವಣೆ ಮಾಡಿಕೊಳ್ಳಬಹುದು.
ಹೊಸ ಟಿಸಿಎಸ್ ನಿಯಮ
ಇಂದಿನಿಂದ ವಿದೇಶಗಳಲ್ಲಿ 7 ಲಕ್ಷ ರೂ.ಗಿಂತ ಹೆಚ್ಚು ಕ್ರೆಡಿಟ್ ಕಾರ್ಡ್ ಮೂಲಕ ಮಾಡುವ ವೆಚ್ಚಕ್ಕೆ ಶೇ. 20ರಷ್ಟು ಟಿಸಿಎಸ್ ಬೀಳಲಿದೆ. ಒಂದು ವೇಳೆ ವೈದ್ಯಕೀಯ ಅಥವಾ ಶೈಕ್ಷಣಿಕ ಉದ್ದೇಶಕ್ಕಾಗಿ ವೆಚ್ಚ ಮಾಡಿದ್ದರೆ, ಶೇ. 5ರಷ್ಟು ವಿನಾಯಿತಿ ನೀಡಲಾಗುತ್ತದೆ.