Advertisement

ಗೇಮ್‌ ಡಿಸೈನಿಂಗ್‌ ಅಪಾರ ಅವಕಾಶ

10:16 PM Jul 16, 2019 | mahesh |

ಮಕ್ಕಳು ಊಟ ಮಾಡಬೇಕಾದರೆ ಕೈಯಲ್ಲಿ ಮೊಬೈಲ್‌ ಕೊಟ್ಟು ಆಹಾರ ಉಣಿಸುವ ಸಮಯವಿದು. ಬೊಂಬೆಗಳು, ಉಯ್ನಾಲೆ, ಮಣ್ಣಿನಲ್ಲಿ ಮಕ್ಕಳು ಆಡುವ ಕಾಲ ಹೋಗಿದೆ. ಇನ್ನೇನಿದ್ದರೂ ಕಂಪ್ಯೂಟರ್‌, ಲಾಪ್‌ಟಾಪ್‌, ಟಾಬ್‌ ಕಾಲ. ವರ್ಷದೊಳಗಿನ ಮಗು ಕೂಡ ಮೊಬೈಲ್‌ ಅಪರೇಟ್‌ ಮಾಡುತ್ತದೆ.

Advertisement

ಸದ್ಯ ಕಂಪ್ಯೂಟರ್‌, ಮೊಬೈಲ್‌ ಗೇಮಿಂಗ್‌ ಮಕ್ಕಳಿಗೆ ಮಾತ್ರವಲ್ಲದೆ ವಯಸ್ಕರಿಗೂ ಹೆಚ್ಚು ಮನೋರಂಜನೆ ನೀಡುತ್ತಿದೆ. ಒತ್ತಡದಿಂದ ಹೊರಬರಲು, ಟೈಮ್‌ ಪಾಸ್‌ ಎಂಬ ಕಾರಣಕ್ಕೆ ಎಲ್ಲ ವಯೋಮಾನದವರು ಗೇಮಿಂಗ್‌ಗೆ ಫಿದಾ ಆಗಿರುತ್ತಾರೆ. ಕಂಪ್ಯೂಟರ್‌ನಲ್ಲಿ ಬರುವ ಬಣ್ಣ ಬಣ್ಣದ ಹೊಸ ವಿನ್ಯಾಸದ ಅಪರೂಪದ ಕ್ಯಾರೆಕ್ಟರ್‌ಗಳ ಗೇಮ್‌ಗಳನ್ನು ತಯಾರಿಸಿ ಮಾರುಕಟ್ಟೆ ವಿಸ್ತರಿಸುತ್ತಿರುವ ಗೇಮಿಂಗ್‌ ಉದ್ಯಮ ಬಹಳ ವೇಗವಾಗಿ ಬೆಳೆಯುತ್ತಿದೆ. ಬೆರಳೆಣಿಕೆಯಷ್ಟಿದ್ದ ಕಂಪ್ಯೂಟರ್‌ ಗೇಮಿಂಗ್‌ಗಳ ಕಂಪೆನಿಗಳು ಈಗ ಬೃಹತ್‌ ಉದ್ಯಮಗಳಾಗಿ ಬದಲಾಗಿವೆ. ಇಂದು ಆಟಕ್ಕೆ ಮೀಸಲಾದ ಪ್ರತ್ಯೇಕ ಕಂಪ್ಯೂಟರ್‌ ಸಿಸ್ಟಮ್‌(ಗೇಮಿಂಗ್‌ ಕನ್ಸೋಲ್‌) ಗಳು ಮಾರುಕಟ್ಟೆಯಲ್ಲಿವೆ.

ಆಸಕ್ತಿ ಪರಿಣತಿ
ಪ್ರಸ್ತುತ ಕಂಪ್ಯೂಟರ್‌ ಗೇಮಿಂಗ್‌ ಉತ್ತಮ ಅವಕಾಶಗಳನ್ನು ಪಡೆಯತ್ತಿದೆ. ಈ ಉದ್ಯಮವು ತಂತ್ರಜ್ಞಾನ, ಕಲೆ, ಸೃಜನಶೀಲತೆಯಿಂದ ಕೂಡಿರುವುದರಿಂದ ಆ ಕ್ಷೇತ್ರದಲ್ಲಿ ಆಸಕ್ತಿ ಮತ್ತು ಪರಿಣತಿ ಬೇಕಾಗುತ್ತದೆ. ಇದರ ಜತೆಗೆ ಸಿ ಪ್ಲಸ್‌ ಪ್ಲಸ್‌, ಸಿ ಹ್ಯಾಶ್‌, ಮಾಯಾ ಮತ್ತು ಇತರ ಪ್ರೋಗ್ರಾಮಿಂಗ್‌ ಮತ್ತು ಡಿಸೈನಿಂಗ್‌ ಸಾಫ್ಟ್‌ವೇರ್‌ಗಳಲ್ಲಿ ಪರಿಣತಿ ಹೊಂದಿರಬೇಕಾಗುತ್ತದೆ.

ವಿದ್ಯಾಭ್ಯಾಸ
ಯಾವುದೇ ವಿಷಯದಲ್ಲಿ ಪಿಯುಸಿ ಶಿಕ್ಷಣ ಪಡೆದ ಅನಂತರ ಗೇಮಿಂಗ್‌ನಲ್ಲಿ ಎಂಜಿನಿಯರಿಂಗ್‌ ಪದವಿ ಅಥವಾ ಗೇಮಿಂಗ್‌ನಲ್ಲಿ ಪದವಿ ಶಿಕ್ಷಣ ಪಡೆಯಬಹುದು. ಪದವಿ ಬಳಿಕ ಗೇಮಿಂಗ್‌ನಲ್ಲಿ ಪದವಿ ಪಡೆಯಬಹುದು. ಬ್ಯಾಚುಲರ್‌ ಆಫ್‌ ಕಂಪ್ಯೂಟರ್‌ ಅಪ್ಲಿಕೇಶನ್‌, ಮೀಡಿಯಾ ಆ್ಯನಿಮೇಶನ್‌ ಮತ್ತು ಡಿಸೈನ್‌ ಪದವಿ, ಲಲಿತಕಲೆಯಲ್ಲಿ ಪದವಿ ಮತ್ತು ಸಾಫ್ಟ್‌ ವೇರ್‌ ತರಬೇತಿ, ಗೇಮಿಂಗ್‌ ಡಿಸೈನ್‌ ಡಿಪ್ಲೋಮಾ ಮತ್ತು ಅಲ್ಫಾವಧಿಯ ಸರ್ಟಿಫಿಕೆಟ್‌ ಕೋರ್ಸ್‌ಗಳನ್ನು ಮಾಡಬಹುದು. ಫೆ„ನ್‌ ಆರ್ಟ್ಸ್ ಇನ್‌ ಡಿಸೆ„ನ್‌ ಆ್ಯಂಡ್‌ ಟೆಕ್ನಾಲಜಿ, ಬಿ.ಎಸ್‌ ಇನ್‌ ಗೇಮ್‌ ಡಿಸೆ„ನ್‌ ಆ್ಯಂಡ್‌ ಡೆವಲಪ್‌ಮೆಂಟ್‌ ಎಂಬ ಪದವಿ ಇದೆ. ಬಿ.ಎಸ್‌. ಇನ್‌ ಕಂಪ್ಯೂಟರ್‌ ಸೆ„ನ್ಸ್‌ ನಾಲ್ಕು ವರ್ಷ ಅವಧಿಯ ಕೋರ್ಸುಗಳು. ಅಲ್ಲಿ ಕಂಪ್ಯೂಟರ್‌ ಗೇಮ್‌ ಡಿಸೆ„ನ್‌, ಸಮಾಜದಲ್ಲಿ ಅವುಗಳ ಅಳವಡಿಕೆ ಹೇಗೆ ಎಂಬುದನ್ನು ಕಲಿಸಲಾಗುತ್ತದೆ. ಜತೆಗೆ ಈ ವಿದ್ಯಾರ್ಥಿಗಳು ಜಾವಾ ಪ್ರೋಗ್ರಾಮಿಂಗ್‌, ಡಾಟಾ ಸ್ಟ್ರಕ್ಚರ್‌, ಡಿಸೆ„ನ್‌ ಹಿಸ್ಟರಿ, ಪ್ರೋಗ್ರಾಮಿಂಗ್‌ ಫಾರ್‌ ಇಂಟರಾಕ್ಟಿವ್‌ ಆ್ಯಂಡ್‌ ಡಿಜಿಟಲ್‌ ಮೀಡಿಯಾ, ಹ್ಯೂಮನ್‌ ಕಂಪ್ಯೂಟರ್‌ ಇಂಟರಾಕ್ಷನ್‌ ಮುಂತಾದ ವಿಷಯಗಳ ಬಗ್ಗೆ ಕಲಿಯುತ್ತಾರೆ.

ಉದ್ಯೋಗಾವಕಾಶಗಳು
ಕಂಪ್ಯೂಟರ್‌ ಗೇಮಿಂಗ್‌ ಉದ್ಯಮದಲ್ಲಿ ತಾಂತ್ರಿಕ ಮತ್ತು ತಾಂತ್ರಿಕೇತರ ವಿಧದ ಉದ್ಯೋಗಾವಕಾಶಗಳು ಇರುತ್ತವೆ. ತಾಂತ್ರಿಕ ವಲಯದಲ್ಲಿ ಗೇಮ್‌ಗಳಿಗೆ ಸಾಫ್ಟ್‌ವೇರ್‌ ಪ್ರೋಗ್ರಾಂ ಬರೆಯುವ ಡಿಸೈನಿಂಗ್‌ ಮತ್ತು ಅನಿಮೇಶನ್‌ ಮಾಡುವ , ಗುಣಮಟ್ಟ ಪರೀಕ್ಷಿಸುವ, ತಾಂತ್ರಿಕ ದೋಷಗಳನ್ನು ಸರಿಪಡಿಸುವ ಹಾಗೂ ಇತರ ತಾಂತ್ರಿಕ ಸಂಬಂಧಿತ ಕಾರ್ಯಗಳಿರುತ್ತವೆ. ತಾಂತ್ರಿಕೇತರ ವಲಯದಲ್ಲಿ ಗೇಮ್‌ನ ಪರಿಕಲ್ಪನೆ, ಕ್ಯಾರೆಕ್ಟರ್‌ ಮತ್ತು ಹಂತಗಳನ್ನು ಅಭಿವೃದ್ಧಿಪಡಿಸುವ ಕೆಲಸಗಳಿರುತ್ತವೆ. ಪರಿಣತಿ ಹೊಂದಿರುವ ಅಭ್ಯರ್ಥಿಗಳು ಗೇಮ್‌ ಡೆವಲೆಪರ್‌, ಗೇಮ್‌ ಡಿಸೈನರ್‌, ಗೇಮ್‌ ಆರ್ಟಿಸ್ಟ್‌, ಆಡಿಯೊ ಸೌಂಡ್‌ ಎಂಜಿನಿಯರ್‌, ಪ್ರಾಜೆಕ್ಟ್ ಮಾನ್ಯೆàಜರ್‌, ಮಾರ್ಕೆಟಿಂಗ್‌ ಮೊದಲಾದ ಹುದ್ದೆಗಳಲ್ಲಿ ಕೆಲಸ ಮಾಡಬಹುದಾಗಿದೆ. ಟ್ರೈನಿ ಆಗಿ ಉದ್ಯೋಗಕ್ಕೆ ಸೇರಿದರೂ ಉತ್ತಮ ಲಾಭ ವೇತನ ಲಭಿಸಲಿದೆ. ಅನುಭವ ಹೆಚ್ಚಾದಂತೆ ಇನ್ನಷ್ಟು ವೇತನ ಪಡೆಯುವ ಅವಕಾಶವಿದೆ. ಇದನ್ನು ಹೊರತುಪಡಿಸಿದರೆ ಬಂಡವಾಳವಿದ್ದರೆ ಸ್ವಂತ ಗೇಮಿಂಗ್‌ ಉದ್ಯಮವನ್ನೂ ಸ್ಥಾಪಿಸಬಹುದು.

Advertisement

ಗೇಮ್‌ ಡಿಸೈನರ್‌ ಗೇಮ್‌ ಸೂತ್ರಧಾರ
ಒಂದು ಸಿನಿಮಾಗೆ ನಿರ್ದೇಶಕನಿದ್ದಂತೆ, ಗೇಮ್‌ಗೆ ಗೇಮ್‌ ಡಿಸೆ„ನರ್‌. ಗೇಮ್‌ ಡಿಸೆ„ನರ್‌ ಗೇಮ್‌ನ ಪೂರ್ತಿ ರೂಪುರೇಷೆಯನ್ನು ಸಿದ್ಧಪಡಿಸುತ್ತಾನೆ. ಗೇಮ್‌ ಯಾವ ರೀತಿ ಇರಬೇಕೆಂಬುದರ ಬಗ್ಗೆ ಅಧ್ಯಯನ ನಡೆಸುತ್ತಾನೆ. ಕಥೆ, ಪಾತ್ರಗಳು, ಅಂತ್ಯ, ಸಂಗೀತ, ಗೇಮ್‌ ನೀಡುವ ಅನುಭವ ಇವೆಲ್ಲದರ ಕುರಿತು ಆತ ವರ್ಕ್‌ಔಟ್‌ ಮಾಡುತ್ತಾನೆ. ಹೊಸದಾಗಿ ಬಂದ ಗೇಮ್‌ನ ಸೋಲು ಗೆಲುವು ಗೇಮ್‌ ಡಿಸೈನರ್‌ ಮೇಲೆ ಅವಲಂಬಿತವಾಗಿರುತ್ತದೆ. ಗೇಮ್‌ಡಿಸೈನಿಂಗ್‌ ಎಂಬುದು ಅಷ್ಟು ಸುಲಭದ ವಿಷಯವಲ್ಲ. ಡಿಸೈನರ್‌ಗಳು ಮಕ್ಕಳನ್ನು ಮತ್ತು ಕಾರ್ಪೊರೇಟ್‌ ಉದ್ಯೋಗಿಗಳನ್ನು ಕ್ರಿಯಾಶೀಲರನ್ನಾಗಿಸುವ ಮನೋ‌ರಂಜನಾತ್ಮಕ ಆಟಗಳ ತರಗತಿಯನ್ನೂ ಮಾಡಬಲ್ಲರು…

ಪ್ರಜ್ಞಾ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next