ಗದಗ: ಜಿಲ್ಲೆಯಲ್ಲಿ ಮಂಗಳವಾರ ಹೊಸದಾಗಿ 120 ಜನರಿಗೆ ಕೋವಿಡ್-19 ಸೋಂಕು ಖಚಿತವಾಗಿದೆ. 92 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಸೋಂಕಿಗೆ ಒಳಪಟ್ಟವರ ಸಂಖ್ಯೆ 8,567ಕ್ಕೆ ಏರಿದೆ. ಈ ಪೈಕಿ 7,570 ಜನರು ಗುಣಮುಖರಾಗಿ, ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. 872 ಪ್ರಕರಣಗಳು ಸಕ್ರಿಯವಾಗಿದ್ದು, ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಿಲ್ಲೆಯ ಗದಗ-65, ಮುಂಡರಗಿ-14, ನರಗುಂದ-6, ರೋಣ-19, ಶಿರಹಟ್ಟಿ-3, ಹೊರಜಿಲ್ಲೆಯ 13 ಜನರಿಗೆ ಸೋಂಕು ಕಂಡುಬಂದಿದೆ. ಈ ನಡುವೆ ಕೋವಿಡ್ ಸೋಂಕಿನಿಂದ ಬಳಲುತ್ತಿದ್ದ ನಾಲ್ವರು ಮೃತಪಟ್ಟಿದ್ದು, ಈವರೆಗೆ 155 ಜನರು ಕೋವಿಡ್‌ನಿಂದ ಮೃತಪಟ್ಟಿದ್ದಾರೆ.
ಬೆಟಗೇರಿ ನಿವಾಸಿ 63 ವರ್ಷದ ವೃದ್ಧ(ಪಿ-484772), ಹುಬ್ಬಳ್ಳಿ ನಿವಾಸಿ 74 ವರ್ಷದ ವೃದ್ಧ(ಪಿ-451085), ಶಿರಹಟ್ಟಿ ತಾಲೂಕಿನ ಯಳವತ್ತಿ ನಿವಾಸಿ 68 ವರ್ಷದ ವೃದ್ಧೆ(ಪಿ-505729), ಶಿಗ್ಲಿ ನಿವಾಸಿ 50 ವರ್ಷದ ಮಹಿಳೆ(ಪಿ-467440) ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಧಿಕಾರಿ ಎಂ. ಸುಂದರೇಶ್ ಬಾಬು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.