Advertisement
ಈ ಹಿಂದೆ ಶಿಥಿಲಗೊಂಡಿದ್ದ ಹಳೆ ಬಸ್ ನಿಲ್ದಾಣ ಕಟ್ಟಡವನ್ನು ನೆಲಸಮಗೊಳಿಸಿ, ಅದೇ ಸ್ಥಳದಲ್ಲಿ ಹೊಸ ಕಟ್ಟಡ ನಿರ್ಮಿಸಲಾಗುತ್ತಿದೆ. ಕಳೆದ ಎರಡೂ ವರ್ಷಗಳಿಂದ ಕಾಮಗಾರಿ ನಡೆಯುತ್ತಿದ್ದರೂ ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ವೇಳೆಗೆ ಕಟ್ಟಡಕ್ಕೆ ಉದ್ಘಾಟನೆ ಭಾಗ್ಯ ಕಾಣಬೇಕಿತ್ತು. ಆದರೆ, ಆಮೆಗತಿಯಲ್ಲಿ ಕಾಮಗಾರಿ ನಡೆಯುತ್ತಿರುವುದು ವಿಳಂಬಕ್ಕೆ ಕಾರಣವಾಗಿದ್ದು, ಪ್ರಯಾಣಿಕರಿಗೆ ಸಮಸ್ಯೆಯಾಗಿ ಪರಿಣಮಿಸಿದೆ.
Related Articles
Advertisement
ಕಾಮಗಾರಿಯನ್ನು ತ್ವರಿಗತಿಯಲ್ಲಿ ಪೂರ್ಣ ಗೊಳಿಸಲು ಕ್ರಮ ಕೈಗೊಳ್ಳುವಂತೆ ಹಲವು ಬಾರಿ ಸ್ಥಳೀಯ ವರ್ತಕರ ಸಂಘ, ಸಂಸ್ಥೆಗಳು ಸಾರಿಗೆ ಅಧಿಕಾರಿಗಳ ಗಮನಕ್ಕೆ ತಂದರೂ ಸ್ಪಂದಿಸುತ್ತಿಲ್ಲ ಎಂಬ ಆರೋಪದ ಮಾತುಗಳು ಕೇಳಿ ಬರುತ್ತಿವೆ.
ರಸ್ತೆ ಬದಿಯೇ ಬಸ್ ನಿಲ್ದಾಣ: ಹಳೇ ಬಸ್ ನಿಲ್ದಾಣವನ್ನೇ ನೆಚ್ಚಿಕೊಂಡು ಬಾಗಲಕೋಟೆ,ಬದಾಮಿ, ರೋಣ, ಗಜೇಂದ್ರಗಡ, ಗದಗ ತಾಲೂಕಿನ ಸುತ್ತಮುತ್ತಲಿನ ಗ್ರಾಮೀಣ ಭಾಗದ ಜನರು ತಮ್ಮ ಊರಿಗೆ ತೆರಳಲು ಇಲ್ಲಿನ ರೋಟರಿ ಸರ್ಕಲ್, ಹಳೇ ಡಿಸಿ ಕಚೇರಿ, ಗಾಂಧಿ ವೃತ್ತದಲ್ಲಿನ ರಸ್ತೆ ಬದಿಯಲ್ಲಿ ಬಸ್ ಕಾಯುವಂತಾಗಿದ್ದು, ವಾಹನ ದಟ್ಟಣೆಗೂ ಪರೋಕ್ಷ ಕಾರಣವಾಗಿದೆ. ಇನ್ನು, ಪ್ರಯಾಣಿಕರ ಅನುಕೂಲಕ್ಕಾಗಿ ಹಳೆ ಬಸ್ ನಿಲ್ದಾಣ ಹಾಗೂ ಹೊಸ ಬಸ್ ನಿಲ್ದಾಣಗಳ ನಡುವೆ ಸಿಟಿ ಬಸ್ ವ್ಯವಸ್ಥೆ ಮಾಡಲಾಗಿದೆ. ಹಳೆ ಬಸ್ ನಿಲ್ದಾಣದ ಮುಂಭಾಗದ ರಸ್ತೆಯಲ್ಲೇ ಸಿಟಿ ಬಸ್ ಗಳ ನಿಲುಗಡೆಯಾಗುತ್ತಿವೆ. ಅದರೊಂದಿಗೆ ಆಟೋ, ಟಂಟಂ ಹಾಗೂ ಗ್ರಾಮೀಣ ಪ್ರದೇಶಕ್ಕೆ ತೆರಳುವ ಖಾಸಗಿ ವಾಹನಗಳೂ ನಿಲುಗಡೆಯಾಗುತ್ತಿದ್ದರಿಂದ ಇಕ್ಕಟ್ಟಾದ ರಸ್ತೆಯಲ್ಲಿ ಟ್ರಾಫಿಕ್ ಜಾಮ್‌ಗೆ ಕಾರಣವಾಗುತ್ತಿದೆ.
ಸ್ಥಳೀಯ ವರ್ತಕರು ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಬೇಕು ಗದಗ: ಕಟ್ಟಡ ನಿರ್ಮಾಣ ವಿಳಂಬದಿಂದಾಗಿ ನೂರಾರು ಕುರ್ಚಿಗಳು ಧೂಳು ತಿನ್ನುತ್ತಿವೆ. ಎಂಬುದು ಸ್ಥಳೀಯರ ಬೇಡಿಕೆಯಾಗಿದೆ. ವೀರೇಂದ್ರ ನಾಗಲದಿನ್ನಿ