ಮುಂಡರಗಿ: ಪಟ್ಟಣದ ತಾಲೂಕು ಸರಕಾರಿ ಆಸ್ಪತ್ರೆಗೆ ಶಾಸಕ ರಾಮಣ್ಣ ಲಮಾಣಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪಿಪಿಇ ಕಿಟ್ ಧರಿಸಿದ ಶಾಸಕ ರಾಮಣ್ಣ ಲಮಾಣಿ ಕೋವಿಡ್ ವಾರ್ಡ್‌ಗೆ ಭೇಟಿ ನೀಡಿ ದಾಖಲಾದ ಸೋಂಕಿತ ರೋಗಿಗಳ ಯೋಗಕ್ಷೇಮ ವಿಚಾರಿಸಿ, ಆತ್ಮಸ್ಥೈರ್ಯ ತುಂಬಿದರು.
ಅಲ್ಲದೇ, ಆಸ್ಪತ್ರೆಯಲ್ಲಿ ನೀಡುತ್ತಿರುವ ಚಿಕಿತ್ಸೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ಈ ಸಂದರ್ಭದಲ್ಲಿ ತಾಲೂಕು ವೈದ್ಯಾ ಧಿಕಾರಿ ಡಾ.ರಾಜೇಶ, ಆಸ್ಪತ್ರೆ ವೈದ್ಯಾ ಧಿಕಾರಿ ಡಾ.ಕೀರ್ತಿಹಾಸ ಶಾಸಕ ರಾಮಣ್ಣ ಲಮಾಣಿ ಅವರಿಗೆ ಮಾಹಿತಿ ನೀಡಿ, ಆಸ್ಪತ್ರೆಯ ಕೋವಿಡ್ ವಾರ್ಡ್‌ನಲ್ಲಿ ಹದಿನಾಲ್ಕು ಜನ ಸೊಂಕೀತರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಎರಡು ದಿನಗಳ ವರೆಗೆ ಆಗುವಷ್ಟು ಆಕ್ಸಿಜನ್ ಇದ್ದು, ಈಗಾಗಲೇ ಮೇಲಧಿ ಕಾರಿಗಳಿಗೆ ಮಾಹಿತಿ ರವಾನಿಸಲಾಗಿದೆ. ಆಸ್ಪತ್ರೆಯಲ್ಲಿ ವಿದ್ಯುತ್ ನಿಲುಗಡೆಯಾದರೆ ಸಮಸ್ಯೆಯಾಗುತ್ತಿದೆ. ಬಳಕೆ ಮಾಡುವ ನೀರಿನ ಸಮಸ್ಯೆ ನಿವಾರಿಸಲು ಸಿನ್ ಟೆಕ್ಸ್ ನೀರಿನ ಟ್ಯಾಂಕ್‌ಗಳನ್ನು ಆಸ್ಪತ್ರೆಯ ಮೇಲೆ ಅಳವಡಿಸಿದರೆ ರೋಗಿಗಳಿಗೆ ಅನುಕೂಲವಾಗುತ್ತದೆ ಎಂದರು.
ಆಗ ಶಾಸಕ ರಾಮಣ್ಣ ಲಮಾಣಿ ಜಿಲ್ಲಾ ಧಿಕಾರಿ ಎಂ.ಸುಂದರೇಶಬಾಬು ಮತ್ತು ಜಿಲ್ಲಾ ವೈದ್ಯಾ ಧಿಕಾರಿ ಜತೆ ´ೋನಿನಲ್ಲಿ ಮಾತನಾಡಿ, ಆಕ್ಸಿಜನ್, ವಿದ್ಯುತ್ ಸಮಸ್ಯೆ, ನೀರಿನ ಸಮಸ್ಯೆ ಬಗ್ಗೆ ಚರ್ಚಿಸಿ ಬಗೆಹರಿಸುವಂತೆ ಕೋರಿದರು.
ಈ ಸಮಯ ಬಿಜೆಪಿ ಮಂಡಲ ಅಧ್ಯಕ್ಷ ಹೇಮಗಿರೀಶ ಹಾವಿನಾಳ, ಪುರಸಭೆ ಅದ್ಯಕ್ಷೆ ಕವಿತಾ ಉಳ್ಳಾಗಡ್ಡಿ, ಕರಬಸಪ್ಪ ಹಂಚಿನಾಳ, ಡಾ.ಕುಮಾರಸ್ವಾಮಿ ಹಿರೇಮಠ, ಸದಸ್ಯರಾದ ಲಿಂಗರಾಜಗೌಡ ಪಾಟೀಲ, ಪ್ರಲ್ಹಾದ ಹೊಸಮನಿ, ಪವನ ಮೇಟಿ, ಆಸ್ಪತ್ರೆ ವೈದ್ಯಾ ಧಿಕಾರಿ, ಡಾ.ಕೀರ್ತಿಹಾಸ, ತಾಲೂಕು ವೈದ್ಯಾ ಧಿಕಾರಿ ಡಾ.ರಾಜೇಶ, ಪುರಸಭೆ ಮುಖ್ಯಾ ಧಿಕಾರಿ ಎನ್.ಕೆ.ಡೊಂಬರ್, ಶಿವನಗೌಡ ಗೌಡರ ಮತ್ತಿತರರು ಇದ್ದರು.