ಗಂಗಾವತಿ: ತಾಲೂಕಿನ ಬಸಾಪಟ್ಟಣ ಗ್ರಾಮಕ್ಕೆ ಕಲ್ಯಾಣ ರಾಜ್ಯ ಪ್ರಗತಿ ಪಾರ್ಟಿ ಸಂಸ್ಥಾಪಕ ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಭೇಟಿ ನೀಡಿ ಶ್ರೀ ಹನುಮಂತನ ದರ್ಶನ ಪಡೆದು, ಶ್ರೀ ನಂಜುಂಡೇಶ್ವರ, ಶ್ರೀ ಶರಣಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು.
ಹಲವು ಸಮುದಾಯದ ಮುಖಂಡರನ್ನು ಭೇಟಿ ಮಾಡಿ ರಾಜಕೀಯ ಚರ್ಚೆ ನಡೆಸಿದರು. ಶ್ರೀ ರಾಜರಾಜೇಶ್ವರಿ ಅನುದಾನಿತ ಶಾಲೆಗೆ ಭೇಟಿ ನೀಡಿದರು. ಈ ವೇಳೆ ಸ್ಥಳೀಯರು ನಂಜುಂಡೇಶ್ವರ ಮಠದಲ್ಲಿ ರುಮಾಲು ಸುತ್ತಿ,ಕಂಬಳಿ ಹೊದಿಸಿ ಟಗರು ಮರಿ ನೀಡಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಹಾಲುಮತ ಕುರುಬ ಸಮಾಜದ ಗುರುಗಳಾದ ಸಿದ್ದರಾಮಯ್ಯ ಗುರುವಿನ್ ಮತ್ತು ಸಿದ್ದಯ್ಯ ಗುರುವಿನ್, ಮುಖಂಡರಾದ ಹನುಮೇಶ್ ತಳವಾರ್, ಬೆಟದಪ್ಪ ನಾಗರಾಜ ಅಂಗಡಿ ಯಮನೂರು, ಸಣ್ಣೆಪ್ಪ ಮುಂತಾದವರಿದ್ದರು.