Advertisement

36 ವರ್ಷ ಲಾಹೋರ್‌ ಜೈಲಲ್ಲಿದ್ದ ಗಜಾನಂದ ಶರ್ಮಾ ಕೊನೆಗೂ ಮನೆಗೆ

06:37 PM Aug 13, 2018 | udayavani editorial |

ಹೊಸದಿಲ್ಲಿ : ಕಳೆದ 36 ವರ್ಷಗಳಿಂದ ನಾಪತ್ತೆಯಾಗಿದ್ದ ಜೈಪುರ ನಿವಾಸಿ ಗಜಾನಂದ ಶರ್ಮಾ ಅವರು ಕೊನೆಗೂ ಲಾಹೋರ್‌ ಜೈಲಿನಲ್ಲಿ ಬಂಧಿಯಾಗಿರುವುದು ಪತ್ತೆಯಾಗಿದ್ದು ಇದೀಗ ಅವರು ಪಾಕ್‌ ಸರಕಾರ ತನ್ನ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ತೋರಿರುವ ಸದ್ಭಾವನೆಯ ಕ್ರಮವಾಗಿ ಭಾರತ -ಪಾಕ್‌ ಗಡಿಯಲ್ಲಿನ ವಾಘಾ ಮೂಲಕ ಸ್ವತಂತ್ರರಾಗಿ ಬಂದು ತನ್ನ ಮನೆಯವರನ್ನು ಸೇರಿಕೊಂಡಿದ್ದಾರೆ. 

Advertisement

ಪಾಕ್‌ ಸರಕಾರ ಬಿಡುಗಡೆಗೊಳಿಸಿರುವ 26 ಭಾರತೀಯ ಕೈದಿಗಳಲ್ಲಿ (ಹೆಚ್ಚಿನವರು ಬೆಸ್ತರು) ಗಜಾನಂದ ಶರ್ಮಾ ಕೂಡ ಒಬ್ಬರಾಗಿದ್ದಾರೆ.

ಗಜಾನಂದ ಅವರು ನಾಪತ್ತೆಯಾಗಿದ್ದಾಗ ಅವರಿಗೆ 32 ವರ್ಷ ವಯಸ್ಸಿತ್ತು. ಈಗ ಅವರು 68ರ ವೃದ್ಧರಾಗಿದ್ದಾರೆ. ಮೂರು ದಶಕಗಳಿಂದ ನಾಪತ್ತೆಯಾಗಿದ್ದ ಅವರು ಸತ್ತಿದ್ದಾರೋ ಬದುಕಿದ್ದಾರೋ ಎಂಬುದು ಅವರ ಮನೆಯವರಿಗೆ ಗೊತ್ತೇ ಇರಲಿಲ್ಲ. 

ಗಜಾನಂದ ಶರ್ಮಾಅವರು ಲಾಹೋರ್‌ ಜೈಲಿನಲ್ಲಿರುವ ವಿಷಯ ಈ ವರ್ಷವಷ್ಟೇ ಅವರ ಮನೆಯವರಿಗೆ ಗೊತ್ತಾದಾಗ ಅವರಿಗೆಲ್ಲ  ಶಾಕ್‌ ಆಗಿತ್ತು. 36 ವರ್ಷಗಳ ಬಳಿಕ ಶರ್ಮಾ ಕೊನೆಗೂ ತಮ್ಮ ಮನೆಯವರನ್ನು ಸೇರಿಕೊಂಡದ್ದು ವಿಧಿಯ ಲೀಲೆಯೆ ಆಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next