ಹೇಳಿದರು.
Advertisement
ನಗರದ ತೋಂಟದಾರ್ಯ ಮಠದಲ್ಲಿ ಲಿಂಗೈಕ್ಯ ಡಾ| ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳವರ 74ನೇ ಜಯಂತಿ ಅಂಗವಾಗಿ ಮಂಗಳವಾರ ಜರುಗಿದಭಾವೈಕ್ಯತಾ ದಿನಾಚರಣೆ, ಗ್ರಂಥಗಳ ಬಿಡುಗಡೆ ಹಾಗೂ ಸನ್ಮಾನ ಸಮಾರಂಭದಲ್ಲಿ ತೋಂಟದ ಶ್ರೀಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.
Related Articles
Advertisement
ಮುಂಡರಗಿ ತೋಂಟದಾರ್ಯ ಶಾಖಾ ಮಠದ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಮಾತನಾಡಿ, ಬಸವಣ್ಣನ ಆಶಯಗಳು ನೇಪಥ್ಯಕ್ಕೆ ಸರಿದಿದ್ದ ಸಮಯ ದಲ್ಲಿ ಪೀಠವನ್ನೇರಿದ ಸಿದ್ಧಲಿಂಗ ಶ್ರೀಗಳು ತಮ್ಮ ಸತತ ಪರಿಶ್ರಮದಿಂದ ಬಸವಣ್ಣನ ಆಶಯಗಳಿಗೆ ಸರ್ವವ್ಯಾಪಿ ಆಯಾಮ ನೀಡಿದರು. ಸದ್ಯ ದೇಶದಲ್ಲೇ ಗುಣಮಟ್ಟದ ಶುದ್ಧ ಗಾಳಿ ನೀಡುವ ಕಪ್ಪತಗುಡ್ಡದ ಉಳಿವಿಗೆ ಶ್ರೀಗಳು ಅವಿರತ ಹೋರಾಟ ಮಾಡಿದ್ದರು. ದೇಶದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಪುಲೆ ಜಯಂತಿಯನ್ನು ಶಿಕ್ಷಕರ ದಿನವನ್ನಾಗಿ ಆಚರಿಸುವಂತೆ ಹೇಳಿಕೆ ನೀಡಿ ಹಲವರ ವಿರೋಧಕ್ಕೂ ಗುರಿಯಾಗಿದ್ದರು. ಸರ್ವತೋಮುಖ ವ್ಯಕ್ತಿತ್ವ ಹೊಂದಿದ್ದ ಅವರು ಇತರೆ ಸ್ವಾಮೀಜಿಗಳಿಗೆ ಸ್ಫೂರ್ತಿ ಹಾಗೂ ಶಕ್ತಿಯಾಗಿದ್ದರು ಎಂದರು.
ಗ್ರಂಥಗಳ ಲೋಕಾರ್ಪಣೆ: ಶಶಿಧರ ತೋಡಕರ ಸಂಪಾದಿಸಿದ ಸಮಾಜಮುಖೀ ಸಂಪುಟ-2, ಡಿ. ರಾಮನಮಲಿ ಸಂಪಾದಿಸಿದ ಮೌನಸಾಧಕ, ಡಾ| ಪಾರ್ವತಿ ಹಾಲಭಾವಿ ಬರೆದ ಡಿ.ವ್ಹಿ. ಹಾಲಭಾವಿ, ಡಾ| ವೀರಣ್ಣ ದಂಡೆ ರಚಿಸಿದ ಸ್ಥಾವರ ಜಂಗಮ, ಡಾ| ಮಹೇಶ ಗುರುನಗೌಡರ ಬರೆದ ಸಿದ್ಧಣ್ಣ ಮಸಳಿ, ಡಾ|ಎಸ್.ಎ. ಪಾಲೇಕರ ವಿರಚಿತ ಬಸವೇಶ್ವರಾಸ್ ಕಾನ್ಸೆಪ್ಟ್ ಆಫ್ ಹ್ಯುಮಾನಿಜಮ್ ಆಂಡ್ ಹ್ಯುಮನ್ ರೈಟ್ಸ್ ಗ್ರಂಥಗಳು ಲೋಕಾರ್ಪಣೆಗೊಂಡವು.
ಡಾ| ತೋಂಟದ ಸಿದ್ಧರಾಮ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಭೈರನಹಟ್ಟಿ ಶಾಂತಲಿಂಗ ಶ್ರೀಗಳು, ಅರಸಿಕೆರೆ ಶಾಂತಲಿಂಗ ದೇಶಿಕೇಂದ್ರ ಶ್ರೀಗಳು, ಶಿರೋಳದ ಗುರುಬಸವ ಶ್ರೀಗಳು, ಮಾಜಿ ಸಚಿವ ಎಸ್.ಎಸ್. ಪಾಟೀಲ, ಅಮರೇಶ ಅಂಗಡಿ ಇದ್ದರು. ಕಾರ್ಯಕ್ರಮಕ್ಕೂ ಮುನ್ನ ಬಸವೇಶ್ವರ ಪುತ್ಥಳಿಯಿಂದ ಶ್ರೀಮಠದವರೆಗೂ ಭಾವೈಕ್ಯತಾ ಯಾತ್ರೆ ನೆರವೇರಿತು. ತೋಂಟದಾರ್ಯ ಮಠದ ಆಡಳಿತಾಧಿ ಕಾರಿ ಎಸ್. ಎಸ್. ಪಟ್ಟಣಶೆಟ್ಟರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾಜ ಸೇವಕರಾದ ತಂಬ್ರಹಳ್ಳಿಯ ಅಕ್ಕಿ ಕೊಟ್ರಪ್ಪ ದಂಪತಿಯನ್ನು ಸನ್ಮಾನಿಸಲಾಯಿತು. ಕೊಟ್ರೇಶ ಮೆಣಸಿನಕಾಯಿ ಹಾಗೂ ವೀರನಗೌಡ ಮರಿಗೌಡ್ರ ನಿರೂಪಿಸಿದರು.