Advertisement
ನಗರದ ಖಾಸಗಿ ಹೋಟೆಲ್ ಒಂದರಲ್ಲಿ ನಡೆಯುತ್ತಿರುವ ಅನಿಮೇಷನ್, ವಿಷುವಲ್ ಎಫೆಕ್ಟ್ಸ್, ಗೇಮಿಂಗ್ಸ್ ಮತ್ತು ಕಾಮಿಕ್ಸ್ (ಎವಿಜಿಸಿ)ಗೆ ಸಂಬಂಧಿಸಿದ ಮೂರು ದಿನಗಳ ಜಿಎಎಫ್ಎಕ್ಸ್ ಸಮ್ಮೇಳನದಲ್ಲಿ ಪಾಲ್ಗೊಂಡ ಹಲವು ತಜ್ಞರು ಇಂತಹ ಅನಿಸಿಕೆ ವ್ಯಕ್ತಪಡಿಸಿದರು. ಆದರೂ, ಈ ಕ್ಷೇತ್ರದಲ್ಲಿ ಭಾರತ ಭವಿಷ್ಯ ಉಜ್ವಲವಾಗಿದೆ ಎಂಬ ನಿರೀಕ್ಷೆಯೂ ಸಮ್ಮೇಳನದಲ್ಲಿ ವ್ಯಕ್ತವಾಯಿತು. ಹಾಗೆಯೇ ಇ-ಗೇಮಿಂಗ್ ಸಾಫ್ಟ್ ವೇರ್‌ಗಳ ಜೊತೆ ಹಾರ್ಡ್‌ವೇರ್‌ಗಳ ಅಭಿ ವೃದ್ಧಿಗೊಳ್ಳಬೇಕು, ಭಾರತದ ವಸ್ತು ವಿಷಯಗಳು ಜಗತ್ತಿಗೆ ತಲುಪಬೇಕು ಎಂಬ ಸಲಹೆಯೂ ಮೂಡಿತು. ಭಾರತ ಜಗತ್ತಿನ ಸರಕಿಗೆ ಬರೀ ಮಾರುಕಟ್ಟೆಯಾದರೆ ಸಾಲದು, ನಮ್ಮ ಸರಕು, ಪರಿಕಲ್ಪನೆಗಳು ಜಗತ್ತಿನೆಲ್ಲೆಡೆ ಬಿಂಬಿಸಲಿ ಎಂಬ ಎಚ್ಚರಿಕೆಯ ಮಾತುಗಳು ತಜ್ಞರಿಂದ ಕೇಳಿಬಂತು.
Related Articles
Advertisement
ಡಿಜಿಟಲ್ ಯುಗದಲ್ಲಿ ಕಾಪಿ ಮಾಡಬೇಡಿ :
ಅಗ್ಯುಮೆಂಟೆಡ್ ರಿಯಾಲಿಟಿ, ವರ್ಚುವಲ್ ರಿಯಾಲಿಟಿ, ಮೆಟಾವರ್ಸ್ ಕ್ಷೇತ್ರಗಳಿಂದ ಡಿಜಿಟಲ್ ಕಲಾವಿದರಿಗೆ, ಕಲಾವಿದರಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಲಿದೆ. ಆದರೆ, ಕಲಾವಿದರು ಯಾವ ಕಾರಣಕ್ಕೂ ಕಲೆಗಳನ್ನು ಕಾಪಿ ಮಾಡಬಾರದು. ತಮ್ಮ ಪ್ರತಿ ಕಲೆಗೂ ಅಧಿಕೃತತೆ ಅತಿ ಮುಖ್ಯ. ಈಗ ನಾವು ನೋಡುತ್ತಿರುವ ಮೆಟಾವರ್ಸ್ ಬರೀ ಆರಂಭಿಕ ಹಂತ. ನೈಜ ಮೆಟಾವರ್ಸ್‌ನ ಅನುಭವಕ್ಕೆ ಹಾರ್ಡ್‌ವೆರ್ ಕ್ರಾಂತಿಯಾಗುವ ಅಗತ್ಯವಿದೆ ಎಂದು ಎವಿಜಿಸಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಸಮಾಜಕ್ಕೆ ಒಳಿತು ಮಾಡುವ ಅಂಶಗಳನ್ನು ಗೇಮಿಂಗ್‌ನಲ್ಲಿ ತರುವ ಅಗತ್ಯವಿದೆ. ಗೇಮ್ ಉದ್ದಿಮೆಯಲ್ಲಿರುವವರು ಸದಾ ನವೋದ್ಯಮಿಯ ಮನಸ್ಥಿತಿಯನ್ನು ಹೊಂದಿರಬೇಕು. ಗೇಮರ್‌ಗಳು ಸದಾ ಕಲಿಕೆಯ ಮನೋಭಾವ ಹೊಂದಿರಬೇಕು. ಸ್ಥಳೀಯ ವಸ್ತು ವಿಷಯಗಳಿಗೆ ಹೆಚ್ಚು ಒತ್ತು ನೀಡಿ, ವಿಭಿನ್ನ ನಿರೂಪಣೆಯ ತಂತ್ರದೊಂದಿಗೆ ಅದನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಬೇಕು. -ರಾಹುಲ್ ಭಟ್ಟಾಚಾರ್ಯ, ಮೈಕ್ರೋಗ್ರಾವಿಟಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ.
ಸೃಜನಾತ್ಮಕತೆ ಮತ್ತು ತಂತ್ರಜ್ಞಾನ ಇ-ಗೇಮಿಂಗ್ ಉದ್ಯಮದಲ್ಲಿ ಅತ್ಯಗತ್ಯ. ತಂತ್ರಜ್ಞಾನದ ದೃಷ್ಟಿಯಲ್ಲಿ ನಾವು ಮುಂದುವರಿದಿದ್ದರೂ ನಮ್ಮ ವಸ್ತು ವಿಷಯಗಳನ್ನು ಸೃಜನಾತ್ಮಕವಾಗಿ ಬಿಂಬಿಸುವಲ್ಲಿ ಯಶಸ್ಸು ಕಾಣುವ ಅಗತ್ಯವಿದೆ.-ನಮೃತಾ ಬಿ.ಸ್ವಾಮಿ, ಮೊಬೈಲ್ ಪ್ರೀಮಿಯರ್ ಲೀಗ್ನ ಮುಖ್ಯ ಕಾರ್ಯಾಚರಣಾಧಿಕಾರಿ.