Advertisement

100 ಹಾಸಿಗೆಗಳ ಕೋವಿಡ್‌ ಸೆಂಟರ್‌ಗೆ ಚಾಲನೆ

08:31 PM May 21, 2021 | Team Udayavani |

ಶಿರಹಟ್ಟಿ: ಪಟ್ಟಣದ ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಆರಂಭಿಸಲಾದ ಸುಸಜ್ಜಿತ 100 ಹಾಸಿಗೆಗಳ ಕೋವಿಡ್‌ ಕೇರ್‌ ಸೆಂಟರ್‌ಗೆ ತಹಶೀಲ್ದಾರ್‌ ಜೆ.ಬಿ.ಮಜ್ಜಗಿ ಚಾಲನೆ ನೀಡಿದರು.

Advertisement

ಕೋವಿಡ್‌ ಎರಡನೇ ಅಲೆಯಿಂದ ತಾಲೂಕಿನಾದ್ಯಂತ ಸೋಂಕಿತರ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ಸೊಂಕಿತರ ಆರೈಕೆಗಾಗಿ ಪಟ್ಟಣದ ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ 100 ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ.

ವಸತಿ ಶಾಲೆಯಲ್ಲಿ ಸೋಂಕಿತರಿಗಾಗಿ ಎಲಾ ಅಗತ್ಯ ಮೂಲಭೂತ ಸೌಕರ್ಯವನ್ನು ಒದಗಿಸಲಾಗಿದೆ. ಊಟ, ಉಪಾಹಾರ ಮತ್ತು ಔಷ ಧ, ಅಗತ್ಯ ಸಿಬ್ಬಂದಿ ನಿಯೋಜಿಸಲಾಗಿದೆ. ಸೋಂಕಿತರಿಗಾಗಿ ನೂತನ 100 ಬೆಡ್‌, 100 ದಿಂಬು ಮತ್ತು 100 ಹೊದಿಕೆಗಳನ್ನು ಪೂರೈಸಲಾಗಿದೆ ಎಂದು ತಹಶೀಲ್ದಾರ್‌ ಜೆ.ಬಿ.ಮಜ್ಜಗಿ ಹೇಳಿದರು.

ಈ ಸಂದರ್ಭದಲ್ಲಿ ತಾಪಂ ಇಒ ಡಾ.ನಿಂಗಪ್ಪ ಓಲೇಕಾರ, ತಾಲೂಕು ಸಮಾಜಕಲ್ಯಾಣಾ ಧಿಕಾರಿ ಎಸ್‌.ಬಿ. ಹರ್ತಿ, ಎಇಇ ಶ್ರೀಧರ ತಳವಾರ, ಎಇಇ ಮಲ್ಲಿಕಾರ್ಜು ಕಾಳಶೆಟ್ಟಿ, ಪಪಂ ಮುಖ್ಯಾಧಿಕಾರಿ ಮಲ್ಲೇಶ ಮತ್ತು ಆರ್‌ಐ ಮಹಾಂತೇಶ ಮುಗುದುಂ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next