Advertisement
1. ಬುದ್ಧಿಶಕ್ತಿ ಹೆಚ್ಚಿಸಲುಲೂಡೋ, ಹಾವು-ಏಣಿ, ಚದುರಂಗದಂಥ ಬೋರ್ಡ್ ಗೇಂಗಳನ್ನು ಆಡುವುದರಿಂದ ಮಕ್ಕಳ ಬುದ್ಧಿ ತೀಕ್ಷ್ಣವಾಗುತ್ತದೆ. ದೊಡ್ಡವರ ಆಟವನ್ನು ಗಮನಿಸುತ್ತಾ ಮಕ್ಕಳು ಹಲವಾರು ಅಂಶಗಳನ್ನು ಕಲಿಯುತ್ತಾರೆ. ತಾರ್ಕಿಕ ಯೋಚನೆ, ಸಮಯೋಚಿತ ನಿರ್ಧಾರಗಳನ್ನು ತೆಗೆದುಕೊಳ್ಳಲು ಇಂಥ ಆಟಗಳು ಸಹಾಯಕ.
ಹೆತ್ತವರು ಉದ್ಯೋಗದ ನೆಪದಲ್ಲಿ, ಮಕ್ಕಳು ಹೋಂವರ್ಕ್ ಕಾರಣದಿಂದ ಬ್ಯುಸಿಯಾಗಿರುತ್ತಾರೆ. ಮುಖಕ್ಕೆ ಮುಖ ಕೊಟ್ಟು ಮಾತಾಡಲೂ ಸಮಯವಿರುವುದಿಲ್ಲ. ಆಟದ ನೆಪದಲ್ಲಾದರೂ ದಿನದಲ್ಲಿ ಸ್ವಲ್ಪ ಸಮಯ ಎಲ್ಲರೂ ಒಟ್ಟಿಗೆ ಸೇರಿದರೆ ಬಾಂಧವ್ಯ ಗಟ್ಟಿಯಾಗುತ್ತದೆ. ಮಕ್ಕಳಿಗೂ ಹೆತ್ತವರೊಂದಿಗೆ ಸಮಯ ಕಳೆದಂತಾಗುತ್ತದೆ. 3. ಸ್ಪರ್ಧಾ ಮನೋಭಾವ ಬೆಳೆಸಲು
ಇತ್ತೀಚಿನ ಮಕ್ಕಳು ಅತಿ ಸಣ್ಣ ಸೋಲನ್ನೂ ಗಂಭೀರವಾಗಿ ತೆಗೆದುಕೊಳ್ಳುತ್ತಾರೆ. ಮಕ್ಕಳೊಂದಿಗೆ ಆಟ ಆಡುವುದರಿಂದ ಅವರಲ್ಲಿ ಸ್ಪರ್ಧಾ ಮನೋಭಾವ ಬೆಳೆಯುತ್ತದೆ. ಸೋಲು ಮತ್ತು ಗೆಲುವನ್ನು ಸಮಾನವಾಗಿ ಸ್ವೀಕರಿಸುವುದನ್ನು ಆಟದ ಮೂಲಕ ಅವರಿಗೆ ಹೇಳಿ ಕೊಡಬಹುದು.
Related Articles
ಮೊಬೈಲ್, ಕಂಪ್ಯೂಟರ್, ಐಪಾಡ್, ಐಪ್ಯಾಡ್‌ನಲ್ಲಿ ಮುಳುಗುವ ಮಕ್ಕಳು ವಾಸ್ತವ ಜಗತ್ತಿನಿಂದ ವಿಮುಖರಾಗುತ್ತಿದ್ದಾರೆ. ಮಕ್ಕಳನ್ನು ಮೊಬೈಲಿನಾಚೆಗೆ ಎಳೆಯಲು ಒಳಾಂಗಣ ಆಟಗಳು ಸಹಕಾರಿ. ಮೊಬೈಲ್‌ನಲ್ಲಿ ಒಬ್ಬನೇ ಆಡುವ ಬದಲು, ನಮ್ಮೊಂದಿಗೆ ಆಟಕ್ಕೆ ಬಾ ಎಂದು ಕರೆದರೆ ಮಗುವಿಗೂ ಖುಷಿಯಾಗುತ್ತದೆ.
Advertisement
5. ಜೀವನ ಮೌಲ್ಯಗಳ ಬೋಧನೆಎಲ್ಲರೂ ಒಟ್ಟಿಗೆ ಕುಳಿತು ಆಟ ಆಡುವಾಗ ತಾಳ್ಮೆ, ಸಹನೆ, ಸ್ನೇಹ ಮನೋಭಾವ, ಟೀಂ ಸ್ಪಿರಿಟ್,ಹೊಂದಾಣಿಕೆ ಮುಂತಾದ ಗುಣಗಳನ್ನು ಮಗು ಕಲಿಯುತ್ತದೆ.