Advertisement
ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು ಮತ್ತು ಜನಾರ್ದನ ಕಲಾವೃಂದ ಜೋಡುಕಲ್ಲು ಇವರ ಸಂಯುಕ್ತ ಆಶ್ರಯದಲ್ಲಿ ಜೆಕೆವಿ ಸಭಾಂಗಣದಲ್ಲಿ ಜರುಗಿದ ಕನ್ನಡದ ಹಿರಿಯ ಚೇತನ ನಾಡೋಜ ಡಾ.ಕಯ್ಯಾರ ಕಿಞಣ್ಣ ರೈಗಳ 104 ನೇ ಜನ್ಮದಿನಾಚರಣೆ ಮತ್ತು ಗಡಿನಾಡ ಕೇಸರಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಕಯ್ಯಾರರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೆ„ದು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಗಟ್ಟಿ ಕನ್ನಡಿಗರಾಗಿ ಕನ್ನಡವನ್ನೇ ಜೀವನವಾಗಿಸಿದವರು ಕಯ್ಯಾರರು. ಅನುಭವ ಸಾಮ್ರಾಜ್ಯದಲ್ಲಿ ಸರಳ ವ್ಯಕ್ತಿತ್ವ ಮತ್ತು ದಿಟ್ಟತನದ ಬರಹಗಳ ಮೂಲಕ, ಹೋರಾಟಗಳ ಮೂಲಕ ಬೆಂಕಿ ಬಿದ್ದಿದೆ ಮನೆಗೆ ಎಚ್ಚೆತ್ತು ಹೋರಾಡಿ ಎಂದು ಕನ್ನಡಿಗರನ್ನು ಒಗ್ಗೂಡಿಸಿ ಹೋರಾಡಿದವರು. ಬಹುಭಾಷಾ ಸಾಧಕರು. ವಿಭಿನ್ನ ಭಾಷಾ ವೀವಿಧ್ಯತೆ ಹೊಂದಿರುವ ಕಾಸರಗೋಡಲ್ಲಿ ಕನ್ನಡಿಗರ ಭಾಷಾ ಪ್ರೇಮ ಗಟ್ಟಿಯಾಗಿ ಉಳಿಯಲು ಇಂತಹ ಚೇತನಗಳೇ ಕಾರಣ ಎಂದು ಅವರು ಹೇಳಿದರು.
ಕೇರಳ ಗ್ರಾಮೀಣ ಬ್ಯಾಂಕ್‌ನ ನಿವೃತ್ತ ಪ್ರಾದೇಶಿಕ ಪ್ರಬಂಧಕರಾದ ಎಸ್.ಜಗನ್ನಾಥ ಶೆಟ್ಟಿ ಕುಂಬಳೆ ಸಂಸ್ಮರಣಾ ಭಾಷಣ ಮಾಡಿ ಕಯ್ನಾರರ ವ್ಯಕ್ತಿತ್ವ, ಸಾಧನೆ, ರಾಜಕೀಯ, ಸಾಮಾಜಿಕ, ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳ ಬಗ್ಗೆ ಮಾಹಿತಿ ನೀಡಿದರು. ರವಿ ನಾಯ್ಕಪು ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿದರು. ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ ಎ.ಕೆ.ಎಂ. ಅಶ್ರಫ್, ಮಂಜೇಶ್ವರ ಬ್ಲಾಕ್ ಪಂಚಾಯತ್ ಸದಸ್ಯ ಪ್ರಸಾದ ರೈ ಕಯ್ನಾರು, ಪೈವಳಿಕೆ ಸೇವಾ ಸಹಕಾರಿ ಬ್ಯಾಂಕ್ ಶ್ರೀಧರ ಹೊಳ್ಳ ಕಯ್ನಾರು, ಕ.ಜಾ.ಪ. ಕೇರಳ ಘಟಕ ಅಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ , ಪ್ರೊ. ಶ್ರೀನಾಥ್, ಮೀಡಿಯ ಕ್ಲಾಸಿಕಲ್ ಅಧ್ಯಕ್ಷ ಶ್ರೀಕಾಂತ್ ನೆಟ್ಟಣಿಗೆ, ಲಯನ್ಸ್ ಕ್ಲಬ್ ಅಧ್ಯಕ್ಷ ರಾಧಾಕೃಷ್ಣ ಮಡಂದೂರು, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಯು.ಎ.ಇ ಘಟಕದ ಉಪಾಧ್ಯಕ್ಷ ಮುನೀರ್ ಕುಬನೂರು, ಸಿದ್ಧಿಕ್ ಕಯ್ನಾರ್, ಕಾರ್ಯದರ್ಶಿ ಇಬ್ರಾಹಿಂ ಬಾಜೂರಿ, ತಾಜುದ್ದೀನ್ ಕುಬನೂರು ಹಾಗೂ ಸದಸ್ಯರಾದ ಸಾಕೀರ್ ಬಾಯಾರು ಮೊದಲಾದವರು ಮುಖ್ಯ ಅಥಿತಿಗಳಾಗಿ ಭಾಗವಹಿಸಿದರು. ನವೀನ್ ನೆಟ್ಟಣಿಗೆ, ಗೋವಿಂದ ಪೈ ಕಾಲೇಜು ಉಪನ್ಯಾಸಕರಾದ ಶಿವಶಂಕರ್ ಉಪಸ್ಥಿತರಿದ್ದರು. ಗಾಯಕ ಋತಿಕ್ ಯಾದವ್ ಪ್ರಾರ್ಥನೆ ಹಾಡಿದರು. ಗ.ಸ.ಸಾಂ. ಅಕಾಡೆಮಿ ಪ್ರಧಾನ ಕಾರ್ಯದರ್ಶಿ ಅಖೀಲೇಶ್ ನಗುಮುಗಂ ವಂದಿಸಿ ಜತೆಕಾರ್ಯದರ್ಶಿ ವಿದ್ಯಾ ಗಣೇಶ್ ಅಣಂಗೂರು ಕಾರ್ಯಕ್ರಮ ನಿರ್ವಹಿಸಿದರು.
Related Articles
Advertisement
ಟಿ.ಎಚ್.ಎಂ.ಬಸವರಾಜ್, ಜನಪದ ಪರಿಷತ್ತು ಬಳ್ಳಾರಿ ಘಟಕದ ಅಧ್ಯಕ್ಷ
ಅಪ್ಪಟ ಕನ್ನಡಿಗರಾದ ಕಯ್ಯಾರರು ನಮ್ಮಲ್ಲಿ ತುಂಬಿದ ಭಾಷಾ ಪ್ರೇಮದ ಕಂಪು ಆರಿಹೋಗದಂತೆ ಗಡಿನಾಡ ಕನ್ನಡಿಗರು ಜಾಗೃತರಾಗಬೇಕು. ತಮ್ಮ ಮಕ್ಕಳನ್ನು ಕನ್ನಡ ಶಾಲೆಗಳಿಗೆ ಸೇರಿಸುವುದು, ಕನ್ನಡದ ಪುಸ್ತಕಗಳನ್ನು, ಪತ್ರಿಕೆಗಳನ್ನು ಓದಲು ನೀಡುವ ಮೂಲಕ ಭಾಷೆಯ ಬಗ್ಗೆ ಪ್ರೀತಿ ಮತ್ತು ಗೌರವ ಹುಟ್ಟುವಂತೆ ಮಾಡಬೇಕು. ಆದುದರಿಂದಲೇ ನನ್ನ ಮಕ್ಕಳನ್ನು ಕನ್ನಡ ಶಾಲೆಗಳಿಗೆ ಸೇರಿಸಿ ಕನ್ನಡದಲ್ಲೇ ವಿದ್ಯಾಭ್ಯಾಸ ನೀಡುತ್ತಿದ್ದೇನೆ.
ಎ.ಕೆ.ಎಂ.ಅಶ್ರಫ್, ಅಧ್ಯಕ್ಷರು, ಮಂಜೇಶ್ವರ, ಬ್ಲೋಕ್ ಪಂಚಾಯತ್