ಗದಗ: ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಜಿಪಂ ಸಿಇಒ ಅವರೇ ಜಿಲ್ಲಾ ಮಟ್ಟದ ಕಾರ್ಯಾಂಗದ ಮುಖ್ಯಸ್ಥರಾಗಿರುವುರಿಂದ ಲಾಕ್‌ಡೌನ್ ನಿಯಮಾವಳಿಗಳ ನಿರ್ಣಯವನ್ನು ಸರಕಾರ ಜಿಲ್ಲಾಧಿಕಾರಿಗಳಿಗೆ ನೀಡಿದೆ.
ಆದರೆ, ಜಿಲ್ಲಾ ಉಸ್ತುವಾರಿ ಮಂತ್ರಿಗಳ ಬಗ್ಗೆ ಮುಖ್ಯಮಂತ್ರಿಗಳಿಗೆ ವಿಶ್ವಾಸವಿಲ್ಲ ಎನ್ನುವ ಶಾಸಕ ಎಚ್.ಕೆ.ಪಾಟೀಲ ಅವರು ಸಚಿವರಾಗಿದ್ದಾಗ ಎಲ್ಲ ಕೆಲಸವನ್ನೂ ಅವರೇ ಮಾಡುತ್ತಿದ್ದರೇ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ತಿರುಗೇಟು ನೀಡಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರ ಏನೇ ಆದೇಶ ಮಾಡಿದರೂ ಅದನ್ನು ಕಾರ್ಯಾಂಗದ ಮೂಲಕವೇ ಅನುಷ್ಠಾನಗೊಳಿಸಲಾಗುತ್ತದೆ. ಹಿರಿಯ ನಾಯಕರು ಮಾಜಿ ಸಚಿವರಾದ ಎಚ್.ಕೆ.ಪಾಟೀಲ ಅವರಿಗೆ ಈ ರೀತಿಯ ಹೇಳಿಕೆಗಳು ಶೋಭೆಯಲ್ಲ. ತಾವೂ ಸಚಿವರಾಗಿ ಕೆಲಸ ಮಾಡಿದವರು. ತಮ್ಮ ಅ ಧಿಕಾರವ ಯಲ್ಲಿ ಅ ಕಾರಿಗಳು ಕೆಲಸ ಮಾಡುತ್ತಿದ್ದರೋ, ಎಲ್ಲವನ್ನೂ ತಾವೇ ಮಾಡುತ್ತಿದ್ದರೋ. ಉಸ್ತುವಾರಿ ಸಚಿವರಾದವರು ಎಚ್.ಕೆ.ಪಾಟೀಲ ಅವರ ಮನೆ ಮುಂದೆ ಕೂರಬೇಕಾ ಎಂದು ಖಾರವಾಗಿ ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಎಚ್.ಕೆ. ಪಾಟೀಲ ಸಚಿವರಾಗಿದ್ದರೆ, ಕೆವಿಕೆಯಲ್ಲಿ ಬಾಗಿಲು ಮುಚ್ಚಿಕೊಂಡು ಕೂರುತ್ತಿದ್ದರು. ಆಗ ಮನೆಯಂಗಳ ಹಾಗೂ ರಸ್ತೆಯಲ್ಲೇ ಹೆಣಗಳು ಬಿದ್ದಿರುತ್ತಿದ್ದವು. ಎಚ್.ಕೆ.ಪಾಟೀಲರು ಹೇಳಿದವರಿಗೆ ಟೆಂಡರ್ ಕೊಡಿಸುವುದು, ಅವರು ಹೇಳಿದವರೊಂದಿಗೆ ಅಧಿ ಕಾರಿಗಳ ಸಭೆ ನಡೆಸಿದ್ದರೆ, ಸಚಿವರು ಒಳ್ಳೆಯವರು ಎನ್ನುತ್ತಿದ್ದರೇನೋ. ಅಧಿ ಕಾರಿಗಳ ಸಭೆಯಲ್ಲೂ ತಮ್ಮದೇ ಪುರಾಣ ಹೇಳುತ್ತಾರೆ. ಸಣ್ಣ, ಪುಟ್ಟ ಲೋಪಗಳಿಗೆ ಅ ಧಿಕಾರಿಗಳನ್ನು ಸಸ್ಪೆಂಡ್ ಮಾಡುವಂತೆ ಹೇಳುತ್ತಾರೆ. ಅ ಧಿಕಾರಿಗಳ ಕೆಲಸ ಎಚ್.ಕೆ. ಪಾಟೀಲ ಮಾಡುತ್ತಾರಾ ಎಂದು ವಾಗ್ಧಾಳಿ ನಡೆಸಿದರು.
ಆಮ್ಲಜನಕಕ್ಕೆ ಕೊರತೆ ಇಲ್ಲ: ಜಿಲ್ಲೆಯಲ್ಲಿ ಕೋವಿಡ್ ಮೊದಲ ಅಲೆ ಬಂದಾಗ ಜಿಮ್ಸ್‌ಗೆ 13 ಕೆ.ಎಲ್. ಸಾಮರ್ಥ್ಯದ ಆಮ್ಲಜನಕ ಸಂಗ್ರಹಣ ಘಟಕ ಮಂಜೂರು ಮಾಡಿಸಲಾಯಿತು. 2ನೇ ಅಲೆ ಸಂದರ್ಭದಲ್ಲಿ ಸರ್ಕಾರಕ್ಕೆ ಮನವಿ ಮಾಡಿದಾಗ ಗದಗ ಜಿಲ್ಲೆಗೆ 20 ಕೆ.ಎಲ್. ಸಾಮರ್ಥ್ಯದ ಮತ್ತೂಂದು ಆಮ್ಲಜನಕ ಸಂಗ್ರಹಣಾ ಘಟಕ ಮಂಜೂರು ಮಾಡಿದೆ. ಆದಷ್ಟು ಬೇಗ ಟೆಂಡರ್ ಕರೆದು, ಕೆಲಸ ಆರಂಭಿಸಲಾಗುವುದು. ಗಣಿ ಮತ್ತು ಭೂವಿಜ್ಞಾನ ಸಚಿವನಾಗಿದ್ದ ಸಂದರ್ಭದಲ್ಲಿ ಬೆಳೆದಿದ್ದ ಭಾಂದ್ಯವದ ಅಡಿಯಲ್ಲಿ ಕುದುರೆಮುಖ ಐರನ್ ಕಂಪನಿಯವರಿಗೆ ಮನವಿ ಮಾಡಲಾಗಿದ್ದು, ಅವರು ಕೂಡ 15 ಕೆ.ಎಲ್. ಸಾಮರ್ಥ್ಯದ ಆಮ್ಲಜನಕ ಸಂಗ್ರಹಣಾ ಘಟಕ ಒದಗಿಸುವುದಾಗಿ ಭರವಸೆ ನೀಡಿದ್ದಾರೆ.
ಒಟ್ಟು 48 ಕೆ.ಎಲ್. ಅಂದರೆ 4.80 ಲಕ್ಷ ಲೀಟರ್ ಆಮ್ಲಜನಕ ಸಂಗ್ರಹಣಾ ಸಾಮರ್ಥ್ಯವನ್ನು ಗದಗ ಜಿಲ್ಲೆ ಹೊಂದಲಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಪ್ರಮುಖರಾದ ಮಾಧಚ ಗಣಾಚಾರಿ, ಎಂ.ಎಸ್. ಕರಿಗೌಡ್ರ, ರಾಜು ಕುರಡಗಿ, ವಿಜಯಲಕ್ಷೀ¾ ಮಾನ್ವಿ, ಶಾರದಾ ಹಿರೇಮಠ ಉಪಸ್ಥಿತರಿದ್ದರು.