Advertisement

ವಿವಾಹ ವಿಚ್ಛೇದನಕ್ಕೆ ವಿದಾಯ, ದಾಂಪತ್ಯಕ್ಕೆ ಶ್ರೀಕಾರ: ಮುನಿಸು ಮರೆತು ಮತ್ತೆ ಒಂದಾದ ಜೋಡಿಗಳು

05:04 PM Mar 27, 2021 | Team Udayavani |

ಗದಗ: ದಾಂಪತ್ಯ ಜೀವನದಲ್ಲಿ ವಿರಸ ಮೂಡಿದ್ದರಿಂದ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದವರ ಪೈಕಿ ಎರಡು ಜೋಡಿಗಳು ಮತ್ತೆ ಒಂದಾಗಿವೆ.

Advertisement

ಹಿಂದಿನ ಕಹಿ ಘಟನೆಗಳನ್ನು ಮರೆತು, ಸುಖಿ ಸಂಸಾರ ನಡೆಸುವ ನಿರ್ಣಯಕ್ಕೆ ಶನಿವಾರ ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ಮೆಗಾ ಲೋಕ ಅದಾಲತ್ ವೇದಿಕೆಯಾಯಿತು. ಪರಸ್ಪರ ಹೂವಿನ ಹಾರ ಬದಲಾಯಿಸಿಕೊಳ್ಳುವ ಮೂಲಕ ವಿಚ್ಛೇದನ ಅರ್ಜಿಗೆ ವಿದಾಯ ಹೇಳಿದ್ದಾರೆ.

ಮೂಲತಃ ಎಚ್.ಎಸ್.ವೆಂಕಟಾಪುರ ಗ್ರಾಮದವರಾದ ಅಶೋಕ ನರಸಿಂಗಪ್ಪ ಮಲ್ಲಸಮುದ್ರ ಹಾಗೂ ಹುಲಕೋಟಿ ಗ್ರಾಮದ ಸುಧಾ, ಮತ್ತೊಂದು ಪ್ರಕರಣದಲ್ಲಿ ಕಲಬುರ್ಗಿ ಜಿಲ್ಲೆ ಕಾಳಗಿ ಗ್ರಾಮದ ಡಾ|ಸುರೇಶ್ ರೆಡ್ಡಿ ಸಂಪತಿ ಮತ್ತು ಗದಗಿನ ಪುಷ್ಪಾ ಅವರು ಕೋರಿದ್ದ ವಿಚ್ಛೇದನವನ್ನು ಕೈಟ್ಟು, ನ್ಯಾಯಾಧೀಶರ ಸಮ್ಮುಖದಲ್ಲಿ ರಾಜೀ ಸಂಧಾನ ಮಾಡಿಕೊಂಡಿದ್ದಾರೆ. ಈ ಮೂಲಕ ನೆಮ್ಮದಿಯ ಜೀವನದತ್ತ ಹೆಜ್ಜೆ ಇರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next