Advertisement
ಪಟ್ಟಣದಲ್ಲಿ ಇದುವರೆಗೂ ಯಾವುದೇ ಪ್ರಕರಣಗಳು ಕಾಣಿಸಿಕೊಂಡಿರಲಿಲ್ಲ. ಆದರೆ ಎರೆಡು ದಿನಗಳಲ್ಲಿ ಇನ್ನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿರುವ 14 ಜನರ ಗಂಟಲು ದ್ರವ ಪರೀಕ್ಷೆಗೆ ಒಳಪಡಿಸಬೇಕಾಗಿದೆ. ಇನ್ನು ದ್ವಿತೀಯ ಸಂಪರ್ಕಿತರ ಸಂಖ್ಯೆ 50ಕ್ಕೂ ಅಧಿಕವಾಗಿದ್ದು, ಇದರಿಂದಾಗಿ ಪಟ್ಟಣದ ಜನರಲ್ಲಿ ಭೀತಿ ಹುಟ್ಟಿಸಿದೆ. ದೆಹಲಿ ಮತ್ತು ಬೆಂಗಳೂರಿನ ಎರಡು ಕೋವಿಡ್-19 ಪ್ರಕರಣಗಳು ಇಡೀ ಗಜೇಂದ್ರಗಡವನ್ನೇ ಬೆಚ್ಚಿ ಬೀಳಿಸುವಂತಾಗಿದ್ದು, ಇಬ್ಬರು ಸೋಂಕಿತರು ಇರುವ ಬಡಾವಣೆಗಳನ್ನು ಅಧಿ ಕಾರಿಗಳು 14 ದಿನಗಳವರೆಗೆ ಸೀಲ್‌ಡೌನ್ ಮಾಡಿದ್ದಾರೆ. ಇದಲ್ಲದೇ ಕ್ರಿಮಿನಾಶಕ ದ್ರಾವಣ ಸಿಂಪಡನೆ ಸಹ ಕೈಗೊಂಡಿದ್ದಾರೆ. ಸ್ಥಳೀಯ ಪೂಜಾರ ಪ್ಲಾಟ್‌ನಲ್ಲಿ ಸೋಂಕಿತರ ಮನೆಯಿಂದ 100 ಮೀಟರ್‌ವರೆಗೆ ಬೇಲಿ ಹಾಕುವ ಮೂಲಕ ಅಲ್ಲಿನ ನಿವಾಸಿಗಳು ಮನೆಯಿಂದ ಹೊರ ಬರದಂತೆ ಸೂಚಿಸಿದ್ದಾರೆ.
Advertisement
ಗಜೇಂದ್ರಗಡದ 2 ಬಡಾವಣೆ ಸೀಲ್‌ಡೌನ್
04:21 PM Jul 11, 2020 | Suhan S |
Advertisement
Udayavani is now on Telegram. Click here to join our channel and stay updated with the latest news.