Advertisement

Gajendragad: ಅದ್ಧೂರಿಯಾಗಿ ನಡೆದ ಹಠಯೋಗಿ ವೀರಪ್ಪಜ್ಜನ ರಥೋತ್ಸವ

09:57 PM Feb 19, 2024 | Team Udayavani |

ಗದಗ: ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್ ಸಮೀಪದ ಕೋಡಿಕೊಪ್ಪದ ಹಠಯೋಗಿ ವೀರಪ್ಪಜ್ಜನ ಜಾತ್ರಾಮಹೋತ್ಸವದ ಅಂಗವಾಗಿ ಸೋಮವಾರ ಸಂಜೆ ಸಹಸ್ರಾರು ಭಕ್ತರ ಮಧ್ಯೆ ಮಹಾರಥೋತ್ಸವವು ಅತ್ಯಂತ ಸಡಗರ, ಸಂಭ್ರಮದಿಂದ ಜರುಗಿತು.

Advertisement

ತೇರಿನ ಹಗ್ಗವು ಸಿದ್ನೇಕೊಪ್ಪದಿಂದ ಭಜನೆ, ಡೂಳ್ಳು, ಕಹಳೆ ಹಾಗೂ ವಿವಿಧ ವಾದ್ಯ ಮೇಳಗಳೊಂದಿಗೆ ಆಗಮಿಸಿತು. ರಥದ ಕಳಸವು ಸಂಕನಗೌಡ್ರ ಮನೆಯಿಂದ ಮೆರವಣಿಗೆ ಮೂಲಕ ವೀರಪ್ಪಜ್ಜನ ಮಠವನ್ನು ತಲುಪಿತು. ನೆರೆದ ಭಕ್ತರ ಸಮೂಹ ಹಠಯೋಗಿ ಹುಚ್ಚಿರಪ್ಪಜ್ಜನಿಗೆ ಜಯವಾಗಲಿ, ಹರಹರ ಮಹಾದೇವ ಎಂಬ ಜಯಘೋಷಣೆಗಳು ಮುಗಿಲು ಮುಟ್ಟುವಂತೆ ಕೇಳುತ್ತಿತ್ತು. ಸಕಲ ವಾದ್ಯ ಮೇಳದೊಂದಿಗೆ ತೇರುಪಾದಗಟ್ಟಿವರೆಗೆ ತಲುಪಿ ಮರಳಿ ಮೂಲ ಸ್ಥಳಕ್ಕೆ ಬಂದು ತಲಿಪಿತು. ಜಾತ್ರೆಯಲ್ಲಿ ವಿವಿಧ ಭಾಗಗಳಿಂದ ಅಂದಾಜು 15 ಸಾವಿರಕ್ಕೂ ಅಧಿಕ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

ಇದಕ್ಕೂ ಮುನ್ನ ಬೆಳಗ್ಗೆ 6ಕ್ಕೆ ಹಠಯೋಗಿ ವೀರಪ್ಪಜ್ಜನ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ವಿಶೇಷ ಪೂಜೆ ಕಂಕೈರ್ಯಗಳು ಜರುಗಿದವು.

Advertisement

Udayavani is now on Telegram. Click here to join our channel and stay updated with the latest news.

Next