ಕೋಲಾರ: ಜಿಲ್ಲೆಯ ರಾಜ ಕಾರಣದಲ್ಲಿ ಪಕ್ಷಗಳ ತೀರ್ಮಾನಕ್ಕಿಂತ ವ್ಯಕ್ತಿಗಳ ತೀರ್ಮಾನವೇ ಕ್ರಿಯಾಶೀಲವಾಗಿದೆ.
ಜಿಲ್ಲೆಯ ಕಾಂಗ್ರೆಸ್‌ನ ಮಹಾನಾಯಕ, ಭಗೀರಥ ಎನಿಸಿಕೊಂಡಿರುವ ಒಬ್ಬ ವ್ಯಕ್ತಿ ಚುನಾವಣೆಗಳಲ್ಲಿ ಸಂದರ್ಭಕ್ಕೆ ತಕ್ಕಂತೆ ಆಟವಾಡಿ ಅನೇಕ ಮಂದಿಯನ್ನು ಬೀದಿಗೆ ತಂದಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಮಾಜಿ ಸ್ಪೀಕರ್ ರಮೇಶ್‌ಕುಮಾರ್ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದರು.
ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆ ವ್ಯಕ್ತಿ ತಮ್ಮ ಸ್ವಾರ್ಥಕ್ಕಾಗಿ ರಾಜಕಾರಣ ಮಾಡುತ್ತಿ ದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಕೆ.ಎಚ್.ಮುನಿಯಪ್ಪ ಗೆಲುವಿಗೆ ಅಡ್ಡಿ ಮಾಡಿದ್ದರು.
ಈ ಚುನಾವಣೆಯಲ್ಲಿ ನಮ್ಮ ಪ್ರಾಡಕ್ಟ್ ಬ್ಯಾಲಹಳ್ಳಿ ಗೋವಿಂದಗೌಡ ಹಾಗೂ ಅವರ ಬ್ಯಾಂಕನ್ನು ಎಲ್ಲ ರೀತಿ ಯಲ್ಲಿಯೂ ಬಳಸಿಕೊಂಡು, ಅವ್ಯವಹಾರ ಮಾಡಿ ಕೊನೆಗೆ ಟಿಕೆಟ್ ಕೊಡಿಸದೆ ಬೀದಿಗೆ ತಂದಿದ್ದಾರೆ. ಕಾಂಗ್ರೆಸ್‌ನ ಪರಿಶುದ್ಧ ರಾಜಕಾರಣಿಯಿಂದ ಲೋಕಸಭೆಯಲ್ಲಿ ಬಿಜೆಪಿ ಅಭ್ಯರ್ಥಿಯ ಆಯ್ಕೆಯೂ ಆಗಿದೆ ಎಂದು ರಮೇಶ್‌ಕುಮಾರ್ ಅವರನ್ನು ಪರೋಕ್ಷವಾಗಿ ಕುಟುಕಿದರು.
ಇದನ್ನೂ ಓದಿ:ಉಗಾಂಡದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಚೀನಾ ವಶ : ಸಾಲ ತೀರಿಸದಿರುವುದೇ ಕಾರಣ
ಹಿರಿಯ ಮುಖಂಡರ ಗೈರು
ಜಿಲ್ಲೆಗೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಆಗಮಿಸಿದ್ದರೂ ಪಕ್ಷದ ಅನೇಕ ಮುಖಂಡರು ಗೈರಾಗಿದ್ದು ಜೆಡಿಎಸ್ ಒಡೆದ ಮನೆ ಎಂಬುದನ್ನು ಸಾಬೀತು ಮಾಡುವಂತಿತ್ತು.