Advertisement

ಮೊದಲ ಹಂತದ ಚುನಾವಣೆ: 2,216 ಅಭ್ಯರ್ಥಿಗಳು ಕಣದಲ್ಲಿ

11:56 AM Dec 16, 2020 | sudhir |

ಗದಗ: ಜಿಲ್ಲೆಯಲ್ಲಿ ಮೊದಲ ಹಂತದ ಗ್ರಾಪಂ ಚುನಾವಣೆಯಲ್ಲಿ 53 ಗ್ರಾಪಂಗಳ 801 ಸ್ಥಾನಗಳ ಪೈಕಿ ಏಳು ಸ್ಥಾನಗಳಿಗೆ ನಾಮಪತ್ರಗಳೇ ಸಲ್ಲಿಕೆಯಾಗಿಲ್ಲ. 51 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇನ್ನುಳಿದಂತೆ 743 ಸ್ಥಾನಗಳಿಗೆ 2,216 ಜನರು ಚುನಾವಣಾ ಕಣದಲ್ಲಿದ್ದಾರೆ. ಗದಗ ತಾಲೂಕಿನ ಚಿಂಚಲಿ ಗ್ರಾಪಂ ವ್ಯಾಪ್ತಿಯ ನೀಲಗುಂದ ಗ್ರಾಮದಿಂದ ಸಲ್ಲಿಕೆಯಾಗಿದ್ದ ಒಂದು ನಾಮಪತ್ರವೂ ಹಿಂಪಡೆದಿದ್ದರಿಂದ ಏಳೂ ಸ್ಥಾನಗಳಿಗೆ ನಾಮಪತ್ರ ಸಲ್ಲಿಕೆಯಾಗಿಲ್ಲ. ನೀಲಗುಂದ ಪ್ರತ್ಯೇಕ ಗ್ರಾಪಂ ಸ್ಥಾಪನೆ ಮಾಡಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ಚುನಾವಣೆ ಬಹಿಷ್ಕರಿಸಿದ್ದಾರೆ.

Advertisement

ಗದಗ ತಾಲೂಕಿನ 26 ಗ್ರಾಪಂಗಳ ಒಟ್ಟು 438 ಸ್ಥಾನಗಳ ಪೈಕಿ 37 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದ್ದು, 394 ಸ್ಥಾನಗಳಿಗೆ ಚುನಾವಣೆ ನಡೆಯಲಿವೆ. ಅನುಸೂಚಿತ ಜಾತಿ 207, ಅನುಸೂಚಿತ ಪಂಗಡದ 77, ಹಿಂದುಳಿದ ಅ ವರ್ಗ 216, ಹಿಂದುಳಿದ ಬ ವರ್ಗ 36, ಸಾಮಾನ್ಯ 653 ಸೇರಿ ಒಟ್ಟು 1,189 ಅಭ್ಯರ್ಥಿಗಳು ಸ್ಪರ್ಧೆಯಲ್ಲಿ ಉಳಿದಿದ್ದಾರೆ.

ಲಕ್ಷ್ಮೇಶ್ವರ ತಾಲೂಕಿನ 13 ಗ್ರಾಪಂಗಳ ಒಟ್ಟು 174 ಸ್ಥಾನಗಳಲ್ಲಿ 7 ಸ್ಥಾನಗಳು ಅವಿರೋಧ ಆಯ್ಕೆಯಾಗಿದ್ದು, 167 ಸ್ಥಾನಗಳಿಗೆ ಮತದಾನ ನಡೆಯಲಿದೆ. ಅನುಸೂಚಿತ ಜಾತಿಯ 144, ಅನುಸೂಚಿತ ಪಂಗಡದ 47, ಹಿಂದುಳಿದ ಅ ವರ್ಗ 55, ಹಿಂದುಳಿದ ಬ ವರ್ಗ 9, ಸಾಮಾನ್ಯ 257 ಸೇರಿದಂತೆ 512 ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

ಇದನ್ನೂ ಓದಿ:ಭಾರೀ ಹಿಮಪಾತ: ಜಮ್ಮು-ಕಾಶ್ಮೀರ ಡಿಡಿಸಿಯ 7ನೇ ಹಂತದ ಮತದಾನ ಮಂದಗತಿ

ಶಿರಹಟ್ಟಿ ತಾಲೂಕಿನ 14 ಗ್ರಾಪಂಗಳ ಒಟ್ಟು 189 ಸ್ಥಾನಗಳಲ್ಲಿ 7 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು, 182 ಸ್ಥಾನಗಳಿಗೆ ಚುನಾವಣೆ ನಡೆಸಲಾಗುತ್ತದೆ. ಅನುಸೂಚಿತ ಜಾತಿಯ 114, ಅನುಸೂಚಿತ ಪಂಗಡದ 55, ಹಿಂದುಳಿದ ಅ ವರ್ಗ 62, ಹಿಂದುಳಿದ ಬ ವರ್ಗ 17, ಸಾಮಾನ್ಯ 267 ಸೇರಿದಂತೆ 515 ಅಭ್ಯರ್ಥಿಗಳು ಅಂತಿಮವಾಗಿ ಚುನಾವಣೆ ಅಖಾಡಕ್ಕೆ ಉಳಿದಿದ್ದಾರೆ ಎಂದು ಜಿಲ್ಲಾ ಧಿಕಾರಿಗಳ ಕಚೇರಿಯ ಚುನಾವಣೆ ವಿಭಾಗ ತಿಳಿಸಿದೆ.

Advertisement

ಚಿಹ್ನೆಗಳೊಂದಿಗೆ ಅಖಾಡಕ್ಕಿಳಿದ ಅಭ್ಯರ್ಥಿಗಳು
ಶಿರಹಟ್ಟಿ: ತಾಲೂಕಿನಲ್ಲಿಯ ಗ್ರಾಪಂ ಚುನಾವಣೆ ಪ್ರಕ್ರಿಯೆಯಲ್ಲಿ ಸೋಮವಾರ ಎಲ್ಲ ಅಭ್ಯರ್ಥಿಗಳಿಗೆ ಚಿಹ್ನೆಗಳನ್ನು ನೀಡಿದ್ದು, ಆ ಚಿಹ್ನೆ ಆಧರಿಸಿ ಮತದಾರರ ಮನಸೆಳೆಯಲು ಅಭ್ಯರ್ಥಿಗಳು ಮಂದಾಗಿದ್ದಾರೆ. ತಾಲೂಕಿನಲ್ಲಿ 14 ಗ್ರಾಪಂಗಳಿದ್ದು, ಈ ಎಲ್ಲ
ಗ್ರಾಪಂಗಳಿಗೆ 189 ಸದಸ್ಯರ ಆಯ್ಕೆಗಾಗಿ ಚುನಾವಣೆ ನಡೆಯುತ್ತಿದೆ. ಪ್ರತಿಯೊಬ್ಬ ಅಭ್ಯರ್ಥಿಗಳು ತಮ್ಮ ಜಾತಿ, ಸಂಬಂಧ ಮತ್ತು ಗೆಳೆತನದ ಲೆಕ್ಕಾಚಾರದಲ್ಲಿ ಗೆಲ್ಲಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ತಾಲೂಕಿನ 14 ಗ್ರಾಪಂಗಳಿಗೆ ಜರುಗುತ್ತಿರುವ ಚುನಾವಣೆ
ಪ್ರಕ್ರಿಯೆಯಲ್ಲಿ ಅಂತಿಮವಾಗಿ 189 ಸ್ಥನಗಳಿಗೆ 515 ಅಭ್ಯರ್ಥಿಗಳು ಕಣದಲ್ಲಿ ಉಳಿದು ಚುನಾವಣೆಗೆ ಮುಂದಾಗಿದ್ದಾರೆ.

ಏಳು ಅಭ್ಯರ್ಥಿಗಳ ಅವಿರೋಧ: ತಾಲೂಕಿನ 14 ಗ್ರಾಪಂಗಳ 189 ಸದಸ್ಯರ ಆಯ್ಕೆಯ ಚುನಾವಣೆ ಪ್ರಕ್ರಿಯೆಯಲ್ಲಿ 7 ಜನ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ತಾಲೂಕಿನ ಕೊಗನೂರ ಗ್ರಾಮದಲ್ಲಿ 3 ಅಭ್ಯರ್ಥಿಗಳು ಮತ್ತು ಕೊಂಚಿಗೇರಿಯಲ್ಲಿ 2 ಅಭ್ಯರ್ಥಿಗಳು ಮತ್ತು ಮಾಗಡಿ-1, ಮತ್ತು ರಣತೂರ ಗ್ರಾಮದಲ್ಲಿ 1 ಅಭ್ಯರ್ಥಿಯು ಅವಿರೋಧವಾಗಿ ಆಯ್ಕೆಯಾಗಿ ಒಟ್ಟು 7 ಜನ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next