Advertisement
ಗಂಭೀರ್ ಜತೆ ಇನ್ನಿಂಗ್ಸ್ ಆರಂಭಿಸಿದ ಸುನೀಲ್ ನಾರಾಯಣ್ ಕೆಕೆಆರ್‌ಗೆ ಭರ್ಜರಿ ಆರಂಭ ಒದಗಿಸಿದರು. ಮೊದಲ ವಿಕೆಟಿಗೆ 5.4 ಓವರ್‌ಗಳಲ್ಲಿ 76 ರನ್ ಪೇರಿಸಿ ತಂಡದ ಗೆಲುವಿನ ಸಾಧ್ಯತೆಯನ್ನು ಹೆಚ್ಚಿಸಿದರು. ಇದು ಪವರ್‌ಪ್ಲೇಯಲ್ಲಿ ಕೆಕೆಆರ್‌ನ ಗರಿಷ್ಠ ಮೊತ್ತ ಆಗಿದೆ. ಬಿರುಸಿನ ಆಟವಾಡಿದ ನಾರಾಯಣ್ 18 ಎಸೆತಗಳಿಂದ 4 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ 37 ರನ್ ಹೊಡೆದರು. ಗಂಭೀರ್ ಮತ್ತು ರಾಬಿನ್ ಉತ್ತಪ್ಪ ಆಬಳಿಕ ದ್ವಿತೀಯ ವಿಕೆಟಿಗೆ 40 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡರು. ಉತ್ತಮವಾಗಿ ಆಡುತ್ತಿದ್ದ ಉತ್ತಪ್ಪ ರಿವರ್ಸ್ ಸ್ವೀಪ್‌ಗೈಯುವ ಪ್ರಯತ್ನದಲ್ಲಿ ಅಕ್ಷರ್ ಪಟೇಲ್‌ಗೆ ಕ್ಲೀನ್‌ಬೌಲ್ಡ್ ಆದರು. 16 ಎಸೆತಗಳಿಂದ 26 ರನ್ ಹೊಡೆದರು. ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಗಂಭೀರ್ 49 ಎಸೆತಗಳಿಂದ 72 ರನ್ ಗಳಿಸಿ ಅಜೇಯರಾಗಿ ಉಳಿದರು. 11 ಬೌಂಡರಿ ಬಾರಿಸಿದರು. ಇದು ಪಂಜಾಬ್ ತಂಡಕ್ಕೆ ಎದುರಾದ ಮೊದಲ ಸೋಲು ಆಗಿದೆ. ಸತತ ಎರಡು ಗೆಲುವು ಕಂಡಿದ್ದ ಪಂಜಾಬ್ ಈ ಪಂದ್ಯದಲ್ಲಿ ಬೌಲಿಂಗ್ ಮತ್ತು ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸಿತು. ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಮಿಂಚಿದ ಸುನೀಲ್ ನಾರಾಯಣ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಕಿಂಗ್ಸ್ ಇಲೆವೆನ್ ಪಂಜಾಬ್
ಹಾಶಿಮ್ ಆಮ್ಲ ಸಿ ಗಂಭೀರ್ ಬಿ ಗ್ರ್ಯಾಂಡ್‌ಹೋಮ್ 25
ಮನನ್ ವೋಹ್ರ ಬಿ ಚಾವ್ಲಾ 28
ಎಂ. ಸ್ಟಾಯಿನಿಸ್ ಬಿ ನಾರಾಯಣ್ 9
ಗ್ಲೆನ್ ಮ್ಯಾಕ್ಸ್‌ವೆಲ್ ಸಿ ಉತ್ತಪ್ಪ ಬಿ ಉಮೇಶ್ 25
ಡೇವಿಡ್ ಮಿಲ್ಲರ್ ಸಿ ಪಾಂಡೆ ಬಿ ಉಮೇಶ್ 28
ವೃದ್ಧಿಮಾನ್ ಸಾಹ ಸಿ ವೋಕ್ಸ್ ಬಿ ಉಮೇಶ್ 25
ಅಕ್ಷರ್ ಪಟೇಲ್ ಸಿ ನಾರಾಯಣ್ ಬಿ ಉಮೇಶ್ 0
ಮೋಹಿತ್ ಶರ್ಮ ಸಿ ಸೂರ್ಯ ಬಿ ವೋಕ್ಸ್ 10
ವರುಣ್ ಅರೋನ್ ಸಿ ಗಂಭೀರ್ ಬಿ ವೋಕ್ಸ್ 4
ಸಂದೀಪ್ ಶರ್ಮ ಔಟಾಗದೆ 0 ಇತರ: 16
ಒಟ್ಟು (20 ಓವರ್‌ಗಳಲ್ಲಿ 9 ವಿಕೆಟಿಗೆ) 170
Related Articles
Advertisement
ಬೌಲಿಂಗ್:ಟ್ರೆಂಟ್ ಬೌಲ್ಟ್ 4-0-36-0
ಉಮೇಶ್ ಯಾದವ್ 4-0-33-4
ಕ್ರಿಸ್ ವೋಕ್ಸ್ 3-0-30-2
ಸುನೀಲ್ ನಾರಾಯಣ್ 4-0-19-1
ಪೀಯೂಷ್ ಚಾವ್ಲಾ 3-0-36-1
ಕಾಲಿನ್ ಡಿ ಗ್ರ್ಯಾಂಡ್‌ಹೋಮ್ 2-0-15-1 ಕೋಲ್ಕತಾ ನೈಟ್‌ರೈಡರ್ಸ್
ಸುನೀಲ್ ನಾರಾಯಣ್ ಸಿ ಪಟೇಲ್ ಬಿ ಅರೋನ್ 37
ಗೌತಮ್ ಗಂಭೀರ್ ಔಟಾಗದೆ 72
ರಾಬಿನ್ ಉತ್ತಪ್ಪ ಬಿ ಅಕ್ಷರ್ ಪಟೇಲ್ 26
ಮನೀಷ್ ಪಾಂಡೆ ಔಟಾಗದೆ 25
ಇತರ: 11 ಒಟ್ಟು (16.3 ಓವರ್‌ಗಳಲ್ಲಿ 2 ವಿಕೆಟಿಗೆ) 171 ವಿಕೆಟ್ ಪತನ: 1-76, 2-116 ಬೌಲಿಂಗ್:
ಸಂದೀಪ್ ಶರ್ಮ 3-0-28-0
ಇಶಾಂತ್ ಶರ್ಮ 2-0-16-0
ಗ್ಲೆನ್ ಮ್ಯಾಕ್ಸ್‌ವೆಲ್ 1-0-18-0
ವರುಣ್ ಅರೋನ್ 2-0-23-1
ಮೋಹಿತ್ ಶರ್ಮ 3-0-30-0
ಅಕ್ಷರ್ ಪಟೇಲ್ 4-0-36-1
ಮಾರ್ಕಸ್ ಸ್ಟಾಯಿನಿಸ್ 1.3-0-14-0 ಪಂದ್ಯಶ್ರೇಷ್ಠ: ಸುನೀಲ್ ನಾರಾಯಣ್