ದುಷ್ಟಶಕ್ತಿಗಳ ಆರ್ಭಟ, ಅದರ ನಡುವೆಯೇ ದೈವಿಶಕ್ತಿಗಳ ಪವಾಡ, ಇವೆರಡರ ನಡುವಿನ ಜಿದ್ದಾಜಿದ್ದಿನ ಹೋರಾಟ, ಮಧ್ಯೆ ರೋಚಕತೆಯ ಮೆರವಣಿಗೆ… ಇದು ಈ ವಾರ ತೆರೆಕಂಡಿರುವ “ಗದಾಯುದ್ಧ’ ಚಿತ್ರದ ಮೂಲ ಅಂಶ. ಹಾಗಂತ ಸಿನಿಮಾ ಇಷ್ಟಕ್ಕೇ ಸೀಮಿತವಾಗಿದೆ ಎನ್ನುವಂತಿಲ್ಲ. ಒಂದು ಕಮರ್ಷಿಯಲ್ ಸಿನಿಮಾದಲ್ಲಿ ಏನೆಲ್ಲಾ ಅಂಶಗಳಿರಬೇಕೋ, ಆ ಎಲ್ಲಾ ಅಂಶಗಳು ಈ ಚಿತ್ರದಲ್ಲಿವೆ.
ಮುಖ್ಯವಾಗಿ ಈ ಚಿತ್ರ ಆಸ್ತಿಕ-ನಾಸ್ತಿ ಕರ ಜೊತೆಗೆ ಕೊಲ್ಲುವವನೊಬ್ಬನಿದ್ದರೆ ಕಾಯುವವನೊಬ್ಬನಿರುತ್ತಾನೆ ಎಂಬ ಅಂಶವನ್ನು ಈ ಸಿನಿಮಾ ಎತ್ತಿ ತೋರಿಸುತ್ತದೆ.
ಸಿನಿಮಾದಲ್ಲಿ ಪ್ರೇತ, ವಾಮಾಚಾರ, ಭಾನಾಮತಿ, ಮಾಟ.. ಹೀಗೆ ಹಲವು ಅಂಶಗಳು ಬಂದು ಹೋಗುತ್ತವೆ. ಬ್ಲಾಕ್‌ಮ್ಯಾಜಿಕ್ ಬಗ್ಗೆ ಕುತೂಹಲ ಇರುವವರಿಗೆ ಈ ಸಿನಿಮಾ ಖುಷಿ ಕೊಡುತ್ತದೆ. ಸಿನಿಮಾ ಕ್ಷಣ ಕ್ಷಣವೂ ಒಂದಷ್ಟು ರೋಚಕ ಅಂಶಗಳೊಂದಿಗೆ ಸಾಗುತ್ತವುದು ಈ ಸಿನಿಮಾದ ಪ್ಲಸ್‌ಗಳಲ್ಲಿ ಒಂದು. ಮುಖ್ಯವಾಗಿ ದೈವಿಶಕ್ತಿ ಹಾಗೂ ದುಷ್ಟಶಕ್ತಿ ಗಳ ನಡುವಿನ ಹೋರಾಟವನ್ನು ತೋರಿಸುವುದು ಚಿತ್ರದ ಮೂಲ ಉದ್ದೇಶ. ಈ ಸಿನಿಮಾದಲ್ಲಿ ಕೇವಲ ಮನರಂಜನೆ ಮಾತ್ರವಲ್ಲ, ಇದು ವಿಜ್ಞಾನದ ಆಧಾರದಲ್ಲಿ ವೇದಗಳ ಮತ್ತು ರಾಕ್ಷಸರ ಇರುವಿಕೆಯನ್ನು ತಿಳಿಸುವ ಪ್ರಯತ್ನವನ್ನು ಮಾಡಲಾಗಿದೆ.
ವಾಮಾಚಾರವನ್ನು ಹಾರರ್‌ನಲ್ಲಿ ತೋರಿಸುವ ಎಷ್ಟೊ ಸಿನಿಮಾಗಳು ಬಂದಿವೆ. ಆದರೆ ಸೈನ್ಸ್ ಮೂಲಕ ವಾಮಾಚಾರವನ್ನು ತೋರಿಸುವ ಪ್ರಯತ್ನ ಈ ಸಿನಿಮಾದಲ್ಲಾಗಿದೆ. ಆ ಮಟ್ಟಿಗೆ “ಗದಾಯುದ್ಧ’ ಒಂದಷ್ಟು ಹೊಸ ಪ್ರಯತ್ನಗಳ ಮೂಲಕ ಮೂಡಿಬಂದ ಸಿನಿಮಾ ಎನ್ನಬಹುದು.
ನಾಯಕ ಸುಮಿತ್ ಭರವಸೆ ಮೂಡಿಸಿದ್ದಾರೆ. ಮೆಡಿಕಲ್ ಸ್ಟೂಡೆಂಟ್ ಆಗಿದ್ದುಕೊಂಡು, ಬ್ಲಾಕ್ ಮ್ಯಾಜಿಕ್ ಬಗ್ಗೆ ತಿಳಿದುಕೊಳ್ಳುವ ಹಾಗೂ ಅಮಾಯಕರನ್ನು ಕಾಪಾಡುವ ಪಾತ್ರದಲ್ಲಿ ಸುಮಿತ್ ಕಾಣಿಸಿಕೊಂಡಿದ್ದು, ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
ನಾಯಕಿ ಧನ್ಯಾ, ಡ್ಯಾನಿ ಕುಟ್ಟಪ್ಪ, ಶರತ್ ಲೋಹಿತಾಶ್ವ, ಹಿರಿಯ ನಟ ಶಿವರಾಂ ಸೇರಿ ದಂತೆ ಅನೇಕರು ನಟಿಸಿದ್ದಾರೆ