Advertisement
ಭಾರತ-ಚೀನ ಸೈನಿಕರ ಸಂಘರ್ಷ ನಡೆದ ಸ್ಥಳಕ್ಕಿಂತ ಕೇವಲ ಐದು ಕಿ.ಮೀ. ದೂರದಲ್ಲಿ, ಗಾಲ್ವಾನ್ ನದಿಯ ಪಾತ್ರ ಮತ್ತು ದಡದಲ್ಲಿ ಚೀನದ ಸೇನೆ ಭಾರೀ ಸಂಖ್ಯೆಯಲ್ಲಿ ಸೇನಾಪಡೆಗಳನ್ನು ಮೇ ತಿಂಗಳಿನಿಂದಲೇ ಜಮಾಯಿಸಿತ್ತು. ಸೇನಾ ಶಿಬಿರಗಳು ಮಾತ್ರವಲ್ಲದೆ ಸೇತುವೆ ಯಂತಹ ರಚನೆಗಳನ್ನೂ ನಿರ್ಮಿಸಿದ್ದಲ್ಲದೆ ನದಿಯ ಹರಿವಿಗೆ ತಡೆ ಉಂಟು ಮಾಡಿತ್ತು. ಆದರೆ ಈಗ ಬೇಸಗೆ ಆರಂಭ ವಾಗಿದ್ದು, ಪರ್ವತಗಳ ಹಿಮ ಕರಗುತ್ತಿದೆ. ಶೀತಲ ನೀರಿನ ಹರಿವು ಕ್ಷಿಪ್ರಗತಿಯಲ್ಲಿ ಹೆಚ್ಚುತ್ತಿದೆ. ಹೀಗಾಗಿ ಅದು ಪಡೆಗಳನ್ನು ಸ್ಥಳಾಂತರಿಸಲೇಬೇಕಾದ ಅನಿ ವಾರ್ಯತೆಗೆ ಸಿಲುಕಿದೆ ಎಂಬುದಾಗಿ ಭಾರತೀಯ ಸೇನಾ ಪಡೆಯ ಮಿಲಿಟರಿ ಕಮಾಂಡರ್ ಒಬ್ಬರು ಹೇಳಿ ರುವು ದಾಗಿ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.
ಗಾಲ್ವಾನ್ ಕಣಿವೆಯ ಇಕ್ಕಟ್ಟಿನ ಪ್ರದೇಶದಲ್ಲೂ ಚೀನದ ಪಡೆ ಪೋಸ್ಟ್ ನಿರ್ಮಿಸಿ ಮದ್ದು ಗುಂಡು, ಯುದ್ಧಸಾಮಗ್ರಿಗಳನ್ನು ಸಂಗ್ರಹಿಸಿದೆ. ಹಿಮ ಕರಗುವಿಕೆ ಯಿಂದ ನದಿಯ ತೀರ ದಲ್ಲಿ ಚೀನ ಬೀಡುಬಿಟ್ಟಿರುವ ಪ್ರದೇಶಗಳು ಯಾವುದೇ ಸಂದರ್ಭ ದಲ್ಲೂ ಅಪಾಯ ಎದುರಿಸಬಹುದು ಎಂದು ಈ ಕಮಾಂಡರ್ ಹೇಳಿರುವುದಾಗಿ ವರದಿಯಾಗಿದೆ. ಚೀನ ಇಲ್ಲಿ ನಿಲ್ಲಲಾಗದು
ಚೀನದ ಪಡೆಗಳು ಪ್ರಸ್ತುತ ಡೇರೆ ಹೂಡಿರುವ ಗಾಲ್ವಾನ್, ಗೊಗ್ರಾ, ಹಾಟ್‌ಸ್ಪ್ರಿಂಗ್ಸ್, ಪ್ಯಾಂಗಾಂಗ್ ಸರೋ ವರಗಳ ಜಾಗವನ್ನು ಅದು ಶಾಶ್ವತ ವಾಗಿ ಹಿಡಿದಿಟ್ಟು ಕೊಳ್ಳುವುದು ಅಸಾಧ್ಯ ಎಂದು ಅವರು ಹೇಳಿದ್ದಾರೆ.
Related Articles
Advertisement
ಮೋದಿ ಭೇಟಿ, ಆತ್ಮವಿಶ್ವಾಸ ಇಮ್ಮಡಿಎಲ್ಎಸಿಯ ಮುಂಚೂಣಿಯ ಸೇನಾನೆಲೆ ನಿಮ್ಮುಗೆ ಪ್ರಧಾನಿ ಭೇಟಿ ನೀಡಿದ್ದರಿಂದ ಯೋಧರ ಧೈರ್ಯ, ಆತ್ಮವಿಶ್ವಾಸ ಹೆಚ್ಚಾಗಿದೆ. ಎಂಥ ಸಮಯದಲ್ಲೂ ದೇಶಕ್ಕಾಗಿ ದಿಟ್ಟ ಹೋರಾಟ ನಡೆಸಲು ಯೋಧರು ಸಿದ್ಧರಿದ್ದಾರೆ ಎಂದು ಐಟಿಬಿಪಿ ಮುಖ್ಯಸ್ಥ ಜ| ಎಸ್.ಎಸ್. ದೇಸ್ವಾಲ್ ರವಿವಾರ ಹೇಳಿದ್ದಾರೆ. ಮೋದಿ ಅವರ ಲಡಾಖ್ ಭೇಟಿ ಮತ್ತು ಭಾಷಣದಿಂದ ಭೂಸೇನೆ, ವಾಯುಪಡೆ, ಐಟಿಬಿಪಿ ಯೋಧರಲ್ಲಿ ಆತ್ಮವಿಶ್ವಾಸ ಇಮ್ಮಡಿಸಿದೆ. ಸಶಸ್ತ್ರ ಪಡೆಗಳ ಸಿಬಂದಿ ಈ ಹಿಂದೆಯೂ ತಮ್ಮ ಪ್ರಾಣ ಸಮರ್ಪಿಸಿ ದೇಶವನ್ನು ರಕ್ಷಿಸಿದ್ದರು. ಈಗಿನವರೂ ಅದೇ ಹಾದಿಯಲ್ಲಿ ಸಮರ್ಥ ಹೋರಾಟ ನಡೆಸುತ್ತಿದ್ದಾರೆ ಎಂದು ಹೆಮ್ಮೆ ವ್ಯಕ್ತಪಡಿಸಿದರು. ಪೂರ್ವ ಲಡಾಖ್‌ನ ಎಲ್‌ಎಸಿ ವಲಯದಲ್ಲಿ ಐಟಿಬಿಪಿಯ 30 ಕಂಪೆನಿಗಳ 3 ಸಾವಿರ ವೀರಯೋಧರು ಚೀನದ ಸವಾಲಿಗೆ ಎದೆಗೊಟ್ಟಿದ್ದಾರೆ. ಪ್ರಧಾನಿ ಭಾಷಣ ಕಾರ್ಯಕ್ರಮದಲ್ಲಿ ಐಟಿಬಿಪಿ ಯೋಧರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ರಾಷ್ಟ್ರಪತಿ ಭೇಟಿ ಮಾಡಿದ ಪ್ರಧಾನಿ
ಪ್ರಧಾನಿ ಮೋದಿ ರವಿವಾರ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರನ್ನು ಭೇಟಿಯಾಗಿ ಲಡಾಖ್ ಗಡಿ ಬಿಕ್ಕಟ್ಟು ಸಹಿತ ವಿವಿಧ ವಿಷಯಗಳ ಕುರಿತು ಚರ್ಚಿಸಿದರು. ಇಬ್ಬರೂ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಷಯಗಳ ಬಗ್ಗೆ ವಿಸ್ತೃತವಾಗಿ ಚರ್ಚಿಸಿದ್ದಾರೆ ಎಂದು ರಾಷ್ಟ್ರಪತಿ ಭವನದ ಮೂಲಗಳು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿವೆ.