ಗದಗ: ಸುಪ್ರೀಂ ಕೋರ್ಟ್ ಮೆಟ್ಟಲಿಲೇರಿದ್ದ ಚೆಕ್ ಬೌನ್ಸ್ ಪ್ರಕರಣವೊಂದು ಪ್ರಕರಣ ಜಿಲ್ಲಾ ಕೋರ್ಟ್ ನಲ್ಲಿ ಅಂತ್ಯಕಂಡ ಘಟನೆ ನಡೆದಿದೆ.
ಹಾಸನ ಮೂಲಕ ವೆಂಕಟೇಗೌಡ ಅವರು ಪ್ರಶಾಂತಗೌಡ ಪಾಟೀಲ ಅವರಿಗೆ ಅನ್ಯ ಕೆಲಸಗಳಿಗೆ ಬಳಕೆ ಮಾಡಿಕೊಂಡಿದ್ದ ಜೆಸಿಬಿ ಬಾಡಿಗೆ ಹಣವನ್ನು ನೀಡುವ ಸಂದರ್ಭದಲ್ಲಿ ನೀಡಿದ್ದ 2.70 ಲಕ್ಷ ಮೌಲ್ಯದ ಚೆಕ್ ಬೌನ್ಸ್ ಆಗಿತ್ತು.
ಈ ಕುರಿತಂತೆ ವೆಂಕಟೇಗೌಡ ಅವರನ್ನು ಆರೋಪಿ ಮಾಡಿ ಜೆಎಂಎಫ್ಸಿ 1ನೇ ಕೋರ್ಟನಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು. ಇಲ್ಲಿ ವಿಚಾರಣೆಯಾಗಿ ಬಿಡುಗಡೆಯಾಗಿತ್ತು.
ಮುಂದೆ ಪ್ರಶಾಂತಗೌಡ ಅವರು ಹೈಕೋರ್ಟ್ ನಲ್ಲಿ ಅಪೀಲ್ ಹೋಗಿದ್ದರು. ಅಲ್ಲಿ ವೆಂಕಟೇಗೌಡ ಅವರಿಗೆ 2 ವರ್ಷ ಜೈಲು ಶಿಕ್ಷೆಯಾಗಿ, 6.50 ಲಕ್ಷ ರೂ. ಹಣವನ್ನು ಕೋರ್ಟ್ ನಲ್ಲಿ ಜಮೆ ಮಾಡುವಂತೆ ಆದೇಶಿಸಿತು.
ಹೈಕೋರ್ಟ್ ಆದೇಶ ಪ್ರಶ್ನಿಸಿ ವೆಂಕಟೇಗೌಡ ಅವರು ಸುರ್ಪೀಕೋರ್ಟ್ ಅಪೀಲ್ ಹೋಗಿದ್ದರು. ಸುರ್ಪೀಂ ಕೋರ್ಟ್ ಸಾಧ್ಯವಿದ್ದರೆ ಗದಗ ಜಿಲ್ಲಾ ಕೋರ್ಟ್ ನಲ್ಲಿ ರಾಜಿ ಸಂಧಾನ ಮಾಡಲು ರಿಪೋರ್ಟ್ ಮಾಡಲು ಸೂಚಿಸಿತು. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಜಿಲ್ಲಾ ಕೋರ್ಟ್ ಮಧ್ಯಸ್ಥಿಕೆಯಲ್ಲಿ ರಾಜಿಸಂಧಾನ ಹಾಕಲಾಗಿತ್ತು. 8 ಲಕ್ಷ ರೂ. ದೂರುದಾರರಿಗೆ ಪರಿಹಾರ ಹಣ ನೀಡಬೇಕು. ಮತ್ತು ವೆಂಕಟೇಗೌಡ ಅವರಿಗೆ ಆದ ಸಜೆಯನ್ನು ರದ್ದುಗೊಳಿಸುವ ಪ್ರಾರ್ಥನೆಯೊಂದಿಗೆ ಜಂಟಿ ಮೆಮೋ ಸಲ್ಲಿಸಲಾಯಿತು.
ಮಂಜುನಾಥ ರಾಮೇನಹಳ್ಳಿ ಪಿರ್ಯಾದಿದಾರರಾಗಿ ಕಾರ್ಯನಿರ್ವಹಿಸಿದರು.