Advertisement
ಅವರು ನಗರದ ಶ್ರೀಕೃಷ್ಣ ಹೊಟೇಲ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ”2002-03 ರಲ್ಲಿ ಸಾರ್ವಜನಿಕ ಜೀವನಕ್ಕೆ ಕಾಲಿರಿಸಿರುವ ಜನಾರ್ದನರೆಡ್ಡಿ ಹಾಗೂ ಅವರ ಆಪ್ತರು ಪ್ರಸ್ತುತ ಕೋಟ್ಯಧಿಪತಿಗಳಾಗಿದ್ದು ಈ ಹಣ ಅಕ್ರಮ ಗಣಿಗಾರಿಕೆಯಿಂದ ಬಂದಿದೆ. ಆಂಧ್ರಪ್ರದೇಶ ಸರಕಾರದಿಂದ ಗಣಿಗಾರಿಕೆ ಮಾಡುವ ಪರವಾನಿಗೆ ಪಡೆದುಕೊಂಡು ಕರ್ನಾಟಕದ ಹಲವು ಗ್ರಾಮಗಳಲ್ಲಿ ಅಕ್ರಮ ಗಣಿಗಾರಿಕೆ ನಡೆಸಲು ಕರ್ನಾಟಕದ ಗಡಿ ನಾಶ ಮಾಡಿ ನೂರಾರು ಎಕರೆ ಭೂ ಪ್ರದೇಶವನ್ನು ಆಂಧ್ರಪ್ರದೇಶಕ್ಕೆ ಹೋಗುವಂತೆ ಮಾಡಲಾಗಿದೆ ಎಂದು ಎಸ್‌ಐಟಿ, ಲೋಕಾಯುಕ್ತ, ಗಡಿ ಸರ್ವೇ ಇಲಾಖೆ ಸೇರಿ ಹಲವು ತನಿಖಾ ಸಂಸ್ಥೆಗಳ ವರದಿಯಲ್ಲಿ ಉಲ್ಲೇಖವಾಗಿದೆ. ಇಷ್ಟಾದರೂ ಗಾಲಿ ಜನಾರ್ದನರೆಡ್ಡಿ ಸತ್ಯಹರಿಶ್ಚಂದ್ರ ಎನ್ನುವಂತೆ ಜನರ ಬಳಿಯಲ್ಲಿ ನಾಟಕವಾಡುತ್ತಿದ್ದಾರೆ” ಎಂದರು.
Related Articles
Advertisement
ಹಲವು ಪ್ರಕರಣಗಳಲ್ಲಿ ರೆಡ್ಡಿ ಸಾಕ್ಷ್ಯ ನಾಶ ಮಾಡುವ ಕಾರ್ಯ ಮಾಡುತ್ತಿದ್ದಾರೆ. ಇತ್ತೀಚೆ ಅರಣ್ಯ ಇಲಾಖೆಯ ಸರ್ವೇ ಅಧಿಕಾರಿ ಧರೆಪ್ಪ ನಾಯಕ ಇವರನ್ನು ಕಲ್ಯಾಣ ರಾಜ್ಯ ಪ್ರಗತಿ ಪಾರ್ಟಿಗೆ ಸೇರಿಸಿಕೊಂಡು ಸಿರಗುಪ್ಪ ಎಸ್ಟಿ ಮೀಸಲು ಕ್ಷೇತ್ರದ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದು ಇದು ಸಹ ಸಾಕ್ಷ್ಯ ನಾಶ ಎನ್ನಲಾಗುತ್ತಿದೆ. ಅರಣ್ಯ ಪ್ರದೇಶ ಒತ್ತುವರಿ ಮಾಡಿ ಅಕ್ರಮ ಗಣಿಗಾರಿಕೆ ನಡೆಸಿದ ಪ್ರಕರಣದಲ್ಲಿ ಧರೆಪ್ಪ ನಾಯಕ ಸರ್ವೆ ಕಾರ್ಯ ಮಾಡಿ ಸರಕಾರಕ್ಕೆ ವರದಿ ಒಪ್ಪಿಸಿದ್ದರು ಈಗ ಅದೇ ಅಧಿಕಾರಿಯನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದು ತನಿಖೆಗೆ ಹಿನ್ನಡೆಯಾಗುವ ಎಲ್ಲಾ ಸಾಧ್ಯತೆ ಇದೆ. ಇನ್ನೂ ಮುಂದೆ ಹಲವು ಸಾಕ್ಷ್ಯ ನಾಶವಾಗುವ ಸಾಧ್ಯತೆ ಇದ್ದು ಕೂಡಲೇ ಜನಾರ್ದನ ರೆಡ್ಡಿಯನ್ನು ಜೈಲಿನೊಳಗಿಡಬೇಕು. ನಾನು ಗಂಗಾವತಿಯಲ್ಲಿ ಸುದ್ದಿಗೋಷ್ಠಿ ಮಾಡುವ ವಿಷಯ ತಿಳಿದು ಅಪರಿಚಿತರು ಸುದ್ದಿಗೋಷ್ಠಿ ಮಾಡದಂತೆ ಕರೆ ಮಾಡಿ ತಡೆಯಲು ಯತ್ನಿಸಿದರು ಎಂದು ಆರೋಪ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಹಿರಿಯ ಕಾರ್ಮಿಕ ಮುಖಂಡ ಜೆ.ಭಾರದ್ವಾಜ್, ನ್ಯಾಯವಾದಿ ಹುಸೇನಪ್ಪ ಹಂಚಿನಾಳ, ಆನಂದ ಭಂಡಾರಿ, ಫಯಾಜ್ ಇಂಕಿಲಾಬಿ, ಪಾಮಣ್ಣ ಇದ್ದರು.