Advertisement

ಬಿಜೆಪಿಗೆ ಬುದ್ಧಿ ಕಲಿಸುವ ಸಂದೇಶ

08:31 PM May 03, 2021 | Team Udayavani |

ಗದಗ: ಕೊರೊನಾದಂತಹ ಸಂದರ್ಭದಲ್ಲಿ ಬಿಜೆಪಿ ದುರಾಡಳಿತದಿಂದ ಜನರು ರೋಸಿ ಹೋಗಿದ್ದು, ಭ್ರಷ್ಟಾಚಾರ, ಜನರ ರಕ್ಷಣೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ವಿಫಲವಾಗಿವೆ. ರವಿವಾರ ಪ್ರಕಟವಾದ ಐದು ರಾಜ್ಯಗಳು ಮತ್ತು ಕರ್ನಾಟಕದ ಉಪಚುನಾವಣಾ ಫಲಿತಾಂಶಗಳ ಮೂಲಕ ರಾಜ್ಯದ ಜನರು ಬಿಜೆಪಿಗೆ ಬುದ್ಧಿ ಕಲಿಸುವ ಸಂದೇಶ ರವಾನಿಸಿದ್ದಾರೆ.

Advertisement

ಜತೆಗೆ ರಾಜ್ಯದಲ್ಲಿ ಕಾಂಗ್ರೆಸ್‌ ಅಲೆ ಆರಂಭವಾಗಿದೆ ಎಂಬುದಕ್ಕೆ ಇದೇ ಸಾಕ್ಷಿ ಎಂದು ಕಾಂಗ್ರೆಸ್‌ ಹಿರಿಯ ನಾಯಕ ಎಚ್‌.ಕೆ.ಪಾಟೀಲ ಹೇಳಿದರು. ನಗರದಲ್ಲಿ ಚುನಾವಣಾ ಫಲಿತಾಂಶ ಕುರಿತು ಪ್ರತಿಕ್ರಿಯಿಸಿದ ಅವರು, ರಾಜ್ಯದ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ 30 ಸಾವಿರ ಮತಗಳ ಅಂತರದಿಂದ ಜಯಭೇರಿ ಬಾರಿಸಿದೆ. ಜತೆಗೆ ಬೆಳಗಾವಿಯಲ್ಲಿ ಕೊನೆವರೆಗೂ ತೀವ್ರ ಪೈಪೋಟಿ ನೀಡಿದ ಕಾಂಗ್ರೆಸ್‌ ಗೆ ಕೊನೆ ಗಳಿಗೆಯಲ್ಲಿ ಸೋಲಾಗಿದೆ. ಆದರೆ, ಕಳೆದ ಚುನಾವಣೆಯಲ್ಲಿ ಮೂರು ಲಕ್ಷ ಮತಗಳ ಅಂತರದಿಂದ ಗೆದ್ದಿದ್ದ ಬಿಜೆಪಿ ಈಗ ಯಾವ ಸ್ಥಿತಿಗೆ ಇಳಿದಿದೆ. ರಾಜ್ಯದಲ್ಲಿ ಯಡಿಯೂರಪ್ಪ ಅವರ ಆಡಳಿತದಿಂದ ಜನ ರೋಸಿ ಹೋಗಿದ್ದಾರೆ.

ಬಂಗಾಳದ ವಿಮೋಚನೆಯಲ್ಲಿ ನಾನೂ ಪಾಲುದಾರನೆಂಬ ಮೋದಿ ಅವರ ಸುಳ್ಳಿಗೆ ಜನರು ತಕ್ಕ ಪಾಠ ಕಲಿಸಿದ್ದಾರೆ ಎಂದರು. ಚುನಾವಣಾ ಆಯೋಗದ ದುರುಪಯೋಗ, ಜನರಿಗೆ ಮಾಡಿದ ಮೋಸ, ಸುಳ್ಳು ಹೇಳುವುದನ್ನು ನಿಲ್ಲಿಸಬೇಕು. ಆ ಸುಳ್ಳಿಗೆ ಪ್ರತಿಯಾಗಿ ಪಶ್ಚಿಮ ಬಂಗಾಳದ ಮಹಾಜನತೆ ಸರಿಯಾದ ಉತ್ತರ ನೀಡಿದ್ದಾರೆಂದು ಲೇವಡಿ ಮಾಡಿದರು. ಪಂಚ ರಾಜ್ಯ ಚುನಾವಣೆಯಲ್ಲಿ ಬಿಜೆಪಿ ಚುನಾವಣೆಯ ಎಲ್ಲಾ ಪಾವಿತ್ರ್ಯವನ್ನು ಕಳೆದಿದೆ.

ಈ ಎಲ್ಲಾ ದುರುಪಯೋಗಗಳ ಮಧ್ಯೆಯೂ ಬಿಜೆಪಿ ಮೂರಂಕಿ ದಾಟಿಲ್ಲ. ಆ ರೀತಿಯ ಜನವಿರೋಧಿ  ನೀತಿಗೆ ಪ್ರಜ್ಞಾವಂತ ಮತದಾರರು ತಕ್ಕ ಬುದ್ಧಿ ಕಲಿಸಿದ್ದಾರೆ. ಮಮತಾ ಬ್ಯಾನರ್ಜಿ ಅವರಿಗೆ ವಿಶೇಷ ಅಭಿನಂದನೆ ಸಲ್ಲಿಸುತ್ತೇನೆ ಎಂದರು

Advertisement

Udayavani is now on Telegram. Click here to join our channel and stay updated with the latest news.

Next