Advertisement

ಮಾಂಸ ಮಾರಾಟಕ್ಕೂ ತಟ್ಟಿದ ಕೊರೊನಾ ಭೀತಿ

11:17 AM Mar 12, 2020 | Naveen |

ಗದಗ: ಜಾಗತಿಕ ಮಟ್ಟದಲ್ಲಿ ಹರಡಿರುವ ಕೊರೊನಾ ವೈರಸ್‌ನಿಂದಾಗಿ ವಿಶ್ವದ ಹಲವು ದೇಶಗಳು ತತ್ತರಿಸಿವೆ. ಇದರಿಂದ ಭಾರತವೂ ಹೊರತಾಗಿಲ್ಲ. ಅದರೊಂದಿಗೆ ಕೋಳಿ ಮಾಂಸ ಸೇವನೆಯಿಂದಲೂ ಈ ಸೋಂಕು ಹರಡುತ್ತದೆ ಎಂಬ ವದಂತಿಯ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಮಾಂಸ ಉದ್ಯಮವನ್ನು ಪಾತಾಳಕ್ಕೆ ನೂಕಿದೆ.

Advertisement

ಗದಗ ಸೇರಿದಂತೆ ರಾಜ್ಯದೆಲ್ಲೆಡೆ ಮಾಂಸ ಮಾರಾಟ ಗಣನೀಯವಾಗಿ ಕುಸಿದಿದೆ. ಅದರಲ್ಲೂ ಚಿಕನ್‌ ಸೇವನೆಯಿಂದ ವೈರಸ್‌ ಹರಡುತ್ತದೆ ಎಂಬ ಸಂದೇಶಗಳು ಜಾಲತಾಣಗಳಲ್ಲಿ ಹರಿದಾಡುತ್ತಿರುವುದರಿಂದ ಸಾರ್ವಜನಿಕರು ಬಹುತೇಕ ಮಾಂಸ ಸೇವನೆಯನ್ನೇ ಕೈಬಿಟ್ಟಿದ್ದಾರೆ. ಹೀಗಾಗಿ ಸೋಮವಾರ ಹಾಗೂ ಶನಿವಾರವನ್ನು ಹೊರತಾಗಿ ಇನ್ನುಳಿದಂತೆ ವಾರದ ಐದು ದಿನಗಳ ಕಾಲ ಸದಾ ಜನರಿಂದ ಗಿಜಿಗುಡುತ್ತಿದ್ದ ಮಾಂಸ ಮಾರುಕಟ್ಟೆಗಳು ಇದೀಗ ಗ್ರಾಹಕರಿಲ್ಲದೇ ಬಣಗುಡುತ್ತಿದೆ.

ಚಿಕನ್‌ ವ್ಯಾಪಾರಿಗಳಿಗೆ ಭಾರೀ ಹೊಡೆತ: ಚೀನಾದಲ್ಲಿ ಕೊರೊನಾ ವೈರಸ್‌ ಭಾರೀ ಸದ್ದು ಮಾಡುತ್ತಿದ್ದರೂ ದೇಶದಲ್ಲಿ ಅಷ್ಟಾಗಿ ಪರಿಣಾಮ ಬೀರಿದ್ದಿಲ್ಲ. ಆದರೆ, ಚಿಕನ್‌ ಸೇವನೆಯಿಂದ ಕೊರೊನಾ ವೈರಾಣುಗಳು ಹರಡುತ್ತವೆ ಎಂಬ ಸಂದೇಶಗಳು ಹಾಗೂ ಮಾಂಸದ ಮೇಲೆ ಕಲೆಗಳುಳ್ಳ ´ೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಹರಿದಾಡುತ್ತಿದ್ದು, ಮಾಂಸ ಮಾರಾಟಕ್ಕೂ ಬಿಸಿ ತಟ್ಟಿದೆ.

ಕಳೆದ 15 ದಿನಗಳಿಂದ ದಿನದಿಂದ ದಿನಕ್ಕೆ ಮಾಂಸ ಮಾರಾಟ ಕ್ಷೀಣಿಸುತ್ತಿದ್ದು, ಈ ನಡುವೆ ಹಲವು ಅಂಗಡಿ ತಾತ್ಕಾಲಿಕವಾಗಿ ಬಾಗಿಲು ಮುಚ್ಚುತ್ತಿದ್ದಾರೆ ಎಂಬುದು ಆತಂಕಕಾರಿ ಬೆಳವಣಿಗೆ. ಗದಗ-ಬೆಟಗೇರಿ ಅವಳಿ ನಗರವೊಂದರಲ್ಲೇ ಸುಮಾರು 100ಕ್ಕೂ ಹೆಚ್ಚು ಚಿಕನ್‌ ಹಾಗೂ 50-80 ಮಟನ್‌ ಅಂಗಡಿಗಳಿವೆ. ಆ ಪೈಕಿ ಜವಳ ಗಲ್ಲಿ ಮಾಬುಸುಭಾನ ಕಟ್ಟಿ ಹಾಗೂ ಬೆಟಗೇರಿ ಮಾರುಕಟ್ಟೆ ಪ್ರದೇಶದಲ್ಲಿರುವ ಅಂಗಡಿಗಳಲ್ಲಿ ಪ್ರತಿನಿತ್ಯ ತಲಾ 40- 60 ಕೋಳಿ ಹಾಗೂ 5-10 ಕುರಿ, ಮೇಕೆಗಳ ಮಾಂಸ ಮಾರಾಟವಾಗಿ ಸಾವಿರಾರು ರೂ. ವಹಿವಾಟಾಗುತ್ತಿತ್ತು. ಅದರಲ್ಲೂ ರವಿವಾರ, ಹಬ್ಬದ ಹಾಗೂ ವಿಶೇಷ ದಿನಗಳಲ್ಲಿ ಈ ಸಂಖ್ಯೆ ದುಪ್ಪಟ್ಟಾಗುತ್ತಿತ್ತು. ಆದರೆ, ಇದೀಗ ಎಲ್ಲೆಡೆ ಆವರಿಸಿರುವ ಕೊರೊನಾ ಭೀತಿಯಿಂದ ದಿನ ಕಳೆದಂತೆ ಮಾಂಸ ಕೊಳ್ಳುವವರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದ್ದು, ಈಗ ದಿನಕ್ಕೆ 5ರಿಂದ 10 ಕೋಳಿ ಹಾಗೂ ನಾಲ್ಕೈದು ಕುರಿ ಮಾಂಸವೂ ಮಾರಾಟವಾದರೆ ಸಾಕು ಎನ್ನುವ ಪರಿಸ್ಥಿತಿ ಬಂದೊದಗಿದೆ ಎನ್ನುತ್ತಾರೆ ಸ್ಥಳೀಯ ವರ್ತಕರು.

ಚಿಕನ್‌, ಮಟನ್‌ ಸೇವಿಸಿದರೆ ಕರೋನಾ ರೋಗಾಣುಗಳು ಹರಡುತ್ತವೆ ಎಂಬುದು ಯಾವುದೇ ವೈದ್ಯರು ಹಾಗೂ ಸರಕಾರ ಘೋಷಿಸಿಲ್ಲ. ಆದರೆ, ಯಾರೋ ಕಿಡಿಗೇಡಿಗಳು ಹರಡಿದ ವಾಟ್ಸ್‌ಆ್ಯಪ್‌ ಸಂದೇಶದಿಂದ ನಮ್ಮ ಬದುಕನ್ನೇ ಕಿತ್ತಿಕೊಳ್ಳುತ್ತಿದೆ. ಈ ಬಗ್ಗೆ ಜಿಲ್ಲಾಡಳಿತ ಜಾಗೃತಿ ಕಾರ್ಯಕ್ರಮಗಳಲ್ಲಿ ಮಾಹಿತಿ ನೀಡಬೇಕು.
ಸುಭಾಷ ಕಲಾಲ್‌, ನಗರದ ಮಾಂಸ
ಮಾರಾಟಗಾರರ ಸಂಘದ ಅಧ್ಯಕ್ಷ್ಯ

Advertisement

ಕೊರೊನಾ ವೈರಸ್‌ ಇರುವ ವ್ಯಕ್ತಿ ಕೆಮ್ಮುವುದರಿಂದ ಮಾತ್ರ ರೋಗ ಹರಡಲು ಸಾಧ್ಯ. ಆದರೆ, ಚಿಕನ್‌, ಮಟನ್‌ ಕೊರೊನಾ ಸೋಂಕು ಹರಡುವುದಿಲ್ಲ. ಈ ಕುರಿತು ಆರೋಗ್ಯ ಇಲಾಖೆಯಿಂದ ಗ್ರಾ.ಪಂ. ಮಟ್ಟದಲ್ಲಿ ಅಂಗನವಾಡಿ, ಆಶಾ ಕಾರ್ಯಕರ್ತರ ಮೂಲಕ ಜನರಿಗೆ ಮಾಹಿತಿ ನೀಡಲು ಕ್ರಮ ಕೈಗೊಳ್ಳಲಾಗುವುದು.
ಡಾ| ಬಿ.ಎಸ್‌. ಕರಿಗೌಡರ,
ಜಿಲ್ಲಾ ಶಸ್ತ್ರಚಿಕಿತ್ಸ

ಚಿಕನ್‌ ವ್ಯಾಪಾರ ಬಹುತೇಕ ಸ್ತಬ್ಧಗೊಂಡಿದೆ. ಚಿಕನ್‌ ಅಂಗಡಿಕಾರರಿಗೆ ಪ್ರತಿನಿತ್ಯ ಐದಾರು ಸಾವಿರಾರು ನಷ್ಟವಾಗುತ್ತಿದೆ. ಹೀಗಾಗಿ ಕೆಲವರು ಅಂಗಡಿಗಳನ್ನೇ ತೆಗೆಯುತ್ತಿಲ್ಲ. ಇನ್ನುಳಿದವರು ಹೆಚ್ಚಿನ ಕೋಳಿಗಳನ್ನು ತರಿಸುತ್ತಿಲ್ಲ.
ವಾಜೀದ್‌ ಬೋದ್ಲೆಖಾನ,
ಚಿಕನ್‌ ವ್ಯಾಪಾರಿ

ವೀರೇಂದ್ರ ನಾಗಲದಿನ್ನಿ

Advertisement

Udayavani is now on Telegram. Click here to join our channel and stay updated with the latest news.

Next