Advertisement
ಜಿಲ್ಲೆಯ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಶಿಗ್ಲಿ, ದೊಡ್ಡೂರು, ಕುರುಡಗಿ, ಸೂರಣಗಿ, ಬಾಲೆಹೊಸೂರು ಗ್ರಾಮಗಳಲ್ಲಿ ರೋಡ್ ಶೋ ಮಾಡಿ ಚುನಾವಣಾ ಪ್ರಚಾರ ನಡೆಸಿ ಅವರು ಮಾತನಾಡಿದರು.
Related Articles
Advertisement
ಪಾಕಿಸ್ತಾನದ ಜನರು ನರೇಂದ್ರ ಮೋದಿಯವರು ಆ ದೇಶದ ಪ್ರಧಾನಿಯಾಗಿ ಅವರ ದೇಶ ಅಭಿವೃದ್ಧಿ ಮಾಡಿಕೊಡಬೇಕು ಎಂದು ಮನವಿ ಮಾಡುತ್ತಿದ್ದಾರೆ. ಒಬ್ಬ ಚಾಯ್ ಮಾರುವ ಹುಡುಗ ಹಂತ ಹಂತವಾಗಿ ಮೇಲೆ ಬಂದವರು ನರೇಂದ್ರ ಮೋದಿಯವರು. ಅವರ ಕರ್ತವ್ಯ ಪ್ರಜ್ಞೆ ಎಷ್ಟಿದೆ ಎಂದರೆ ಅವರ ತಾಯಿ ನಿಧನ ಹೊಂದಿದಾಗ ಮೂರು ಗಂಟೆಯಲ್ಲಿ ಅಂತ್ಯಸಂಸ್ಕಾರ ಮಾಡಿ, ಮತ್ತೆ ದೇಶದ ಕೆಲಸ ಆರಂಭಿಸಿದರು ಹೇಳಿದರು.
ಎದುರಿಗೆ ಆಟಗಾರರೇ ಇಲ್ಲ
ಕಬಡ್ಡಿ ಗ್ರೌಂಡ್ ನಲ್ಲಿ ಎದುರಿಗೆ ಆಟವಾಡಲು ಆಟಗಾರರೇ ಇಲ್ಲ. ನಮ್ಮ ಕಡೆ ಮೋದಿಯವರನ್ನು ಪ್ರಧಾನಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದ್ದೇವೆ. ಆದರೆ, ಪ್ರತಿಪಕ್ಷದಲ್ಲಿ ಪ್ರಧಾನಿ ಅಭ್ಯರ್ಥಿಯೇ ಇಲ್ಲ. ಅವರ ಗ್ರೌಂಡ್ ಪೂರ್ಣ ಖಾಲಿಯಾಗಿದೆ ಎಂದು ಹೇಳಿದರು.
ಅಭಿವೃದ್ಧಿ ಸ್ಥಗಿತ
ಸಿಂಗಟಾಲೂರು ಯೋಜನೆ ನಮ್ಮ ಅವಧಿಯಲ್ಲಾಗಿದೆ. ಗ್ರಾಮಿಣ ಅಭಿವೃದ್ಧಿ, ಶಿಕ್ಷಣ, ಆರೋಗ್ಯ ಸಂಪೂರ್ಣ ಸ್ಥಗಿತವಾಗಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಬರ ಬಂದಿದೆ, ದನಗಳಿಗೆ ಮೇವು ನೀರಿಲ್ಲ. ರೈತ ಸಂಘದವರು ಸರ್ಕಾರ ನೀಡಿದ್ದ ಎರಡು ಸಾವಿರ ರೂಗೆ ಒಂದು ನೂರು ರೂಪಾಯಿ ಸೇರಿಸಿ ಸರ್ಕಾರಕ್ಕೆ ಹಣ ಕಳಿಸಿದ್ದಾರೆ. ಕೇಂದ್ರ ಸರ್ಕಾರ ಹಿಂದಿನ ಯುಪಿಎ ಅಧಿಕಾರದ ಹತ್ತು ಪಟ್ಟು ಹಣ ನೀಡಿದೆ. ಈ ಸರ್ಕಾರ 1.5 ಲಕ್ಷ ಕೋಟಿ ರೂ. ಸಾಲ ಮಾಡಿದ್ದಾರೆ. ಎಲ್ಲ ಹಣವನ್ನು ಗ್ಯಾರೆಂಟಿಗೆ ನೀಡಿದ್ದಾರೆ. ಹಿಂದೆ ಸಿದ್ದರಾಮಯ್ಯ ಮಾಡಿದ ಸಾಲವನ್ನು ನಾನು ತೀರಿಸಿದ್ದೇನೆ ಎಂದರು.
ಶಿಗ್ಲಿ ಸಂಬಂಧ ನೆನೆದ ಬೊಮ್ಮಾಯಿ
ಶಿಗ್ಲಿ ಗ್ರಾಮದೊಂದಿಗೆ ತಮ್ಮ ತಂದೆಯ ಕಾಲದಿಂದಲೂ ಉತ್ತಮ ಸಂಬಂಧ ಹೊಂದಿದ್ದು, ರಾಜಕೀಯವಾಗಿ ಬಹಳಷ್ಟು ಪ್ರಜ್ಞೆ ಇರುವ ಗ್ರಾಮ, ಈ ಗ್ರಾಮದ ಜೊತೆ ನಮ್ಮ ತಂದೆಯವರೊಂದಿಗೆ ಸಂಬಂಧವಿದೆ. ಇಲ್ಲಿನ ಬಳಿಗಾರ ಹಾಗೂ ಇತರ ಕುಟುಂಬಳೊಂದಿಗೆ ಸಂಬಂಧವಿದೆ. ನಮ್ಮ ತಂದೆಯವರ ವಿಶೇಷ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ವಿ.ಪಿ ಬಳಿಗಾರ ಅವರು ದಕ್ಷ ಅಧಿಕಾರಿಯಾಗಿದ್ದರು ಎಂದು ಸ್ಮರಿಸಿದರು.