Advertisement

Madikeri ಮಾಲ್ದಾರೆಯಲ್ಲಿ ಆತಂಕ ಸೃಷ್ಟಿಸಿರುವ ಗಜ ಪರಿವಾರ

11:23 PM Sep 12, 2023 | Team Udayavani |

ಮಡಿಕೇರಿ: ಕೊಡಗು ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಕಾಡಾನೆಗಳ ಉಪಟಳ ಕೈಮೀರುತ್ತಿದೆ. ಸಿದ್ದಾಪುರದ ಮಾಲ್ದಾರೆ- ಹುಂಡಿ ಗ್ರಾಮ ವ್ಯಾಪ್ತಿಯಲ್ಲಿ 20ಕ್ಕೂ ಅಧಿಕ ಸಂಖ್ಯೆಯ ಗಜ ಪರಿವಾರ ಹಾಡಹಗಲೇ ಸಂಚರಿಸುತ್ತಿದ್ದು, ಗ್ರಾಮಸ್ಥರಲ್ಲಿ ಜೀವಭಯ ಮೂಡಿದೆ.

Advertisement

ಕಳೆದ ಒಂದು ವಾರದಿಂದ ತೋಟದಿಂದ ತೋಟಕ್ಕೆ ಸಂಚರಿಸುತ್ತಿರುವ ಕಾಡಾನೆಗಳ ಹಿಂಡು ಅಪಾರ ನಷ್ಟ ಉಂಟು ಮಾಡಿವೆ. ಮೂರಕ್ಕೂ ಹೆಚ್ಚು ಮರಿಗಳ ಸಹಿತ ಮುಖ್ಯ ರಸ್ತೆಯಲ್ಲಿ ಸಂಚರಿಸುತ್ತಿರುವ ಗಜ ಪರಿವಾರದಿಂದ ಕಾರ್ಮಿಕರು ತೋಟಗಳಿಗೆ ಕೆಲಸಕ್ಕೆ ಬರುತ್ತಿಲ್ಲ. ವಿದ್ಯಾರ್ಥಿಗಳು ಶಾಲೆಗಳಿಗೆ ತೆರಳಲು ಧೈರ್ಯ ತೋರುತ್ತಿಲ್ಲ. ವಾಹನ ಚಾಲಕರು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಸಂಚರಿಸಬೇಕಾಗಿದೆ.

ಮರಿಗಳು ಜತೆಯಲ್ಲೇ ಇರುವುದರಿಂದ ಮನುಷ್ಯರ ಮೇಲೆ ದಿಢೀರ್‌ ದಾಳಿ ನಡೆಸುವ ಸಾಧ್ಯತೆಗಳೇ ಹೆಚ್ಚಾಗಿದೆ. ಅರಣ್ಯ ಸಿಬಂದಿ ಆನೆಗಳನ್ನು ಕಾಡಿಗಟ್ಟಿದರೂ ಮರಳಿ ಬಂದು ತೋಟಗಳಲ್ಲಿ ನೆಲೆ ನಿಲ್ಲುತ್ತಿವೆ. ಅರಣ್ಯ ಇಲಾಖೆ ಕೂಡ ಅಸಹಾಯಕವಾಗಿದೆ.

ಕಾಡಾನೆಗಳ ದಾಳಿಯನ್ನು ತಡೆಯಲು ಸರಕಾರ ಶಾಶ್ವತ ಪರಿಹಾರ ಸೂಚಿಸಬೇಕೆಂದು ಕಳೆದ ಒಂದು ದಶಕದಿಂದ ಗ್ರಾಮಸ್ಥರು ಆಗ್ರಹಿಸುತ್ತಲೇ ಬಂದಿದ್ದಾರೆ. ಆದರೆ ಕಾಡಾನೆ ದಾಳಿಗೆ ಸಿಲುಕಿ ಅಮಾಯಕ ಜೀವಗಳು ನಿರಂತರವಾಗಿ ಬಲಿಯಾಗುತ್ತಿವೆಯೇ ಹೊರತು ದಾಳಿ ತಡೆಗೆ ಇನ್ನೂ ಕೂಡ ಮಾರ್ಗೋಪಾಯಗಳನ್ನು ಕಂಡುಕೊಂಡಿಲ್ಲ. ಸದ್ಯ ಮಾಲ್ದಾರೆ- ಹುಂಡಿ ಗ್ರಾಮಸ್ಥರಿಗೆ ಗಜ ದಿಗ್ಬಂಧನದಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next