Advertisement

ಜುಗಾರಿ ಅಡ್ಡೆಗೆ ದಾಳಿ: 8 ಮಂದಿ ಬಂಧನ

09:15 PM Mar 05, 2023 | Team Udayavani |

ಮಂಗಳೂರು: ನಗರದ ಹೊರವಲಯದ ವಳಚ್ಚಿಲ್‌ಪದವು ಎಂಬಲ್ಲಿ ನಡೆಯುತ್ತಿದ್ದ ಜುಗಾರಿ ಅಡ್ಡೆಗೆ ಗ್ರಾಮಾಂತರ ಪೊಲೀಸರು ಶನಿವಾರ ದಾಳಿ ನಡೆಸಿ 8 ಮಂದಿಯನ್ನು ಬಂಧಿಸಿದ್ದಾರೆ. ಮನೆಯೊಂದರಲ್ಲಿ ಜುಗಾರಿ ಆಡುತ್ತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ಮನೆಯ ಮಾಲಕ ಸಹಿತ 8 ಮಂದಿಯನ್ನು ಬಂಧಿಸಿ, ಆಟಕ್ಕೆ ಬಳಸಿದ್ದ 20,790 ರೂ. ಹಾಗೂ 2 ಸ್ಕೂಟರ್‌ ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next