Advertisement

ಪಿತ್ತಕೋಶದ ಸಮಸ್ಯೆ : ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ಗೆ ಶಸ್ತ್ರಚಿಕಿತ್ಸೆ

07:35 PM Apr 11, 2021 | Team Udayavani |

ಮುಂಬೈ: ಪಿತ್ತಕೋಶದ ಸಮಸ್ಯೆ ಹಿನ್ನೆಲೆಯಲ್ಲಿ ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಸೋಮವಾರ ಮುಂಬೈನ ಬ್ರೀಚ್‌ ಕ್ಯಾಂಡಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೊಳಗಾಗಲಿದ್ದಾರೆ.

Advertisement

80 ವರ್ಷದ ಅವರು ಭಾನುವಾರವೇ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ತಿಂಗಳು ಮಾ.30ರಂದು ಅವರಿಗೆ ಎಂಡೊಸ್ಕೊಪಿ ನಡೆಸಿ ಪಿತ್ತಾಶ್ಮರಿಯನ್ನು (ಪಿತ್ತಕೋಶದ ಕಲ್ಲು) ನಿವಾರಿಸಲಾಗಿತ್ತು.

ಪವಾರ್‌ ಆರೋಗ್ಯ ಪರಿಸ್ಥಿತಿಯನ್ನು ನೋಡಿಕೊಂಡು ಇನ್ನು 15 ದಿನಗಳ ಮತ್ತೆ ಶಸ್ತ್ರಚಿಕಿತ್ಸೆ ನಡೆಸಲಾಗುವುದು ಎಂದು ಆಗಲೇ ವೈದ್ಯರು ತಿಳಿಸಿದ್ದರು. ಅದರಂತೆ ಮತ್ತೆ ಪವಾರ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಇದನ್ನೂ ಓದಿ :ಕೂಚ್ ಬೆಹಾರ್ ಹಿಂಸಾಚಾರಕ್ಕೆ ದೀದಿ ಕಾರಣ : ಕೇಂದ್ರ ಸಚಿವ ಅಮಿತ್ ಶಾ

Advertisement

Udayavani is now on Telegram. Click here to join our channel and stay updated with the latest news.

Next